ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತವರಲ್ಲಿ ಶಾರದಾ ಬಯ್ಯಣ್ಣರ ಆತ್ಮಕಥನ ಬಿಡುಗಡೆ

By Staff
|
Google Oneindia Kannada News

ತವರಲ್ಲಿ ಶಾರದಾ ಬಯ್ಯಣ್ಣರ ಆತ್ಮಕಥನ ಬಿಡುಗಡೆ
ಆತ್ಮಕಥನದ ಎಲ್ಲ ಅಂಶಗಳು‘ಪಯಣ’ ಕೃತಿಯಲ್ಲಿವೆ -ಜಿ.ಎಸ್‌.ಶಿವರುದ್ರಪ್ಪ

ಬೆಂಗಳೂರು : ಸಾರಸ್ವತ ಲೋಕದಲ್ಲಿ ಮಹಿಳೆಯರ ಪಾತ್ರ ಕತೆ, ಕವನಕ್ಕಷ್ಟೇ ಸೀಮಿತವಾಗಿದೆ. ನಾಟಕ, ಪ್ರಬಂಧ, ವಿಮರ್ಶೆ, ಸಂಶೋಧನೆ, ಆತ್ಮಕಥನಗಳ ರಚನೆಯಲ್ಲಿ ತೊಡಗಿಸಿಕೊಂಡ ಮಹಿಳೆಯರ ಸಂಖ್ಯೆ ವಿರಳ. ಈ ಕೊರತೆಯನ್ನು ತುಸು ಕಡಿಮೆ ಮಾಡುವ ನಿಟ್ಟಿನಲ್ಲಿ ಪಯಣ ಹೊರಬಂದಿದೆ ಎಂದು ಕವಿ ಡಾ.ಜಿ.ಎಸ್‌.ಶಿವರುದ್ರಪ್ಪ ಹೇಳಿದರು.

ಬಿ.ಪಿ. ವಾಡಿ-ಯಾ ರಸ್ತೆ-ಯ-ಲ್ಲಿನ ಇಂ-ಡಿ-ಯ-ನ್‌ ಇನ್‌-ಸ್ಟಿ-ಟ್ಯೂ-ಟ್‌ ಆಫ್‌ ವರ್ಲ್ಡ್‌ ಕಲ್ಚ-ರ್‌ ಸಭಾಂ-ಗ-ಣ--ದ-ಲ್ಲಿ ಸೋಮವಾರ(ಫೆ.14)ಶಾರದಾ ಬಯ್ಯಣ್ಣ ಅವರ ಆತ್ಮಕಥನ ‘ಪಯಣ’ ಕೃತಿಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಆತ್ಮಕಥನ ಬರೆಯುವುದು ಕಷ್ಟ. ಆತ್ಮಶೋಧನೆಯ ಈ ಕೆಲಸಕ್ಕೆ ಧೈರ್ಯ ಬೇಕು. ಸಮೃದ್ಧ ಅನುಭವಗಳೊಂದಿಗೆ ತಮ್ಮನ್ನು ತಾವೇ ವೈಭವೀಕರಿಸಿಕೊಳ್ಳದ ಮನಸ್ಸು ಬೇಕು. ಈ ಎಲ್ಲ ಅಂಶಗಳು ಶಾರದ ಬೈಯಣ್ಣ ಅವರ ‘ಪಯಣ’ ಕೃತಿಯಲ್ಲಿವೆ ಎಂದರು.

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಯು.ಆರ್‌.ಅನಂತಮೂರ್ತಿ ಮಾತನಾಡಿ, ಯಾರಲ್ಲಿ ಬಾಲ್ಯದ ನೆನಪು ದಟ್ಟವಾಗಿರುತ್ತದೆಯೋ ಅವರಲ್ಲಿ ಸೃಜನ ಶೀಲತೆ ಇರುತ್ತದೆ. ಮುಗ್ಧತೆ, ಬೆರಗು ತುಂಬಿಕೊಂಡಿರುತ್ತದೆ ಎಂದರು.

ಕವಿ ಡಾ.ದೊಡ್ಡರಂಗೇಗೌಡ ಮಾತನಾಡಿ, ಈ ಕೃತಿಯಲ್ಲಿ ನೋವು-ನಲಿವು, ಸೋಲು-ಗೆಲುವು ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಆತ್ಮವಿಶ್ವಾಸ, ಸ್ವಾಭಿಮಾನದ ಸೆಲೆ ಮತ್ತು ಬೆವರಿನ ಬೆಲೆಯಿದೆ ಎಲ್ಲವೂ ಸಹ ಅಡಕಗೊಂಡಿದೆ ಎಂದು ಅಭಿಪ್ರಾಯಪಟ್ಟರು.

ಮಾಜಿ ಸಚಿವೆ ರಾಣಿ ಸತೀಶ್‌ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು. ಸಾಹಿತಿ ಡಾ.ಸಾ.ಶಿ.ಮರುಳಯ್ಯ, ಕಾದಂಬರಿಕಾರ್ತಿ ಪ್ರೇಮಾಭಟ್‌ ಮತ್ತಿತರರು ಹಾಜರಿದ್ದರು.

(ಇನ್ಫೋ ವಾರ್ತೆ)

ಇದನ್ನೂ ಓದಿ:
ಪುಸ್ತಕ ಪ್ರಸವಕ್ಕಾಗಿ ತವರಿಗೆ ಶಾರದಾ ಬಯ್ಯಣ್ಣ ಪಯಣ

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X