ರೇಷ್ಮೆ ಸಚಿವ ಚನ್ನಿಗಪ್ಪ ಅವರಿಗೆ ನಕ್ಸಲರ ಬೆದರಿಕೆ ಕರೆ
ರೇಷ್ಮೆ ಸಚಿವ ಚನ್ನಿಗಪ್ಪ ಅವರಿಗೆ ನಕ್ಸಲರ ಬೆದರಿಕೆ ಕರೆ
ಪ್ಯಾಕೇಜ್ ಅನುಷ್ಠಾನದತ್ತ ನಿರ್ಲಕ್ಷ್ಯವಹಿಸಿದರೆ, ಮತ್ತೊಂದು ನರಮೇಧ
ನಕ್ಸಲ್‌ಪೀಡಿತ ಪಾವಗಡ ತಾಲೂಕಿನ ಅಭಿವೃದ್ಧಿಗೆ ರಾಜ್ಯ ಸರ್ಕಾರ 80ಕೋಟಿ ರೂ.ಪ್ಯಾಕೇಜ್ ಘೋಷಿಸಿರುವುದು ಸ್ವಾಗತಾರ್ಹ. ಅದನ್ನು ವ್ಯವಸ್ಥಿತವಾಗಿ ಅನುಷ್ಠಾನಗೊಳಿಸದಿದ್ದರೆ, ಮುಂದಿನ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ದೂರವಾಣಿಯಲ್ಲಿ ನಕ್ಸಲೀಯನೆಂದು ಗುರ್ತಿಸಿಕೊಂಡ ಅನಾಮಿಕ ವ್ಯಕ್ತಿ ಚನ್ನಿಗಪ್ಪ ಅವರನ್ನು ಬೆದರಿಸಿದ್ದಾನೆ.
ವೆಂಕಟಮ್ಮನಹಳ್ಳಿಯಲ್ಲಿ 7ಮಂದಿ ಪೋಲಿಸರನ್ನು ಹತ್ಯೆಗೈದ ನಕ್ಸಲ್ ತಂಡದ ಸದಸ್ಯನೆಂದು ಗುರ್ತಿಸಿಕೊಂಡಿರುವ ಆತ, ಸರ್ಕಾರ ಪ್ಯಾಕೇಜ್ ಅನುಷ್ಠಾನದತ್ತ ನಿರ್ಲಕ್ಷವಹಿಸಿದರೆ, ಮತ್ತೊಂದು ನರಮೇಧ ತಪ್ಪದೆಂದು ಎಚ್ಚರಿಸಿದ್ದಾನೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಚನ್ನಿಗಪ್ಪ, ಇಂತಹ ಬೆದರಿಕೆಗಳಿಗೆ ಬಗ್ಗುವುದಿಲ್ಲ. ಆದರೆ ನಕ್ಸಲ್ ಪೀಡಿತ ಪ್ರದೇಶಗಳ ಅಭಿವೃದ್ಧಿಗೆ ಪ್ಯಾಕೇಜ್ ಅನುಷ್ಠಾನಗೊಳಿಸಲು ಸರ್ಕಾರ ಬದ್ಧವಾಗಿದೆ ಎಂದಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications