ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಸದಿಂದ ವಿದ್ಯುತ್‌ ಉತ್ಪಾದನೆ ಒಪ್ಪಂದಕ್ಕೆ ಪಾಲಿಕೆ ಸಹಿ

By Staff
|
Google Oneindia Kannada News

ಕಸದಿಂದ ವಿದ್ಯುತ್‌ ಉತ್ಪಾದನೆ ಒಪ್ಪಂದಕ್ಕೆ ಪಾಲಿಕೆ ಸಹಿ
ಗೊಬ್ಬರ ತಯಾರಿಕೆಗೆ 350 ಮೆಟ್ರಿಕ್‌ಟನ್‌ ಕಸ ಬಳಕೆ

ಬೆಂಗಳೂರು : ಕಸದಿಂದ ವಿದ್ಯುತ್‌ ಉತ್ಪಾದಿಸುವ 50ಕೋಟಿ ರೂ.ವೆಚ್ಚದ ಒಪ್ಪಂದಕ್ಕೆ ಬೆಂಗಳೂರು ಮಹಾನಗರ ಪಾಲಿಕೆ ಮತ್ತು ಶ್ರೀನಿವಾಸ ಗಾಯಿತ್ರಿ ರಿಸೋರ್ಸ್‌ ರಿಕವರಿ ಲಿಮಿಟೆಡ್‌ ಸಹಿಹಾಕಿವೆ.

ಪ್ರತಿನಿತ್ಯ ರಾಜಧಾನಿ ನಗರದಲ್ಲಿ ಸಂಗ್ರಹವಾಗುವ 2200 ಮೆಟ್ರಿಕ್‌ ಟನ್‌ ಕಸದಲ್ಲಿ, ಒಂದು ಸಾವಿರ ಮೆಟ್ರಿಕ್‌ ಟನ್‌ ಕಸವನ್ನು ಈ ಯೋಜನೆಗೆ ಬಳಸಿಕೊಳ್ಳಲಾಗುವುದು. ಈ ಕಸದಿಂದ 8 ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದಿಸಬಹುದು. ಯೋಜನೆಯಿಂದ ಪಾಲಿಕೆಗೆ ಕಸ ವಿಲೇವಾರಿಯ ತಲೆನೋವು ತುಸು ಕಡಿಮೆಯಾಗಲಿದೆ ಎನ್ನಲಾಗಿದೆ.

ಪಾಲಿಕೆಯ ಮೇಯರ್‌ ಆರ್‌. ನಾರಾಯಣಸ್ವಾಮಿ, ವಿಶೇಷ ಆಯುಕ್ತ ಸುಭಾಷ್‌ಚಂದ್ರ, ಎಸ್‌ಜಿ ಎಸ್‌ಆರ್‌ ಸಂಸ್ಥೆಯ ರಮೇಶ್‌ ಬಿಂಗಿ ಈ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X