ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅರಣ್ಯ ಇಲಾಖೆ ಮಾಹಿತಿಗೆ ವೆಬ್‌ಸೈಟ್‌ ಆರಂಭ

By Staff
|
Google Oneindia Kannada News

ಅರಣ್ಯ ಇಲಾಖೆ ಮಾಹಿತಿಗೆ ವೆಬ್‌ಸೈಟ್‌ ಆರಂಭ
www.karnatakaforestdepartment.org ನಲ್ಲಿ ಅರಣ್ಯ ಇಲಾಖೆಯ ಬಗ್ಗೆ ಸಂಪೂರ್ಣ ಮಾಹಿತಿ..

ಬೆಂಗಳೂರು: ಅರಣ್ಯ ಇಲಾಖೆಯ ಕುರಿತು ಸಮಗ್ರ ಮಾಹಿತಿಯನ್ನು ನೀಡಲು, ಇಲಾಖೆಯು ವೆಬ್‌ಸೈಟ್‌ ಆರಂಭಿಸಿದೆ ಎಂದು ಅರಣ್ಯ ಖಾತೆ ಸಚಿವ ಗುರುಪಾದಪ್ಪ ನಾಗಮಾರಪಲ್ಲಿ ತಿಳಿಸಿದ್ದಾರೆ.

ವೆಬ್‌ಸೈಟ್‌ ಉದ್ಘಾಟಿಸಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಚಿವ ನಾಗಮಾರಪಲ್ಲಿ ಪರಿಸರ ಪ್ರೇಮಿಗಳಿಗೆ ಇದೊಂದು ಒಳ್ಳೆಯ ಕೈಪಿಡಿ. ಈ ವೆಬ್‌ಸೈಟ್‌ ನೋಡಿ ಇತರೆ ರಾಜ್ಯಗಳಿಂದಲೂ ನಮ್ಮಲ್ಲಿನ ಅರಣ್ಯಗಳಿಗೆ ಜನರು ಬರುವಂತಾಗಬೇಕು. ವೆಬ್‌ಸೈಟ್‌ ಆರಂಭ, ಸಾರ್ವಜನಿಕರು ಇಲಾಖೆಯಾಂದಿಗೆ ನೇರವಾಗಿ ಸಂಪರ್ಕಿಸಬಹುದಾದ ವ್ಯವಸ್ಥೆಯನ್ನು ಕಲ್ಪಿಸಿದಂತಾಗಿದೆ ಎಂದರು.

ಈ ವೆಬ್‌ಸೈಟ್‌ನಲ್ಲಿ ರಾಜ್ಯದಲ್ಲಿರುವ ಅಭಯಾರಣ್ಯ, ಅವುಗಳ ವಿಸ್ತೀರ್ಣ, ಅಲ್ಲಿರುವ ಪ್ರಾಣಿ ಸಂಕುಲದ ಬಗ್ಗೆ ಮಾಹಿತಿ, ಉಳಿದುಕೊಳ್ಳಲು ಸ್ಥಳಾವಕಾಶ ಇವೇ ಮೊದಲಾದ ಮಾಹಿತಿಯನ್ನು ಕಾಣಬಹುದಾಗಿದೆ ಎಂದು ಅರಣ್ಯ ಇಲಾಖೆಯ ಮುಖ್ಯ ಸಂರಕ್ಷಣಾಧಿಕಾರಿ ಆರ್‌. ಎಂ. ರೇ. ವಿವರಿಸಿದರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X