ಜಯನಗರ ಈದ್ಗಾ ಮೈದಾನದಿ ಕುಮಾರಣ್ಣನ ಪ್ರಾರ್ಥನೆ
ಬೆಂಗಳೂರು : ರಂಜಾನ್ ಹಬ್ಬವನ್ನು ಮುಸ್ಲಿಂ ಬಾಂಧವರು ಕರ್ನಾಟಕದೆಲ್ಲೆಡೆ, ಭಕ್ತಿ-ಶ್ರದ್ಧೆ ಮತ್ತು ಸಂಭ್ರಮಗಳಿಂದ ಮಂಗಳವಾರ ಆಚರಿಸುತ್ತಿದ್ದಾರೆ.
ಹೊಸ ಬಟ್ಟೆಗಳನ್ನು ಧರಿಸಿ, ರಾಜ್ಯದ ವಿವಿಧ ಈದ್ಗಾ ಮೈದಾನಗಳಲ್ಲಿ ಸಹಸ್ರಾರು ಮುಸ್ಲಿಂರು ಪ್ರಾರ್ಥನೆ ಸಲ್ಲಿಸಿ, ಪರಸ್ಪರ ಶುಭಾಶಯ ಮತ್ತು ಸಿಹಿಯನ್ನು ವಿನಿಮಯ ಮಾಡಿಕೊಂಡರು. ಹಬ್ಬದ ಹಿನ್ನೆಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಿ ಕಚೇರಿಗಳಿಗೆ ಇಂದು ಕಾರ್ಯ ನಿರ್ವಹಿಸಲಿಲ್ಲ.
ಕರ್ನಾಟಕದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಜಯನಗರದ ಈದ್ಗಾ ಮೈದಾನದಲ್ಲಿ ನಡೆದ ಮುಸ್ಲಿಂರ ಪ್ರಾರ್ಥನಾ ಸಭೆಯಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಮಾತನಾಡುತ್ತಿದ್ದ ಅವರು, ಮುಸ್ಲಿಂರ ಕಲ್ಯಾಣಕ್ಕಾಗಿ ಸಮ್ಮಿಶ್ರ ಸರ್ಕಾರ ಶ್ರಮಿಸಲಿದೆ ಎಂದರು.
ರಂಜಾನ್ ಎನ್ನುವುದು ಮುಸ್ಲಿಂ ಕ್ಯಾಲೆಂಡರ್ ಪ್ರಕಾರ 9ನೇ ತಿಂಗಳು. ಆತ್ಮ ಶುದ್ಧೀಕರಣಕ್ಕೆ ಮತ್ತು ದೇವರಿಗೆ ಪ್ರಾರ್ಥನೆ ಸಲ್ಲಿಸಲು ಈ ತಿಂಗಳು ಅತ್ಯಂತ ಪವಿತ್ರ ಎಂಬ ನಂಬಿಕೆ ಮುಸ್ಲಿಂರಲ್ಲಿದೆ.
(ಯುಎನ್‌ಐ)












Click it and Unblock the Notifications