ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕಕ್ಕೆ ಬರುತಿದೆ ರಾಜಸ್ಥಾನ ಮಾದರಿ ‘ವಿಲಾಸಿ ರೈಲು’ ಬಂಡಿ

By Staff
|
Google Oneindia Kannada News

ಕರ್ನಾಟಕಕ್ಕೆ ಬರುತಿದೆ ರಾಜಸ್ಥಾನ ಮಾದರಿ ‘ವಿಲಾಸಿ ರೈಲು’ ಬಂಡಿ
ಬೆಂಗಳೂರು-ಮೈಸೂರು-ಹಾಸನ-ಹೊಸಪೇಟೆ-ಗದಗ್‌-ಲೊಂಡಾ..... ರೈಟ್‌ ರೈಟ್‌

ಬೆಂಗಳೂರು: ಭಾರತೀಯ ರೈಲ್ವೆ ಇಲಾಖೆ ರಾಜಸ್ಥಾನ ಮಾದರಿಯಲ್ಲಿ ವಿಲಾಸಿ ರೈಲು ಸೇವೆಯನ್ನು ರಾಜ್ಯದಲ್ಲೂ ಆರಂಭಿಸಲಿದೆ.

ಪ್ಯಾಲೇಸ್‌ ಆನ್‌ವೀಲ್ಹ್‌- ಈ ವಿಶೇಷ ವಿಲಾಸಿ ರೈಲು 2115 ಕೀ.ಮೀ ವ್ಯಾಪ್ತಿಯಲ್ಲಿ ಸಂಚರಿಸಲಿದೆ. ಬೆಂಗಳೂರು, ಮೈಸೂರು, ಹಾಸನ, ಹೊಸಪೇಟೆ(ಹಂಪಿ), ಗದಗ್‌, ಲೊಂಡಾ, ಮಡಗಾಂವ್‌,ಬೆಂಗಳೂರು ಮಾರ್ಗದಲ್ಲಿ ರೈಲು ಸಂಚರಿಸಲಿದೆ. ಹದಿನೆಂಟು ಬೋಗಿಗಳ ಈ ಗಾಲಿ ಮೇಲಿನ ಅರಮನೆ(ರೈಲು)ಯಲ್ಲಿ ಹನ್ನೊಂದು ಹವಾನಿಯಂತ್ರಿತ ಬೋಗಿಗಳಿವೆ. ಉಪಹಾರಗೃಹ, ಸಭಾಂಗಣ ಮತ್ತಿತರ ವ್ಯವಸ್ಥೆಗಳನ್ನು ಇದು ಹೊಂದಿದೆ.

ರೈಲಿನ ನಿರ್ವಹಣೆಯನ್ನು ರಾಜ್ಯಪ್ರವಾಸೋದ್ಯಮ ಇಲಾಖೆಗೆ ವಹಿಸಲಾಗಿದೆ. ರಾಜ್ಯ ಸರಕಾರ ಈ ರೈಲಿಗಾಗಿ 20-12-2002ರಂದು ಸಲ್ಲಿಸಿದ್ದ ಮನವಿಗೆ ಭಾರತೀಯ ರೈಲ್ವೆ ಇಲಾಖೆ ಈಗ ಸ್ಪಂದಿಸಿದೆ ಎಂದು ಮೂಲಗಳು ತಿಳಿಸಿವೆ.

ಈ ರೈಲಿಗೆ 18 ಕೋಚ್‌ಗಳನ್ನು ಅಳಪಡಿಸಲಾಗಿದ್ದು, ಇವುಗಳಲ್ಲಿ 11 ಕೋಚ್‌ ಹವಾನಿಯಂತ್ರಣ ಸೆಲೂನ್‌ಗಳನ್ನು ಹೊಂದಿರುತ್ತವೆ. ಒಂದು ಹವಾನಿಯಂತ್ರಿತ ಬಾರ್‌, ಹವಾ ನಿಯಂತ್ರಿತ ಕಾನ್ಫ್‌ರೆನ್ಸ್‌ ಕಾರ್‌, ಹವಾನಿಯಂತ್ರಿತ ಉಪಹಾರ ಗೃಹ ಈ ರೈಲಿನಲ್ಲಿರುತ್ತದೆ. ಸಿಬ್ಬಂದಿಯ ವಸತಿ ಮತ್ತು ವಿದ್ಯುಚ್ಛಕ್ತಿ ಪೂರೈಕೆಗಾಗಿ ಒಂದು ಕೋಚ್‌ ಮೀಸಲಿಡಲಾಗಿದೆ.

ಮಾರ್ಚ್‌-ಏಪ್ರಿಲ್‌ ರಜಾ ದಿನಗಳಲ್ಲಿ ಹೆಚ್ಚು ಪ್ರವಾಸಿಗರನ್ನು ಆಕರ್ಷಿಯುವ ನಿರೀಕ್ಷೆಯನ್ನು ವಿಲಾಸಿ ರೈಲು ್ಫಯೋಜನೆ ಹೊಂದಿದೆ. ಈ ದಿನಗಳಲ್ಲಿ ಪ್ರಯಾಣದ ದರ ವಿದೇಶಿ ಪ್ರವಾಸಿಗರಿಗೆ ಒಂದು ದಿನಕ್ಕೆ 300 ಅಮೆರಿಕನ್‌ ಡಾಲರ್‌ ಮತ್ತು ದೇಶಿಯ ಪ್ರವಾಸಿಗರಿಗೆ 11680 ರೂಗಳಾಗಿವೆ. ಬೇರೆ ತಿಂಗಳಿನಲ್ಲಿ 200 ಡಾಲರ್‌ ಮತ್ತು 7760 ರೂ ಇರಲಿದೆ.

ಅಂದಹಾಗೆ, ರಾಜಸ್ತಾನದಲ್ಲಿ ವಿಲಾಸಿ ರೈಲು ಕಳೆದ 22 ವರ್ಷಗಳಿಂದ ಜನಪ್ರಿಯತೆಯನ್ನು ಪಡೆದಿದೆ.

(ಏಜನ್ಸೀಸ್‌)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X