ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೂಜಾರಿಗೆ ಖೊಕ್‌? ಕಾಂಗ್ರೆಸ್‌ ಸ್ಥಿತಿಗತಿ ವೀಕ್ಷಿಸಲು ಆಂಟನಿ ಆಗಮನ

By Staff
|
Google Oneindia Kannada News

ಪೂಜಾರಿಗೆ ಖೊಕ್‌? ಕಾಂಗ್ರೆಸ್‌ ಸ್ಥಿತಿಗತಿ ವೀಕ್ಷಿಸಲು ಆಂಟನಿ ಆಗಮನ
ಕೆಪಿಸಿಸಿ ಅಧ್ಯಕ್ಷ ಸ್ಥಾನದತ್ತ ಎಲ್ಲರ ಕಣ್ಣು, ಸೋನಿಯಾ ದಯೆ ಯಾರಿಗೆ?

ಬೆಂಗಳೂರು: ಕಾಂಗ್ರೆಸ್‌ ನಾಯಕತ್ವ ವಿಚಾರಕ್ಕೆ ಈಗ ಕಾವು ಬಂದಿದೆ. ಕೆಪಿಸಿಸಿ ಅಧ್ಯಕ್ಷ ಜನಾರ್ದನ ಪೂಜಾರಿಯನ್ನು ಮನೆಗೆ ಕಳುಹಿಸಲು ನಾನಾ ಗುಂಪುಗಳು ತೆರೆಮರೆಯಲ್ಲಿ ಪ್ರಯತ್ನಿಸುತ್ತಿರುವ ಬೆನ್ನಲ್ಲಿಯೇ ಕರ್ನಾಟಕದಲ್ಲಿ ಪಕ್ಷದ ಸ್ಥಿತಿಗತಿಗಳ ವೀಕ್ಷಣೆಗೆ ರಾಜ್ಯದ ಉಸ್ತುವಾರಿವಹಿಸಿರುವ ಕಾಂಗ್ರೆಸ್‌ ಕಾರ್ಯಕಾರಿ ಸಮತಿ ಸದಸ್ಯ ಎ.ಕೆ.ಆಂಟನಿ ಗುರುವಾರ(ಜ.27)ನಗರಕ್ಕೆ ಆಗಮಿಸಿದ್ದಾರೆ.

ಯಾವುದೇ ಪೂರ್ವಾಗ್ರಹ ಇಲ್ಲದೇ ರಾಜ್ಯಕ್ಕೆ ಆಗಮಿಸಿದ್ದೇನೆ. ನಾಯಕತ್ವ ಬದಲಾವಣೆ ಸೇರಿದಂತೆ ವಿವಿಧ ಸಂಗತಿಗಳ ಬಗ್ಗೆ ಮೂರುದಿನಗಳ ಕಾಲ ಕಾಂಗ್ರೆಸ್‌ ಮುಖಂಡರು, ಕಾರ್ಯಕರ್ತರ ಭೇಟಿಮಾಡಿ ಸಮಗ್ರ ವರದಿಯನ್ನು ವರಿಷ್ಠರಿಗೆ ಸಲ್ಲಿಸುವುದಾಗಿ ಎ.ಕೆ.ಆಂಟನಿ ತಿಳಿಸಿದ್ದಾರೆ.

ರಾಜೀನಾಮೆ: ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆಏಳುತಿಂಗಳ ಹಿಂದೆಯೇ ಜನಾರ್ದನ ಪೂಜಾರಿ ರಾಜೀನಾಮೆ ಸಲ್ಲಿಸಿದ್ದು, ಮುಂದಿನ ಆದೇಶದ ತನಕ ಮುಂದುವರೆಯುವಂತೆ ಸೋನಿಯಾ ಗಾಂಧಿ ಸೂಚಿಸಿದ್ದಾರೆ. ಆ ಪ್ರಕಾರವೇ ಅವರು ಮುಂದುವರೆದಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಪೂಜಾರಿ, ನಾನು ರಾಜೀನಾಮೆ ಸಲ್ಲಿಸಿಲ್ಲ. ಆದರೆ ಮುಂದಿನ ಕೆಪಿಸಿಸಿ ಅಧ್ಯಕ್ಷ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದಿದ್ದಾರೆ.

ಅತೃಪ್ತರ ದಂಡು: ಸಮ್ಮಿಶ್ರ ಸರಕಾರದಲ್ಲಿ ಜೆಡಿಎಸ್‌ ಕೈ ಮೇಲಾಗಿದೆ. ಕಾಂಗ್ರೆಸ್‌ನವರನ್ನು ಕೇಳುವವರಿಲ್ಲ...ಪೂಜಾರಿ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ...ಹಗುರ ಹೇಳಿಕೆಗಳಿಂದ ಅವರು ಕಾಂಗ್ರೆಸ್‌ ಮಾನ ಕಳೆಯುತ್ತಿದ್ದಾರೆ...ಮುಂದಿನ ಪಂಚಾಯಿತಿ ಚುನಾವಣೆಯನ್ನು ಸಮರ್ಥವಾಗಿ ಎದುರಿಸಲು ನಾಯಕತ್ವ ಬದಲಿಸಿ ಎಂದು ಸೋನಿಯಾ ಗಾಂಧಿಯನ್ನು ವಿವಿಧ ಕಾಂಗ್ರೆಸ್‌ ಬಣಗಳು ಅನೇಕ ಸಲ ಒತ್ತಾಯಿಸಿದ್ದವು.

ಆಕಾಂಕ್ಷಿಗಳು: ಎಸ್‌.ಎಂ.ಕೃಷ್ಣ ಮಹಾರಾಷ್ಟ್ರ ರಾಜ್ಯಪಾಲರಾಗಿ ನೇಮಕಗೊಂಡ ನಂತರ ಒಕ್ಕಲಿಕರ ನಾಯಕತ್ವ ಪಕ್ಷಕ್ಕೆ ಇಲ್ಲದಂತಾಗಿದೆ. ಹೀಗಾಗಿ ನಮ್ಮನ್ನು ಪರಿಗಣಿಸಿ ಎಂದು ಡಿ.ಕೆ.ಶಿವಕುಮಾರ್‌, ಎಚ್‌.ಸಿ.ಶ್ರೀಕಂಠಯ್ಯ, ಡಿ.ಚಂದ್ರೆಗೌಡ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಕ್ಯೂನಲ್ಲಿ ನಿಂತಿದ್ದಾರೆ.

ಕನಕ ಗೋಪುರದ ಗದ್ದಲದ ಮೂಲಕ ಹಿಂದುಳಿದ ವರ್ಗದ ನಾಯಕರಾಗಿರುವ ಮಾಜಿ ಸಚಿವ ಎಚ್‌.ವಿಶ್ವನಾಥ್‌ ಸಹ ಆಕಾಂಕ್ಷಿಗಳೆಂದು ಗುರ್ತಿಸಿಕೊಂಡಿದ್ದಾರೆ. ಏಪ್ರಿಲ್‌ನಲ್ಲಿ ಕೆಪಿಸಿಸಿ ಚುನಾವಣೆ ನಡೆಯುವ ಸಾಧ್ಯತೆಗಳಿವೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X