ಉಪವಾಸ ಅಂತ್ಯ : ತೀವ್ರ ನಿಗಾ ಘಟಕದಲ್ಲೀಗ ಮಮತಾ

ಕೋಲ್ಕತಾ : ಸಿಂಗೂರು ವಿವಾದ ಸಂಬಂಧ, ಕಳೆದ 25ದಿನಗಳಿಂದ ಆರಂಭಗೊಂಡಿದ್ದ ತೃಣಮೂಲ ಕಾಂಗ್ರೆಸ್‌ ನಾಯಕಿ ಮಮತಾ ಬ್ಯಾನರ್ಜಿ ಉಪವಾಸ ಗುರುವಾರ(ಡಿಸೆಂಬರ್‌ 28) ಮಧ್ಯರಾತ್ರಿ ಅಂತ್ಯಗೊಂಡಿದೆ.

ತೀವ್ರ ಅಸ್ವಸ್ಥರಾಗಿರುವ ಮಮತಾ ಬ್ಯಾನರ್ಜಿ ಅವರು, ಕೋಲ್ಕತ್ತಾದ ಆಸ್ಪತ್ರೆಯಾಂದರ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೃದಯ ಮತ್ತು ನಾಡಿ ಬಡಿತ ಅತಿ ಕಡಿಮೆ ಇದೆ ಎಂದು ಆಸ್ಪತ್ರೆ ವೈದ್ಯರು ಶುಕ್ರವಾರ ತಿಳಿಸಿದ್ದಾರೆ.

ಮಮತಾ ಮನವೊಲಿಸಿ, ಅವರ ಬೇಡಿಕೆ ಪರಿಶೀಲಿಸುವಂತೆ ರಾಷ್ಟ್ರಪತಿ ಕಲಾಂ ಹಾಗೂ ಪ್ರಧಾನಿ ಮನ್‌ಮೋಹನ್‌ಸಿಂಗ್‌, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಬುದ್ಧದೇವ ಭಟ್ಟಾಚಾರ್ಯ ಅವರಿಗೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಸರ್ಕಾರ ಬೇಡಿಕೆ ಪರಿಶೀಲಿಸುವ ಭರವಸೆ ನೀಡಿದೆ.

ರೈತರ ಹಿತರಕ್ಷಣೆಗಾಗಿ ತಮ್ಮ ಧರಣಿ ಮುಂದುವರಿಯಲಿದೆ ಎಂದು ಮಮತಾ ಸ್ಪಷ್ಟಪಡಿಸಿದ್ದಾರೆ.

(ಏಜನ್ಸೀಸ್‌)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+