ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಲಂಕೇಶ್‌-71’: ರವೀಂದ್ರ ಕಲಾಕ್ಷೇತ್ರದಿ ನೆನಪಿನ ಚಿತ್ತಾರ

By Staff
|
Google Oneindia Kannada News

‘ಲಂಕೇಶ್‌-71’: ರವೀಂದ್ರ ಕಲಾಕ್ಷೇತ್ರದಿ ನೆನಪಿನ ಚಿತ್ತಾರ
ಸುಮನ್‌ ಮುಖ್ಯೋಪಾಧ್ಯಾಯರಿಗೆ ಲಂಕೇಶ್‌ ಚಿತ್ರ ಪ್ರಶಸ್ತಿ-2006, ‘ಹರ್ಬರ್ಟ್‌’ ಚಿತ್ರ ಪ್ರದರ್ಶನ

ಬೆಂಗಳೂರು : ಪತ್ರಿಕೋದ್ಯಮದ ಆಲದ ಮರ ಲಂಕೇಶ್‌ ಇಂದು ಬದುಕಿದ್ದಿದ್ದರೆ, 71ನೇ ವಸಂತಕ್ಕೆ ಪದಾರ್ಪಣೆ ಮಾಡುತ್ತಿದ್ದರು. ಅವರ ಸ್ಮರಣಾರ್ಥ ಅರ್ಥಪೂರ್ಣ ಕಾರ್ಯಕ್ರಮವೊಂದು, ರವೀಂದ್ರ ಕಲಾಕ್ಷೇತ್ರದಲ್ಲಿ ಬುಧವಾರ (ಮಾ.8) ನಡೆಯಲಿದೆ.

ಲಂಕೇಶ್‌ ಹೆಸರಲ್ಲಿ ಪ್ರಶಸ್ತಿಯಾಂದನ್ನು ಸ್ಥಾಪಿಸಲಾಗಿದ್ದು, ಪ್ರಶಸ್ತಿ ವಿತರಣಾ ಕಾರ್ಯಕ್ರಮ ಈ ಸಂದರ್ಭದಲ್ಲಿ ನೆರವೇರಲಿದೆ ಎಂದು ಚಲನಚಿತ್ರ ನಿರ್ದೇಶಕಿ ಕವಿತಾ ಲಂಕೇಶ್‌ ಮತ್ತು ಪತ್ರಕರ್ತೆ ಗೌರಿ ಲಂಕೇಶ್‌ ದಟ್ಸ್‌ ಕನ್ನಡಕ್ಕೆ ತಿಳಿಸಿದ್ದಾರೆ.

ದೇಶದ ವಿವಿಧ ಭಾಷೆಗಳಲ್ಲಿ ನಿರ್ಮಾಣವಾಗುವ ಅತ್ಯುತ್ತಮ ಚೊಚ್ಚಲ ಚಿತ್ರದ ನಿರ್ದೇಶಕರಿಗೆ ಈ ಪ್ರಶಸ್ತಿ ನೀಡಲಾಗುತ್ತಿದೆ. ಈ ಬಾರಿ ಪಶ್ಚಿಮ ಬಂಗಾಳದ ಸುಮನ್‌ ಮುಖ್ಯೋಪಾಧ್ಯಾಯ ಅವರ ‘ಹರ್ಬರ್ಟ್‌’ ಚಿತ್ರವನ್ನು ಆಯ್ಕೆ ಮಾಡಲಾಗಿದೆ. ಕನ್ನಡ, ಹಿಂದಿ, ಮಲೆಯಾಳಂ, ತೆಲುಗು, ತಮಿಳು ಚಿತ್ರಗಳು ಸೇರಿದಂತೆ ಒಟ್ಟು 12 ಚಿತ್ರಗಳು ಆಯ್ಕೆ ಸಮಿತಿ ಮುಂದಿದ್ದವು. ಕಳೆದ ಬಾರಿ ಮಲೆಯಾಳಂನ ‘ಸಂಚಾರಂ’ ಚಿತ್ರಕ್ಕೆ ಈ ಪ್ರಶಸ್ತಿ ಲಭಿಸಿತ್ತು ಎಂದರು.

ವೈವಿಧ್ಯಮಯ ಕಾರ್ಯಕ್ರಮ : ರವೀಂದ್ರ ಕಲಾಕ್ಷೇತ್ರದಲ್ಲಿ ಸಂಜೆ 5 ಗಂಟೆಗೆ ಕಾರ್ಯಕ್ರಮ ಪ್ರಾರಂಭವಾಗಲಿದ್ದು, ‘ಹರ್ಬರ್ಟ್‌’ ಚಿತ್ರ ಪ್ರದರ್ಶನವನ್ನು 6 ಗಂಟೆಗೆ ಏರ್ಪಡಿಸಲಾಗಿದೆ. ಗೌರಿ ಲಂಕೇಶ್‌ ಅನುವಾದಿಸಿರುವ ‘ದರವೇಶಿ ಕತೆಗಳು’ ಮತ್ತು ಬಿ.ಚಂದ್ರೇಗೌಡ ಅವರ ‘ಲೈಬ್ರರಿಯಲ್ಲಿ ಕಂಡ ಮುಖ’ ಕೃತಿಗಳು ಕಾರ್ಯಕ್ರಮದಲ್ಲಿ ಬಿಡುಗಡೆಯಾಗಲಿವೆ. ‘ಲಂಕೇಶ್‌’ ವಾರಪತ್ರಿಕೆ ಪ್ರಾರಂಭವಾಗಿ ಇಂದಿಗೆ ಒಂದು ವರ್ಷ ಸಂದಿರುವುದೂ ವಿಶೇಷ.

(ದಟ್ಸ್‌ ಕನ್ನಡ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X