ಅಕ್ರಮ ಕಟ್ಟಡ : ದೆಹಲಿಯಲ್ಲಿ ವ್ಯಾಪಾರಿಗಳ ಪ್ರತಿಭಟನೆ
ನವದೆಹಲಿ : ವಸತಿ ಪ್ರದೇಶಗಳಲ್ಲಿರುವ ಅಕ್ರಮ ವ್ಯಾಪಾರಿ ಮಳಿಗೆಗಳನ್ನು ಮುಚ್ಚಿಸಬೇಕೆಂಬ ಸುಪ್ರೀಂ ಕೋರ್ಟ್ ತೀರ್ಪು ವಿರೋಧಿಸಿ, ದೇಶದ ರಾಜಧಾನಿಯಲ್ಲಿನ ವರ್ತಕರು ಮಂಗಳವಾರ ಬಂದ್ ಆಚರಿಸಿದರು.
ಪೂರ್ವ ದೆಹಲಿಯ ಹಲವೆಡೆ, ಪ್ರತಿಭಟನಾ ನಿರತ ವರ್ತಕರು ಸಾರ್ವಜನಿಕ ಆಸ್ತಿ ನಾಶಗೊಳಿಸಿದ್ದಲ್ಲದೆ ಸಂಚಾರಕ್ಕೆ ತಡೆಯಾಡ್ಡಿದರು. ದಕ್ಷಿಣ ದೆಹಲಿಯ ಕೆಲವೆಡೆಗಳಲ್ಲೂ ಪ್ರತಿಭಟನೆಗಳು ನಡೆದಿವೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಅಶ್ರುವಾಯು ಸಿಡಿಸಿ, ಲಾಠೀಚಾರ್ಜ್ ಮಾಡಿದದ್ದಲ್ಲದೆ ಸುಮಾರು 1,500 ಮಂದಿಯನ್ನು ಬಂಧಿಸಿದರು.
ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವು ಮಾರುಕಟ್ಟೆಗಳು ಎಂದಿನಂತೆ ಕಾರ್ಯ ನಿರ್ವಹಿಸಿದವಾದರೂ, ಬಹುತೇಕ ಮಾರುಕಟ್ಟೆಗಳು ಬಂದ್‌ಗೆ ಸ್ಪಂದಿಸಿವೆ.
ಬಂದ್ ಯಾಕೆ? : ಅಕ್ರಮ ವಾಣಿಜ್ಯ ಮಂಡಳಿಗಳಿಗೆ ಬೀಗ ಜಡಿಯುವ ಪ್ರಕ್ರಿಯೆ, ವ್ಯಾಪಾರಿಗಳ ಕೆರಳಿಸಿದೆ.
ಸುಪ್ರೀಂ ಕೋರ್ಟ್ ತೀರ್ಪಿನ ನಂತರ ವ್ಯಾಪಾರಿಗಳ ಒತ್ತಡಕ್ಕೆ ಮಣಿದಿದ್ದ ಸರ್ಕಾರ, ಕಾನೂನು ಮತ್ತು ಸುವ್ಯವಸ್ಥೆ ಕಾರಣಗಳಿಂದಾಗಿ ಬೀಗಮುದ್ರೆ ಆಂದೋಲನ ಮುಂದುವರಿಸುವುದು ಅಸಾಧ್ಯ ಎಂದು ಸುಪ್ರೀಂ ಕೋರ್ಟ್‌ನ ಮನವೊಲಿಸುವ ಯತ್ನ ನಡೆಸಿತ್ತು.
ಸರ್ಕಾರದ ಈ ಅಭಿಪ್ರಾಯ ಖಂಡಿಸಿದ್ದ ಮುಖ್ಯ ನ್ಯಾಯಮೂರ್ತಿ ವೈ.ಕೆ.ಸಭರ್‌ವಾಲ್, ವ್ಯಾಪಾರಿಗಳ ಬೆದರಿಕೆಗೆ ಮಣಿದು ಸರ್ಕಾರ ಜನರ ಹಕ್ಕು, ಪ್ರಾಣ, ಸ್ವಾತಂತ್ರ್ಯ ಹಾಗೂ ಆಸ್ತಿಪಾಸ್ತಿ ಬಲಿಗೊಡಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಗಂಭೀರವಾಗಿ ಯೋಚಿಸಿ, ಸೂಕ್ತಕ್ರಮ ಕೈಗೊಳ್ಳಬೇಕೆಂದು ಆದೇಶಿಸಿದ್ದರು. ಕೋರ್ಟ್ ತೀರ್ಪು ವಿರೋಧಿಸಿ, ಪ್ರತಿಭಟನೆ ಮುಂದುವರೆದಿದೆ.
(ಯುಎನ್‌ಐ)












Click it and Unblock the Notifications