ಬಿಎಂಎಸ್‌ಸಿಇ ಹಳೇ ವಿದ್ಯಾರ್ಥಿಗಳಲ್ಲಿ ಗರಿಬಿಚ್ಚಿದ ಖುಷಿ

BMS College of Engineering Alumini Day celebrated in Bengalooruಬೆಂಗಳೂರು : ಬಿಎಂಎಸ್‌ ಇಂಜಿನಿಯರಿಂಗ್‌ ಕಾಲೇಜಿನ ಹಳೆ ವಿದ್ಯಾರ್ಥಿಗಳ ಸಂಘದ ವಾರ್ಷಿಕ ಮಿಲನ ಕಾರ್ಯಕ್ರಮ ನಗರದಲ್ಲಿ ಡಿಸೆಂಬರ್‌ 1ರ ಶುಕ್ರವಾರ ಸಂತಸದಿಂದ ಜರುಗಿತು.

ಬೆಂಗಳೂರಿನಲ್ಲಿರುವ ಕಾಲೇಜಿನ ಹಳೆ ವಿದ್ಯಾರ್ಥಿಗಳ ಸಂಘ (AA of BMSCE, Bangalore) ಮತ್ತು ಅಮೆರಿಕೆಯಲ್ಲಿರುವ ಹಳೆ ವಿದ್ಯಾರ್ಥಿಗಳ ಸಂಘ ( BMSCE AAA, USA) ಜಂಟಿಯಾಗಿ ವಿದ್ಯಾರ್ಥಿದಿನವನ್ನು ಬಿಎಂಎಸ್‌ ಶ್ರೀನಿವಾಸಯ್ಯ ಸಭಾಂಗಣದಲ್ಲಿ ಆಚರಿಸಿದವು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಅಪ್ರಮೇಯನ್‌ ದತ್ತಿ ಉಪನ್ಯಾಸ ನೀಡಿದರು. ನ್ಯಾಯಮೂರ್ತಿ ಸಿ. ಅಶ್ವಥ್‌ನಾರಾಯಣರಾವ್‌, (Chairman BMSCET), ಡಾ. ಬಿಸಲಯ್ಯ (Chairman, BOM, BMSCE), ಎಂ.ಆರ್‌. ಶ್ರೀನಿವಾಸಮೂರ್ತಿ (Member Secretary, BMSCET), ಡಾ. ಎಂ.ಕೆ. ವೆಂಕಟೇಶ (Principal, BMSCE) ಕೆ.ಎನ್‌. ಮೂರ್ತಿ(ಅಮೆರಿಕಾ ವಿದ್ಯಾರ್ಥಿ ಸಂಘದ ಅಧ್ಯಕ್ಷ), ಡಾ. ಜಿ.ಆರ್‌. ಶ್ರೀನಿವಾಸ (ಬೆಂಗಳೂರು ಸಂಘದ ಅಧ್ಯಕ್ಷ) ಮುಂತಾದವರು ಈ ಸಂದರ್ಭದಲ್ಲಿ ಮಾತನಾಡಿ ಸಂಘದ ಧ್ಯೇಯೋದ್ದೇಶಗಳನ್ನು ವಿವರಿಸಿ ವಿದ್ಯಾರ್ಥಿ ದಿವಸಗಳನ್ನು ಮೆಲಕು ಹಾಕಿದರು. ಕಾರ್ಯಕ್ರಮದಲ್ಲಿ ಹಳೆ ವಿದ್ಯಾರ್ಥಿ ಬಳಗದ ಸುಮಾರು 200 ಮಂದಿ ಉಪಸ್ಥಿತರಿದ್ದರು.

BMS Alumni

ಫೆಬ್ರವರಿ 2007ರಲ್ಲಿ ಕಾಲೇಜಿನ ಸುವರ್ಣ ಮಹೋತ್ಸವ ನಡೆಯಲಿದ್ದು ಆ ಸಂದರ್ಭದಲ್ಲಿ ಹಳೆ ವಿದ್ಯಾರ್ಥಿ ಸಂಘದ ಕಾರ್ಯಕ್ರಮಗಳಿಗೋಸ್ಕರ ಅರ್ಧ ದಿವಸವನ್ನು ಮೀಸಲಾಗಿಡಲಾಗಿದೆ ಎಂದು ಡಾ. ಬಿಸಲಯ್ಯ ಪ್ರಕಟಿಸಿದರು.

ಪ್ರತಿವರ್ಷದಂತೆ 26 ಮಂದಿ ಅರ್ಹ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು. ಇಂಜಿನಿಯರಿಂಗ್‌ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆಗೈದಿರುವ ಕಾಲೇಜಿನ ಹಳೆಯ ವಿದ್ಯಾರ್ಥಿಯೂ ಆಗಿರುವ ಅಪ್ರಮೇಯನ್‌ ಅವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಅಂತೆಯೇ, ಬೆಂಗಳೂರು ಮತ್ತು ಅಮೆರಿಕಾ ಹಳೆಯ ವಿದ್ಯಾರ್ಥಿ ಸಂಘಕ್ಕೋಸ್ಕರ ಅವಿರತ ಶ್ರಮಿಸಿದ ಜಿಯಾ ಉಲ್ಲ ಮೀಸಿ ಮತ್ತು ರಜನೀಶ್‌ ಕುಮಾರ್‌ ಅವರನ್ನು ಈ ಸಂದರ್ಭದಲ್ಲಿ ಆತ್ಮೀಯವಾಗಿ ಸನ್ಮಾನಿಸಲಾಯಿತು.

ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಎಂ. ಕೃಷ್ಣಮೂರ್ತಿ ವಂದನಾರ್ಪಣೆ ಮಾಡಿದರು. ಬೆಂಗಳೂರಿನ ವಿದ್ಯಾರ್ಥಿ ಬಳಗ ಭೋಜನಕೂಟದ ವ್ಯವಸ್ಥೆ ಮಾಡಿತ್ತು.

(ದಟ್ಸ್‌ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+