ರಂಜನೆಯ ವಿಕೇಂದ್ರೀಕರಣ : ಕಲ್ಬುರ್ಗಿಗೆ ಕಾಲಿಟ್ಟ ಮಲ್ಟಿಪ್ಲೆಕ್ಸ್‌

ಕಲ್ಬುರ್ಗಿ(ಗುಲ್ಬರ್ಗ) : ಹಿಂದಳಿದ ಹೈದರಾಬಾದ್‌-ಕರ್ನಾಟಕ ಭಾಗದಲ್ಲಿ, ನಾಲ್ಕು ಪರದೆಗಳ ಹೊಸ ಮಲ್ಟಿಪ್ಲೆಕ್ಸ್‌ ಕಾಂಪ್ಲೆಕ್ಸ್‌ ತಲೆಎತ್ತಿದೆ. ಗುಲ್ಬರ್ಗದಲ್ಲಿ ಸುಮಾರು 6 ಕೋಟಿ ಅಂದಾಜಿನ ಈ ಮನರಂಜನಾ ಕಾಂಪ್ಲೆಕ್ಸ್‌ಗೆ ಐಜಿಪಿ ಆರ್‌.ಕೆ.ದತ್ತ ಶುಕ್ರವಾರ ಚಾಲನೆ ನೀಡಿದರು.

ಈ ಬಗ್ಗೆ ಸುದ್ದಿಗಾರರಿಗೆ ಹೆಚ್ಚಿನ ವಿವರ ನೀಡಿರುವ ಮಲ್ಟಿಪ್ಲೆಕ್ಸ್‌ನ ಮುಖ್ಯಸ್ಥ ಗಿರಿಜಾ ಶಂಕರಶಾಸ್ತ್ರಿ, ಏಕಕಾಲದಲ್ಲಿ ನಾಲ್ಕು ಚಿತ್ರಗಳನ್ನು ಇಲ್ಲಿ ಪ್ರದರ್ಶಿಸಬಹುದು. ಮಲ್ಟಿಪ್ಲೆಕ್ಸ್‌ ಸಿನಿಮಾ ಮಂದಿರಗಳ ಒಟ್ಟು ಆಸನಗಳ ಸಾಮಾರ್ಥ್ಯ 1900 ಎಂದು ತಿಳಿಸಿದ್ದಾರೆ.

ಎಲ್ಲವೂ ರಾಜಧಾನಿ ಕೇಂದ್ರೀಕೃತವಾಗುತ್ತಿವೆ. ಈ ನಿಟ್ಟಿನಲ್ಲಿ ನಮ್ಮ ಪ್ರಯತ್ನ ಮಹತ್ವದ್ದಾಗಿದೆ. ಈ ಭಾಗದ ಜನರಿಗೆ ಮನರಂಜನೆಯನ್ನು ನೀಡುವ ಉದ್ದೇಶ ನಮ್ಮದು. ನೂತನ ತಂತ್ರಜ್ಞಾನ, ಧ್ವನಿ ವ್ಯವಸ್ಥೆಯನ್ನು ಮಲ್ಪಿಪ್ಲೆಕ್ಸ್‌ ಹೊಂದಿದೆ. ಚಿತ್ರ ವೀಕ್ಷಿಸುವ ಪ್ರೇಕ್ಷಕರಿಗೆ ರಸಾನುಭೂತಿ ದೊರೆಯಲಿದೆ ಎಂದು ಗಿರಿಜಾ ಶಂಕರಶಾಸ್ತ್ರಿ ಹೇಳಿದ್ದಾರೆ.

(ಯುಎನ್‌ಐ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+