ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಲೇ ಸನಿಯಾ! ಭಾರತೀಯ ಮಹಿಳಾಟೆನ್ನಿಸ್‌ ಅಂಕಣದಿ ಬೆಳ್ಳಿಚುಕ್ಕಿ

By Staff
|
Google Oneindia Kannada News

ಭಲೇ ಸನಿಯಾ! ಭಾರತೀಯ ಮಹಿಳಾಟೆನ್ನಿಸ್‌ ಅಂಕಣದಿ ಬೆಳ್ಳಿಚುಕ್ಕಿ
ಗ್ರಾಂಡ್‌ಸ್ಲಾಂ ಟೆನ್ನಿಸ್‌ನ ಮೂರನೇ ಸುತ್ತು ಪ್ರವೇಶಿಸಿದ ಪ್ರಥಮ ಭಾರತೀಯ ಮಹಿಳೆ

ಮೆಲ್ಬೋರ್ನ್‌ : ಭಾರತೀಯ ಕ್ರೀಡಾಲೋಕದಲ್ಲೊಂದು ಬೆಳ್ಳಿಚುಕ್ಕಿ ಮೂಡಿದೆ. ಭಾರತೀಯ ಟೆನ್ನಿಸ್‌ನ ಯುವತಾರೆ ಸನಿಯಾ ಮಿರ್ಜಾ ಇತಿಹಾಸ ನಿರ್ಮಿಸಿದ್ದು , ಗ್ರಾಂಡ್‌ಸ್ಲಾಂ ಟೆನ್ನಿಸ್‌ನ ಮೂರನೇ ಸುತ್ತು ಪ್ರವೇಶಿಸಿರುವ ಪ್ರಥಮ ಭಾರತೀಯ ಮಹಿಳೆ ಎನ್ನುವ ಅಗ್ಗಳಿಕೆಗೆ ಪಾತ್ರರಾಗಿದ್ದಾರೆ.

ವಿಶ್ವದ 84ನೇ ಶ್ರೇಯಾಂಕದ ಹಂಗೇರಿಯ ಪೆಟ್ರಾ ಮಂಡುಲ್ಲಾ ಅವರನ್ನು 6-2, 6-1 ನೇರ ಸೆಟ್‌ಗಳಲ್ಲಿ ಸೋಲಿಸುವ ಮೂಲಕ ಸನಿಯಾ ಮಿರ್ಜಾ ಮೆಲ್ಬೋರ್ನ್‌ನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯನ ಓಪನ್‌ ಟೆನ್ನಿಸ್‌ನ ಮೂರನೇ ಸುತ್ತು ತಲುಪಿದ್ದಾರೆ. ಮೂರನೇ ಸುತ್ತಿನಲ್ಲಿ ಅಮೆರಿಕದ ಪ್ರಬಲ ಆಟಗಾರ್ತಿ, ವಿಶ್ವದ ಏಳನೇ ಶ್ರೇಯಾಂಕದ ಸೆರೇನಾ ವಿಲಿಯಂಸ್‌ ಅವರನ್ನು ಸನಿಯಾ ಎದುರಿಸಲಿದ್ದಾರೆ.

ಪೆಟ್ರಾ ವಿರುದ್ಧದ ಗೆಲುವಿನ ಕುರಿತು ಹರ್ಷ ವ್ಯಕ್ತಪಡಿಸಿರುವ ಸನಿಯಾ, ಮೂರನೇ ಸುತ್ತಿನಲ್ಲಿ ಸೇರೆನಾ ವಿರುದ್ಧ ಆಡಲು ಕಾತುರವಾಗಿರುವುದಾಗಿ ಹೇಳಿದ್ದಾರೆ. ಸೆರೇನಾಳ ಬಲಿಷ್ಠ ಹೊಡೆತಗಳು ಹೇಗಿರುತ್ತವೆ ಎನ್ನುವುದನ್ನು ನೋಡಲು ಕಾತರಳಾಗಿದ್ದೇನೆ ಎಂದು ಸನಿಯಾ ಹೇಳಿದ್ದಾರೆ.

ಈ ಮುನ್ನ 1998ರಲ್ಲಿ ಭಾರತದ ನಿರುಪಮಾ ಸಂಜೀವ್‌ (ನಿರುಪಮಾ ವೈದ್ಯನಾಥನ್‌) ಆಸ್ಟ್ರೇಲಿಯನ್‌ ಓಪನ್‌ನಲ್ಲಿ ಎರಡನೇ ಸುತ್ತು ಪ್ರವೇಶಿಸಿದುದೇ ದಾಖಲೆಯಾಗಿತ್ತು .

(ಏಜನ್ಸೀಸ್‌)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X