ನೀರು ಸರಬರಾಜು ಮಂಡಳಿಗೂ ಬಿಎಂಪಿಯಿಂದ ದಂಡ!
ಬೆಂಗಳೂರು : ನಿಯಮ ಉಲ್ಲಂಘನೆ ಮಾಡಿ ರಸ್ತೆಯನ್ನು ಅಗೆದದ್ದಕ್ಕೆ, ಬೆಂಗಳೂರು ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ 1.3 ಲಕ್ಷ ರೂ. ದಂಡವನ್ನು ಪಾವತಿಸಬೇಕಾಗಿದೆ.
ಬೆಂಗಳೂರು ಮಹಾನಗರ ಪಾಲಿಕೆ ದಂಡ ವಿಧಿಸಿದ್ದು, ರಸ್ತೆಯಲ್ಲಿ ಗುಂಡಿ ತೋಡಲು ಬಳಸಿದ್ದ ಸಲಕರಣೆಗಳನ್ನು ವಶಪಡಿಸಿಕೊಂಡಿದೆ ಎಂದು ಮಹಾನಗರ ಪಾಲಿಕೆಯ ಮುಖ್ಯ ಇಂಜಿನೀಯರ್ ಎ.ಕೆ. ಗೋಪಾಲಸ್ವಾಮಿ ಹೇಳಿದ್ದಾರೆ.
ನಂದಿದುರ್ಗ ರಸ್ತೆ-ಮುನಿರೆಡ್ಡಿಪಾಳ್ಯ ರಸ್ತೆ, ಮಠದಹಳ್ಳಿ ರಸ್ತೆ, ಬಾಣಸವಾಡಿ ರಸ್ತೆ, ಹೆಣ್ಣೂರು ರಸ್ತೆ ಮುಂತಾದ ಅರು ಜಾಗಗಳಲ್ಲಿ ಮಹಾನಗರ ಪಾಲಿಕೆಯ ಅನುಮತಿ ಪಡೆಯದೆ ಬೆಂಗಳೂರು ನೀರು ಸರಬರಾಜು ಹಾಗೂಒಳಚರಂಡಿ ಮಂಡಳಿ, ಕಾಮಗಾರಿ ಆರಂಭಿಸಿತ್ತು. ಹೀಗಾಗಿ ದಂಡ ಕಟ್ಟುವುದೀಗ ಅನಿವಾರ್ಯವಾಗಿದೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications