ಬಿಎಂಟಿಸಿ:ಮಾಹಿತಿ-ದೂರಿಗಾಗಿ ಕರೆ ಕೇಂದ್ರ ಶುರು
ಬಿಎಂಟಿಸಿ:ಮಾಹಿತಿ-ದೂರಿಗಾಗಿ ಕರೆ ಕೇಂದ್ರ ಶುರು
ನಗರದ ವಿವಿಧೆಡೆ ನಾಲ್ಕು ಹೊಸ ಬಿಎಂಟಿಸಿ ಬಸ್‌ನಿಲ್ದಾಣಗಳ ನಿರ್ಮಾಣ
ಬಿಎಂಟಿಸಿ ಕರೆಕೇಂದ್ರವನ್ನು ಶುಕ್ರವಾರ ಗಾಂಧಿನಗರದ ಶಾಸಕ ದಿನೇಶ್ ಗುಂಡೂರಾವ್ ಉದ್ಘಾಟಿಸಿದರು.
ಈ ಕರೆ ಕೇಂದ್ರದ ದೂರವಾಣಿ ಸಂಖ್ಯೆ-25750565ಕ್ಕೆ ಬೆಳಗ್ಗೆ 8ರಿಂದ ರಾತ್ರಿ 8ರವರೆಗೆ ಸಾರ್ವಜನಿಕರು ಕರೆ ಮಾಡಿ ಬಿಎಂಟಿಸಿ ಬಸ್‌ಗಳ ಆಗಮನ-ನಿರ್ಗಮನ ಸೇರಿದಂತೆ ವಿವಿಧ ಮಾಹಿತಿಗಳನ್ನು ಪಡೆಯಬಹುದು. ಅಲ್ಲದೇ ಬಸ್ ಚಾಲಕರು-ನಿರ್ವಾಹಕರ ಅಸಭ್ಯ ಅಥವಾ ಬೇಜವಬ್ದಾರಿಯ ಬಗ್ಗೆ ದೂರು ನೀಡಬಹುದು ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ಉಪೇಂದ್ರ ತ್ರಿಪಾಠಿ ತಿಳಿಸಿದ್ದಾರೆ.
ಪ್ರಯಾಣಿಗರ ಅನುಕೂಲಕ್ಕಾಗಿ ಶಾಂತಿನಗರದ ಮಾದರಿಯಲ್ಲಿಯೇ ನಗರದ ಇತರೆಡೆಗಳಲ್ಲಿ ನಾಲ್ಕು ಬಸ್ ನಿಲ್ದಾಣಗಳನ್ನು ನಿರ್ಮಿಸಲು ಬಿಎಂಟಿಸಿ ಯೋಜನೆ ರೂಪಿಸಿದೆ ಎಂದು ತ್ರಿಪಾಠಿ ಹೇಳಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ಬೆಂಗಳೂರು ಡೈರಿ












Click it and Unblock the Notifications