ಮೆಟ್ರೊ ರೈಲಿಗೆ ಎಚ್.ಡಿ. ಕುಮಾರಸ್ವಾಮಿ ಗ್ರೀನ್ ಸಿಗ್ನಲ್
ಮೆಟ್ರೊ ರೈಲಿಗೆ ಎಚ್.ಡಿ. ಕುಮಾರಸ್ವಾಮಿ ಗ್ರೀನ್ ಸಿಗ್ನಲ್
ವರ್ತಕ ಸಮುದಾಯದಿಂದ ವಿರೋಧ, ಸರ್ಕಾರಕ್ಕೆ ಎಚ್ಚರಿಕೆ
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಕೇಂದ್ರ ಕೃಷಿ ಸಚಿವ ಶರದ್‌ಪವಾರ್ ಅಧ್ಯಕ್ಷತೆಯಲ್ಲಿ ರಚನೆಯಾಗಿರುವ ಉನ್ನತಮಟ್ಟದ ಸಮಿತಿ ಸಮ್ಮತಿಸಿದ ತಕ್ಷಣ ಕಾಮಗಾರಿ ಆರಂಭಗೊಳ್ಳಲಿದೆ. ಆವರೆಗೆ ಅಗತ್ಯವಿರುವ ಎಲ್ಲಾ ಸಿದ್ಧತೆಗಳನ್ನು ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಕೇಂದ್ರ ಈಗಾಗಲೇ ಯೋಜನೆಗೆ 1600 ಕೋಟಿ ರೂಪಾಯಿ ನೀಡಲು ಒಪ್ಪಿದೆ ಎಂದರು.
ವಿರೋಧ : ಮೆಟ್ರೊ ರೈಲಿಗೆ ವಿರೋಧ ವ್ಯಕ್ತಪಡಿಸುತ್ತಿದ್ದ ಮಾಜಿ ಪ್ರಧಾನಿ ದೇವೇಗೌಡರು, ಈಗ ಆ ಬಗ್ಗೆ ಧ್ವನಿ ಎತ್ತದಿರುವುದನ್ನು ಕಾಂಗ್ರೆಸ್ ಟೀಕಿಸಿದೆ. ಇನ್ನೊಂದೆಡೆ ಮೆಟ್ರೊ ರೈಲಿನಿಂದ ಅಂಗಡಿ ಮುಂಗಟ್ಟುಗಳನ್ನು ಕಳೆದು ಕೊಳ್ಳುವ ಆತಂಕದಲ್ಲಿರುವ ವರ್ತಕರು, ಮೆಟ್ರೊಗೆ ವಿರೋಧ ವ್ಯಕ್ತಪಡಿಸಿದ್ದಾರೆ. ರಕ್ತ ಹರಿಸಿಯಾದರೂ ಮೆಟ್ರೊ ತಡೆಯುತ್ತೇವೆ ಎಂದಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
ಮುಖಪುಟ / ಕುಮಾರ-ಪರ್ವ












Click it and Unblock the Notifications