ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೌರಿಂಗ್‌ ಆಸ್ಪತ್ರೆಯಲ್ಲಿ ಯಡಿಯೂರಪ್ಪಗೆ ನರಕಾನುಭವ!

By Staff
|
Google Oneindia Kannada News

ಬೌರಿಂಗ್‌ ಆಸ್ಪತ್ರೆಯಲ್ಲಿ ಯಡಿಯೂರಪ್ಪಗೆ ನರಕಾನುಭವ!
ಮಂತ್ರಿಮಹಾಶಯರಿಗೆ ಈ ಗತಿಯಾದರೆ, ಜನಸಾಮಾನ್ಯರ ಪಾಡೇನು? ಹೇಳಪ್ಪಾ ; ಕುಮಾರಣ್ಣ?

ಬೆಂಗಳೂರು : ರಾಜ್ಯದ ಸರ್ಕಾರಿ ಆಸ್ಪತ್ರೆ ಕೇವಲ ಜನಸಾಮಾನ್ಯರಿಗಷ್ಟೇ ಅಲ್ಲದೇ, ಗಣ್ಯರಿಗೂ ಕಹಿ ಅನುಭವ ನೀಡುತ್ತದೆ ಎನ್ನುವುದಕ್ಕೆ ಇಲ್ಲೊಂದು ಉದಾಹರಣೆ. ಕಹಿ ಅನುಭವ ದಕ್ಕಿಸಿಕೊಂಡವರು, ಉಪಮುಖ್ಯಮಂತ್ರಿ ಯಡಿಯೂರಪ್ಪ . ಅದರ ಪರಿಣಾಮ ಇಬ್ಬರು ವೈದ್ಯರಿಗೆ ಅಮಾನತ್ತಿನ ಶಿಕ್ಷೆ!

ಮಧ್ಯರಾತ್ರಿ ಬೌರಿಂಗ್‌ ಆಸ್ಪತ್ರೆಗೆ ದಿಢೀರ್‌ ಭೇಟಿ ನೀಡಿದ ಆರೋಗ್ಯ ಸಚಿವ ಅಶೋಕ್‌, ಆಸ್ಪತ್ರೆ ವ್ಯವಸ್ಥೆ ಬಗ್ಗೆ ಅಸಮಾಧಾನಗೊಂಡಿದ್ದಾರೆ. ಕರ್ತವ್ಯ ಪಾಲಿಸದೇ ರಾತ್ರಿಪಾಳಿಯಲ್ಲಿ ನಿದ್ದೆ ಮಾಡುತ್ತಿದ್ದ ವೈದ್ಯರನ್ನು ಸಸ್ಪೆಂಟ್‌ ಮಾಡಿದ್ದಾರೆ.

ಘಟನೆ ವಿವರ : ಅನಾರೋಗ್ಯದ ನಿಮಿತ್ತ ನಗರದ ಬೌರಿಂಗ್‌ ಆಸ್ಪತ್ರೆಯಲ್ಲಿ ಉಪಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಚಿಕಿತ್ಸೆ ಪಡೆಯುತ್ತಿದ್ದರು. ನಿದ್ದೆ ಬರುತ್ತಿಲ್ಲ, ಏನಾದರೂ ಔಷಧಿ ಕೊಡಿ ಎಂದು ತಮ್ಮ ಕೊಠಡಿಯಿಂದ ವೈದ್ಯರಿಗೆ ಅವರು ನೌಕರನೊಬ್ಬನಿಂದ ಹೇಳಿಕಳಿಸಿದ್ದಾರೆ.

ನಿದ್ರೆಯ ಸುಖದಲ್ಲಿದ್ದ ಹಿರಿಯ ವೈದ್ಯರು, ಕಿರಿಯ ವೈದ್ಯನನ್ನು ಯಡಿಯೂರಪ್ಪನವರ ಸಮಸ್ಯೆ ಆಲಿಸಲು ಕಳುಹಿಸಿದ್ದಾರೆ. ಆಸ್ಪತ್ರೆಯಲ್ಲಿ ದಾಖಲಾಗಿರುವ ವ್ಯಕ್ತಿ ರಾಜ್ಯದ ಉಪಮುಖ್ಯಮಂತ್ರಿ ಎಂಬುದರ ಅರಿವಿಲ್ಲದ ಕಿರಿಯ ವೈದ್ಯ, ಕಾಗದಲ್ಲಿ ಏನೋ ಗೀಚಿ, ಹೊರಗಡೆ ಅಂಗಡಿಯಿಂದ ಈ ಮಾತ್ರೆ ತಂದು ನುಂಗಿ ಮಲಗಿರಿ ಎಂದು ಅಸಡ್ಡೆಯಿಂದ ಹೇಳಿದ್ದಾನೆ.

ಈತನ ಕಾರ್ಯವೈಖರಿಯಿಂದ ಅಸಮಾಧಾನಗೊಂಡ ಯಡಿಯೂರಪ್ಪ, ಆರೋಗ್ಯ ಸಚಿವರಿಗೆ ಕರೆ ಮಾಡಿ ಪರಿಸ್ಥಿತಿ ವಿವರಿಸಿದ್ದಾರೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಸಚಿವರು, ಅಗತ್ಯ ಕ್ರಮ ಜರುಗಿಸಿದ್ದಾರೆ.

ಮಂತ್ರಿಮಹಾಶಯರಿಗೆ ಈ ಗತಿಯಾದರೆ, ಜನಸಾಮಾನ್ಯರ ಪಾಡೇನು? ಹೇಳಪ್ಪಾ ;ಕುಮಾರಣ್ಣ?

(ದಟ್ಸ್‌ ಕನ್ನಡ ವಾರ್ತೆ)

ಮುಖಪುಟ / ಕುಮಾರ-ಪರ್ವ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X