ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೆಲಗಿಗೆ ಈ ಕೇಸ್‌ನಲ್ಲಿ 10ವರ್ಷ ಜೈಲು, ಉಳಿದ 48ಕೇಸ್‌ಗೆ?

By Staff
|
Google Oneindia Kannada News

ತೆಲಗಿಗೆ ಈ ಕೇಸ್‌ನಲ್ಲಿ 10ವರ್ಷ ಜೈಲು, ಉಳಿದ 48ಕೇಸ್‌ಗೆ?
ತೆಲಗಿಯ ಇಬ್ಬರು ಸಹಚರರಿಗೂ ಕಠಿಣ ಶಿಕ್ಷೆ, ಇದು ಮೊದಲ ಪ್ರಕರಣವಷ್ಟೆ ; ಉಳಿದ ಪ್ರಕರಣಗಳ ಪಾಡು?

ಮುಂಬಯಿ : ನಗರದ ವಿಶೇಷ ನ್ಯಾಯಾಲಯ, ನಕಲಿ ಛಾಪಾ ಕಾಗದ ಹಗರಣದ ರೂವಾರಿ ಅಬ್ದುಲ್‌ ಕರೀಂ ತೆಲಗಿಗೆ 10ವರ್ಷಗಳ ಕಠಿಣ ಶಿಕ್ಷೆ ವಿಧಿಸಿದೆ.

ವಿಡಿಯೋ ಕಾನ್ಫರನ್ಸ್‌ ಮೂಲಕ ವಿಚಾರಣೆ ಕೈಗೆತ್ತಿಕೊಂಡ ವಿಶೇಷ ನ್ಯಾಯಾಧೀಶ ಯು.ಡಿ.ಸಾಳ್ವೆ, ತೆಲಗಿ ಹಾಗೂ ಆತನ ಸಹಚರರಾದ ಸಂಜಯ್‌ ಗಾಯಕವಾಡ್‌ ಹಾಗೂ ರಾಮ್‌ರತನ್‌ ಸೋನಿಗೆ ತಲಾ 50ಸಾವಿರ ರೂಪಾಯಿ ದಂಡ ಹಾಗೂ 10ವರ್ಷ ಕಠಿಣ ಶಿಕ್ಷೆ ವಿಧಿಸಿದರು.

1995ರಲ್ಲಿ ಪೂರ್ಣಾನಂದ ಆ್ಯಂಡ್‌ ಕಂಪನಿ ಎಂಬ ವಕೀಲರ ಸಂಸ್ಥೆಗೆ, ತೆಲಗಿ ಸುಮಾರು 17ಲಕ್ಷ ರೂಪಾಯಿ ಮೌಲ್ಯದ ಛಾಪಾ ಕಾಗದ ಮಾರಾಟ ಮಾಡಿದ್ದ. ಈ ಪ್ರಕರಣದಲ್ಲಿ ತೆಲಗಿ ಹಾಗೂ ಆತನ ಸಹಚರರು ತಪ್ಪಿತಸ್ಥರೆಂದು ಸಾಬೀತಾದ ಹಿನ್ನೆಲೆಯಲ್ಲಿ ವಿಶೇಷ ನ್ಯಾಯಾಲಯ ಈ ಶಿಕ್ಷೆ ವಿಧಿಸಿದೆ.

ತೆಲಗಿ ವಿರುದ್ಧ ಇರುವ ಒಟ್ಟು ಪ್ರಕರಣಗಳ ಸಂಖ್ಯೆ 48. ಪ್ರಸ್ತುತ ಪ್ರಕರಣವೇ ಇವುಗಳ ಪೈಕಿ ಇತ್ಯರ್ಥವಾದ ಮೊಟ್ಟಮೊದಲ ಪ್ರಕರಣ. ಮೊದಲ ಪ್ರಕರಣದ ತೀರ್ಪು ಹೊರಬಿದ್ದಿರುವುದರಿಂದ, ಉಳಿದ ಪ್ರಕರಣಗಳು ಸಹಜವಾಗಿಯೇ ಭಾರೀ ಕುತೂಹಲ ಉಂಟುಮಾಡಿವೆ.

(ಏಜನ್ಸೀಸ್‌)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X