ಅಕ್ರಮ ಆಸ್ತಿ : ಮಾಜಿ ಬಿಎಸ್ಸೆನ್ನೆಲ್ ಅಧಿಕಾರಿಗೆ ಜೈಲುಶಿಕ್ಷೆ
ಬೆಂಗಳೂರು : ಅಕ್ರಮ ಆಸ್ತಿ ಗಳಿಕೆ ಹಿನ್ನೆಲೆಯಲ್ಲಿ ಭಾರತ ಸಂಚಾರ ನಿಗಮ(ಬಿಎಸ್‌ಎನ್‌ಎಲ್)ದ ಮಾಜಿ ಅಧಿಕಾರಿಯೋರ್ವ ಶಿಕ್ಷೆಗೊಳಗಾಗಿದ್ದಾರೆ.
ಸಿಬಿಐ ಪ್ರಕರಣವೊಂದನ್ನು ವಿಚಾರಣೆ ನಡೆಸಿದ 32ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಧೀಶ ಎ.ಎಲ್.ಪೂಜಾರ್, ಅಂತಿಮವಾಗಿ ಶಿಕ್ಷೆಯನ್ನು ಪ್ರಕಟಿಸಿದರು.
ದಾವಣೆಗೆರೆ ಜಿಲ್ಲೆ, ಜಗಳೂರು ಬಿಎಸ್‌ಎನ್‌ಎಲ್‌ನ ಜ್ಯೂನಿಯರ್ ಟೆಲಿಕಾಮ್ ಅಧಿಕಾರಿ ಎಸ್.ತಿಮ್ಮರಾಜು ಶಿಕ್ಷೆಗೊಳಗಾದ ವ್ಯಕ್ತಿ. ತಿಮ್ಮರಾಜು ಎರಡು ವರ್ಷ ಸರಳ ಸೆರೆಮನೆವಾಸ ಅನುಭವಿಸಬೇಕು. ಅಲ್ಲದೆ 10,000ರೂಪಾಯಿ ದಂಡ ಕಟ್ಟಬೇಕು, ದಂಡ ಕಟ್ಟದಿದ್ದರೆ ಆರು ತಿಂಗಳವರೆಗೆ ಶಿಕ್ಷೆ ವಿಸ್ತರಣೆಯಾಗಲಿದೆ.
ಡಿಸೆಂಬರ್ 2000ರಿಂದ ಡಿಸೆಂಬರ್ 2001ರವರೆಗೆ ಜ್ಯೂನಿಯರ್ ಟೆಲಿಕಾಮ್ ಅಧಿಕಾರಿಯಾಗಿದ್ದಾಗ ತಿಮ್ಮರಾಜು, ಅಕ್ರಮ ಆಸ್ತಿ ಕೂಡಿ ಹಾಕಿದ್ದರು ಎಂದು ಸಿಬಿಐ ಆರೋಪ ಪಟ್ಟಿ ಸಲ್ಲಿಸಿತ್ತು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications