ಟೈಮ್ಸ್ ಆಫ್ ಇಂಡಿಯಾ ಮಡಿಲಿಗೆ ‘ವಿಜಯಕರ್ನಾಟಕ’?
ಟೈಮ್ಸ್ ಆಫ್ ಇಂಡಿಯಾ ಮಡಿಲಿಗೆ ‘ವಿಜಯಕರ್ನಾಟಕ’?
ನಂ.1 ದೈನಿಕ ಪರರ ಪಾಲಾಯಿತೇ? ಸಂಕೇಶ್ವರ ಪತ್ರಿಕೆ ಮಾರಿದ್ದು ನಿಜವೇ?
ಗುರುವಾರ ಪತ್ರಕರ್ತರ ಸಮೂಹದಲ್ಲಿ ಈ ವಿಚಾರ ಬಿಸಿಬಿಸಿ ಚರ್ಚೆಗೆ ಕಾರಣವಾಗಿತ್ತು. ‘ವಿಜಯಕರ್ನಾಟಕ’ ಪತ್ರಿಕೆಯ ಮಾಲೀಕರಾದ ವಿಜಯ ಸಂಕೇಶ್ವರ್, ಪತ್ರಿಕೆಯ ಮಾಲೀಕತ್ವದಲ್ಲಿ ಶೇ.76ರಷ್ಟು ಷೇರುಗಳನ್ನು ಟೈಮ್ಸ್ ಸಮೂಹಕ್ಕೆ ಮಾರಾಟ ಮಾಡಿದ್ದಾರೆ. ಕೋಟ್ಯಂತರ ರೂ.ಗಳಿಗೆ ಮಾರಾಟ ಪ್ರಕ್ರಿಯೆ ನಡೆದಿದೆ ಎನ್ನಲಾಗಿದೆ.
ಈ ಮಾರಾಟ ಒಪ್ಪಂದದ ಪ್ರಕಾರ, ವಿಜಯಾನಂದ್ ಪ್ರಿಂಟರ್ಸ್ ಲಿಮಿಟೆಡ್(ವಿಪಿಎಲ್)ನ ಮೂರು ಪತ್ರಿಕೆಗಳಾದ ವಿಜಯಕರ್ನಾಟಕ, ಉಷಾ ಕಿರಣ, ವಿಜಯ್‌ಟೈಮ್ಸ್(ಆಂಗ್ಲ ಪತ್ರಿಕೆ) ಪತ್ರಿಕೆಗಳ ಮಾಲೀಕತ್ವದಲ್ಲಿ ಶೇ.24ರಷ್ಟು ಷೇರುಗಳನ್ನು ಸಂಕೇಶ್ವರ್ ತಮ್ಮಲ್ಲಿ ಉಳಿಸಿಕೊಂಡಿದ್ದಾರೆ ಎನ್ನಲಾಗಿದೆ.
ಬೆನ್ನೆಟ್, ಕೊಲೆಮನ್ ಅಂಡ್ ಕಂಪನಿ ಲಿಮಿಟೆಡ್(ಬಿಸಿಸಿಎಲ್)ನ ಟೈಮ್ಸ್ ಆಫ್ ಇಂಡಿಯಾ, ಬೆಂಗಳೂರಿನಲ್ಲಿ ನಂ.1 ಆಂಗ್ಲ ದೈನಿಕ ಎಂಬ ಖ್ಯಾತಿಗೆ ಪಾತ್ರವಾಗಿದೆ. ಕನ್ನಡದ ನಂ.1 ದೈನಿಕ ವಿಜಯಕರ್ನಾಟಕವನ್ನು ಈಗ ತನ್ನ ಮಡಿಲಿಗೆ ಹಾಕಿಕೊಂಡಿದೆ. ಟೈಮ್ಸ್ ಮತ್ತು ವಿಪಿಎಲ್ ನಡುವಿನ ಮಾರಾಟ ಒಪ್ಪಂದ ಮುಂದಿನ ಒಂದೆರಡು ವಾರಗಳಲ್ಲಿ ಸ್ಪಷ್ಟವಾಗಲಿದೆ ಎನ್ನಲಾಗಿದೆ.
ಮಾರಾಟ ಪ್ರಕ್ರಿಯೆ ಕಳೆದ ಕೆಲವು ತಿಂಗಳಿಂದ ಕೇಳಿ ಬರುತ್ತಿತ್ತು. ನವದೆಹಲಿ ಮೂಲದ ಎಚ್‌ಟಿ ಮೀಡಿಯಾ ಲಿಮಿಟೆಡ್ ಖರೀದಿಗೆ ಈ ಹಿಂದೆ ಆಸಕ್ತಿ ವಹಿಸಿತ್ತು ಎನ್ನಲಾಗಿದೆ.
(ದಟ್ಸ್ ಕನ್ನಡ ವಾರ್ತೆ)
ಮುಖಪುಟ / ವಾಟ್ಸ್ ಹಾಟ್












Click it and Unblock the Notifications