ಮಕ್ಕಳಿಗೆ ಹಾಲು-ಮೊಟ್ಟೆ, ಹುಡುಗರಿಗೆ ಸೈಕಲ್ : ಸರ್ಕಾರ
ಬೆಂಗಳೂರು : ಗಂಡು ಮಕ್ಕಳಿಗೆ ಬೈಸಿಕಲ್ ನೀಡಿಕೆ, ಹುಬ್ಬಳ್ಳಿಯಲ್ಲಿ ಕಾನೂನು ವಿವಿ ಸ್ಥಾಪನೆ, ಭೂಗಳ್ಳರಿಗೆ ಕಠಿಣ ಶಿಕ್ಷೆ ಸೇರಿದಂತೆ ಅನೇಕ ಮಹತ್ವದ ತೀರ್ಮಾನಗಳನ್ನು ರಾಜ್ಯ ಸಚಿವ ಸಂಪುಟ ಶುಕ್ರವಾರ ತೆಗೆದುಕೊಂಡಿದೆ.
ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಶಿಕ್ಷಣ ಸಚಿವ ಬಸವರಾಜ ಹೊರಟ್ಟಿ, ಸಚಿವ ಸಂಪುಟದ ತೀರ್ಮಾನಗಳ ವಿವರಗಳನ್ನು ನೀಡಿದರು.
ಸಂಪುಟ ಸಭೆ ಮುಖ್ಯಾಂಶಗಳು :
- ಭೂಗಳ್ಳರಿಗೆ ಶಿಕ್ಷೆ ನೀಡಲು ಕಾನೂನು ಜಾರಿಗೆ ಸುಗ್ರೀವಾಜ್ಞೆ ಹೊರಡಿಸಲು ನಿರ್ಧಾರ. ಭೂಕಬಳಿಕೆಯನ್ನು ಕ್ರಿಮಿನಲ್ ಅಪರಾಧ ಎಂದು ಪರಿಗಣಿಸಿ ಶಿಕ್ಷೆ ನೀಡಲು ಭೂಕಂದಾಯ ವಿಧೇಯಕ 2006ಕ್ಕೆ ತಿದ್ದುಪಡಿ ತರಲು ಸಂಪುಟದ ತೀರ್ಮಾನ.
- 1ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟದ ಜೊತೆಗೆ ಹಾಲು ಅಥವಾ ಮೊಟ್ಟೆ ಅಥವಾ ಬಾಳೆಹಣ್ಣು ನೀಡಿಕೆ. 67ಲಕ್ಷ ವಿದ್ಯಾರ್ಥಿಗಳಿಗೆ ಯೋಜನೆಯಿಂದ ಉಪಯೋಗ.
- ಬಡತನ ರೇಖೆಯಿಂದ ಕೆಳಗಿರುವ ಶಾಲಾ ಬಾಲಕರಿಗೆ ಬೈಸಿಕಲ್ ವಿತರಣೆ.
- ಹುಬ್ಬಳ್ಳಿಯಲ್ಲಿ ಕಾನೂನು ವಿಶ್ವವಿದ್ಯಾಲಯ ಸ್ಥಾಪನೆ.
- ಬೆಳಗಾವಿಯಲ್ಲಿ ಐದೂವರೆ ಕೋಟಿ ವೆಚ್ಚದಲ್ಲಿ ಆಡಳಿತ ಕಚೇರಿ ನಿರ್ಮಾಣ.












Click it and Unblock the Notifications