ಡಾ.ಪ್ರಧಾನ್‌ ಗುರುದತ್‌ಗೆ ಶ್ರೇಷ್ಠ ಅನುವಾದಕ ಪ್ರಶಸ್ತಿ

ಡಾ.ಪ್ರಧಾನ್‌ ಗುರುದತ್‌ಗೆ ಶ್ರೇಷ್ಠ ಅನುವಾದಕ ಪ್ರಶಸ್ತಿ
‘ಶ್ರೀ ರಾಮಾಯಣದರ್ಶನಂ’ ಹಿಂದಿಗೆ, ಕನ್ನಡ ಹಿಂದಿ ಮಧ್ಯೆ ಉತ್ತಮ ಬಾಂಧವ್ಯಕ್ಕೆ ಕರೆ

ಬೆಂಗಳೂರು : ರಾಜ್ಯ ಅನುವಾದ ಅಕಾಡೆಮಿ ಅಧ್ಯಕ್ಷ ಡಾ.ಪ್ರಧಾನ್‌ ಗುರುದತ್‌ ಅವರಿಗೆ ಕಮಲಾ ಗೋಯೆಂಕಾ ಪ್ರತಿಷ್ಠಾನ ನೀಡುವ ಶ್ರೇಷ್ಠ ಅನುವಾದಕ ಪ್ರಶಸ್ತಿ ದೊರೆತಿದೆ.

ರಾಷ್ಟ್ರಕವಿ ಕುವೆಂಪು ಅವರ ‘ಶ್ರೀ ರಾಮಾಯಣದರ್ಶನಂ’ ಕೃತಿಯ ಹಿಂದಿ ಅನುವಾದಕ್ಕೆ ಈ ಪ್ರಶಸ್ತಿ ಲಭಿಸಿದೆ. ಭಾನುವಾರ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ, ರಾಜ್ಯಪಾಲ ಟಿ.ಎನ್‌.ಚತುರ್ವೇದಿ ಪ್ರಶಸ್ತಿ ಪ್ರದಾನ ಮಾಡಿದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ.ಪ್ರಧಾನ್‌ ಗುರುದತ್‌, ಭಾರತೀಯ ಭಾಷೆಗಳ ನಡುವೆ ಕೊಡು ಕೊಳ್ಳುವಿಕೆಗೆ ಹೆಚ್ಚಿನ ಮಹತ್ವ ಸಿಕ್ಕಿಲ್ಲ. ಕನ್ನಡ ಹಾಗೂ ಹಿಂದಿ ಭಾಷೆ ಮಧ್ಯೆ ಉತ್ತಮ ಸಂಬಂಧ ಏರ್ಪಡಿಸಲು ಶ್ರಮಿಸಬೇಕು ಎಂದು ಕರೆ ನೀಡಿದರು.

ಪ್ರಶಸ್ತಿ 21 ಸಾವಿರ ರೂಪಾಯಿ ನಗದು, ಪ್ರಶಸ್ತಿ ಪತ್ರ ಹಾಗೂ ಫಲಕಗಳನ್ನು ಒಳಗೊಂಡಿದೆ. ಸಮಾರಂಭದಲ್ಲಿ ಕಮಲಾ ಗೋಯಂಕಾ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ಎನ್‌.ಎಸ್‌.ಗೋಯೆಂಕಾ ಮೊದಲಾದವರು ಉಪಸ್ಥಿತರಿದ್ದರು.

(ಏಜೆನ್ಸೀಸ್‌)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+