ಚಿಕ್ಕಮಗಳೂರಿನಲ್ಲಿ ದತ್ತಜಯಂತಿಯ ಆನಂದ ಮತ್ತು ಆತಂಕ
ಚಿಕ್ಕಮಗಳೂರಿನಲ್ಲಿ ದತ್ತಜಯಂತಿಯ ಆನಂದ ಮತ್ತು ಆತಂಕ
ಡಿ.14ರಂದು ಸಂಘಪರಿವಾರದಿಂದ ದತ್ತಜಯಂತಿಗೆ ಸಿದ್ಧತೆ, ಅದನ್ನು ತಡೆಯಲು ಕೋಮು ಸೌಹಾರ್ದ ವೇದಿಕೆಯಿಂದ ಸಿದ್ಧತೆ
ಡಿ.14ರಂದು ಸಂಘ ಪರಿವಾರ ನಡೆಸಲುದ್ದೇಶಿಸಿರುವ ದತ್ತ ಜಯಂತಿ ತಡೆಯದಿದ್ದರೆ, ರಕ್ತ ಹರಿಸಿಯಾದರೂ ನಾವು ತಡೆಯುತ್ತೇವೆ ಎಂದು ಕೋಮು ಸೌಹಾರ್ದ ವೇದಿಕೆ ಎಚ್ಚರಿಸಿದೆ.
ದತ್ತ ಜಯಂತಿಗೆ ಸಂಬಂಧಿಸಿದಂತೆ ಎಡ ಮತ್ತು ಬಲಪಂಥೀಯರ ನಡುವೆ ವಿಚಾರಗಳ ಸಂಘರ್ಷ ನಡೆದಿದೆ. ಪರಿಸ್ಥಿತಿಯ ಲಾಭ ಪಡೆಯಲು ರಾಜಕೀಯ ಹುನ್ನಾರಗಳು ನಡೆಯುತ್ತಿವೆ.
ಸೌಹಾರ್ದತೆಯನ್ನು ಬಿಂಬಿಸುವ ಹಿಂದೂ ಮತ್ತು ಮುಸಲ್ಮಾನರ ಧಾರ್ಮಿಕ ಕೇಂದ್ರವಾಗಿದ್ದ ಬಾಬಾ ಬುಡನ್‌ಗಿರಿಯಲ್ಲಿ ಈಗ ಕೋಮು ವಾಸನೆ ಹರಡಿದೆ. ದಕ್ಷಿಣದ ಅಯೋಧ್ಯೆಯನ್ನಾಗಿ, ಕರ್ನಾಟಕ ಗುಜರಾತ್ ಆಗಿ ಬಾಬಾ ಬುಡನ್‌ಗಿರಿಯನ್ನು ಪರಿವರ್ತಿಸಿ, ರಾಜಕೀಯ ಲಾಭ ಪಡೆಯಲು ರಾಜಕೀಯ ಪಕ್ಷಗಳು ಪ್ರಯತ್ನಿಸಿವೆ ಎಂಬ ಅಭಿಪ್ರಾಯ ಸಾರ್ವತ್ರಿಕವಾಗಿ ಕೇಳಿ ಬರುತ್ತಿದೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications