ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏರೋ ಇಂಡಿಯಾ-2005ರಲ್ಲಿ ಅಮೆರಿಕ ವಾಯುಪಡೆ ಪ್ರದರ್ಶನ

By Staff
|
Google Oneindia Kannada News

ಏರೋ ಇಂಡಿಯಾ-2005ರಲ್ಲಿ ಅಮೆರಿಕ ವಾಯುಪಡೆ ಪ್ರದರ್ಶನ
ಫೆಬ್ರವರಿ 9ರಿಂದ ಐದು ದಿನಗಳ ಕಾಲ ಬೆಂಗಳೂರಲ್ಲಿ ಲೋಹದ ಹಕ್ಕಿಗಳ ಹಾರಾಟ

ಬೆಂಗಳೂರು : ಏರೋ ಇಂಡಿಯಾ-2005 ಬರುವ ಫೆಬ್ರವರಿ 9ರಿಂದ ಐದು ದಿನಗಳ ಕಾಲ ಬೆಂಗಳೂರಿನಲ್ಲಿ ನಡೆಯಲಿದೆ ಎಂದು ಯಲಹಂಕ ವಾಯುಪಡೆ ನಿಲ್ದಾಣದ ಕಮಾಂಡೆಂಟ್‌ ಏರ್‌ ಕಮಾಂಡರ್‌ ಎಸ್‌.ಪಿ.ಸಿಂಗ್‌ ತಿಳಿಸಿದರು.

ಪೋಖ್ರಾನ್‌ ಅಣ್ವಸ್ತ್ರ ಪ್ರಯೋಗದ ಹಿನ್ನೆಲೆಯಲ್ಲಿ ವಿಧಿಸಿದ್ದ ನಿರ್ಬಂಧಗಳನ್ನು ತೆಗೆದು ಹಾಕಿದ ಬಳಿಕ ಇದೇ ಮೊದಲ ಬಾರಿಗೆ ಅಮೆರಿಕ ವಾಯುಪಡೆ ಏರೋ ಇಂಡಿಯಾದಲ್ಲಿ ಪಾಲ್ಗೊಳ್ಳಲಿದೆ. ಎಫ್‌-16 ಯುದ್ಧ ವಿಮಾನ ಮತ್ತು ಒಂದು ಯುದ್ಧ ಹೆಲಿಕಾಫ್ಟರ್‌ ಅನ್ನು ಅಮೆರಿಕ ಪ್ರದರ್ಶಿಸಲಿದೆ. ಈ ಯುದ್ಧ ವಿಮಾನವನ್ನು ಪಾಕಿಸ್ತಾನ ಅಮೆರಿಕದಿಂದ ಕೊಳ್ಳಲು ಬಯಸಿದ್ದು, ಈ ಕ್ರಮಕ್ಕೆ ಭಾರತ ತನ್ನ ಪ್ರತಿಭಟನೆ ವ್ಯಕ್ತಪಡಿಸಿದೆ.

ಏರೋ ಇಂಡಿಯಾ-2005ರಲ್ಲಿ ್ಲ 52ದೇಶಗಳು ಮತ್ತು 78 ಅಗ್ರಮಾನ್ಯ ವಿಮಾನ ತಯಾರಿಕೆ ಕಂಪನಿಗಳು ಭಾಗವಹಿಸಲಿವೆ.

ಎಫ್‌-16 ಯುದ್ಧ ವಿಮಾನದ ತಯಾರಕರಾದ ಲೋಕ್‌ಹೀಡ್‌ ಮಾರ್ಟಿನ್‌, ಗಲ್ಫ್‌ಸ್ಟ್ರೀಮ್‌, ನಾರ್ತ್‌ರೋಪ್‌ ಗಮ್‌ಮನ್‌, ತಾಷ್ಕೆಂಟ್‌ ಏರ್‌ಕ್ರಾಫ್ಟ್‌ ಪ್ರದರ್ಶನಕ್ಕೆ ಬರಲಿದ್ದಾರೆ. ಈಗಾಗಲೇ ಎಲ್ಲಾ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಜನವರಿ ಅಂತ್ಯದಲ್ಲಿ ಪೂರ್ಣ ಸಿದ್ಧತೆಯನ್ನು ಕೈಗೊಳ್ಳಲಾಗುವುದು ಎಂದು ಸಿಂಗ್‌ ತಿಳಿಸಿದರು.

ಪ್ರದರ್ಶನದ ವಿಶೇಷತೆಗಳು :

ಇಸ್ರೇಲಿನ ಮತ್ತು ಫಾಲ್ಕನ್‌ ಚಾಲಕ ರಹಿತ ಗುಪ್ತಚರ ವಿಮಾನಗಳು. ಎಚ್‌ಎಎಲ್‌ ದೇಶೀಯವಾಗಿ ನಿರ್ಮಿಸಲ್ಪಟ್ಟತಂಹ ತೇಜಸ್‌, ಲಘು ಹೆಲಿಕಾಪ್ಟರ್‌ ಧ್ರುವ ಮತ್ತು ವಾಯುಪಡೆಯು ಸುಖೋಯ್‌, ಮಿರಾಜ್‌ ಮತ್ತು ಸೂರ್ಯಕಿರಣ್‌ಗಳು. ಎನ್‌ಎಎಲ್‌, ಎಡಿಎ ಮತ್ತು ಎಡಿಆರ್‌ಡಿ ಸಂಸ್ಥೆಗಳು ವೈಮಾನಿಕ ಬಿಡಿಭಾಗಗಳನ್ನು ಪ್ರದರ್ಶಿಸಲಿವೆ.

ಚೀನಾ, ಜಪಾನ್‌, ಥಾಯ್ಲೆಂಡ್‌, ಜರ್ಮನಿ, ಬಾಂಗ್ಲಾದೇಶ, ಈಜಿಪ್ಟ್‌, ವಿಯಟ್ನಾಂ ಸೇರಿದಂತೆ ದೇಶದ 12 ವಾಯುಪಡೆ ಮುಖ್ಯಸ್ಥರು ಪ್ರದರ್ಶನದಲ್ಲಿ ಪಾಲ್ಗೊಳ್ಳುವರು.ಅಂದಹಾಗೆ, ಈ ಪ್ರತಿಷ್ಠಿತ ಪ್ರದರ್ಶನದಲ್ಲಿ ಪಾಕಿಸ್ತಾನ ಪಾಲ್ಗೊಳ್ಳುತ್ತಿಲ್ಲ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X