ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೃತವರ್ಷಿಣಿ : ಗ್ರಾಮಗಳಲ್ಲ್ಲಿ ‘ಕಡ್ಡಾಯ ಮಳೆ ಕೊಯ್ಲು’ ಯೋಜನೆ

By Staff
|
Google Oneindia Kannada News

ಅಮೃತವರ್ಷಿಣಿ : ಗ್ರಾಮಗಳಲ್ಲ್ಲಿ ‘ಕಡ್ಡಾಯ ಮಳೆ ಕೊಯ್ಲು’ ಯೋಜನೆ
ಅಂತರ್ಜಲ ತೀವ್ರ ಕುಸಿದ, 1500 ಅಡಿ ಕೊರೆದರೂ ಹನಿ ನೀರಿಲ್ಲ-ಸಚಿವ ಬಿ.ಸತ್ಯನಾರಾಯಣ

ತುಮಕೂರು : ಮಳೆ ನೀರನ್ನು ಸಂಗ್ರಹಿಸಿ, ಪುನರ್‌ ಬಳಸುವುದು ಪ್ರಸಕ್ತ ದಿನಗಳಲ್ಲಿ ಅತ್ಯಂತ ಮಹತ್ವವನ್ನು ಪಡೆದಿದೆ. ಈ ನಿಟ್ಟಿನಲ್ಲಿ ನೂತನ ಅಮೃತ ವರ್ಷಿಣಿ ಯೋಜನೆಯನ್ನು ರಾಜ್ಯದ ಎಲ್ಲಾ ಗ್ರಾಮೀಣ ಪ್ರದೇಶಗಳಲ್ಲೂ ಕಡ್ಡಾಯವಾಗಿ ಅನುಷ್ಠಾನಗೊಳಿಸಲು ಸರಕಾರ ಚಿಂತನೆ ನಡೆಸಿದೆ ಎಂದು ಗ್ರಾಮೀಣ ನೀರು ಸರಬರಾಜು ಸಚಿವ ಬಿ.ಸತ್ಯನಾರಾಯಣ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಳೆ ಕೊಯ್ಲು ಯೋಜನೆಯನ್ನು ಈಗಾಗಲೇ ತಮಿಳುನಾಡು ಸೇರಿದಂತೆ ವಿವಿಧ ರಾಜ್ಯಗಳು ಅಳವಡಿಸಿಕೊಂಡು ಅದರ ಪ್ರಯೋಜನ ಪಡೆಯುತ್ತಿವೆ. ರಾಜ್ಯದಲ್ಲಿ ಶೀಘ್ರದಲ್ಲಿಯೇ ಅಮೃತವರ್ಷಿಣಿ ಯೋಜನೆಗೆ ಸರಕಾರ ಚಾಲನೆ ನೀಡಲಿದೆ ಎಂದರು.

ರಾಜ್ಯವನ್ನು ಬರ ಗಂಭೀರವಾಗಿ ಕಾಡುತ್ತಿದೆ. ದಿನೇದಿನೇ ಅಂತರ್ಜಲ ಪ್ರಮಾಣ ಕುಸಿಯುತ್ತಿದೆ. ಕೆಲವೆಡೆ 1500 ಅಡಿ ಕೊರೆದರೂ ಹನಿ ನೀರು ಸಿಗುತ್ತಿಲ್ಲ. ಕುಡಿಯುವ ನೀರಿನ ಸಮಸ್ಯೆ ಕೆಲವು ಭಾಗಗಳಲ್ಲಿ ತೀವ್ರವಾಗಿದ್ದು, ಫ್ಲೋರೈಡ್‌ ಮಿಶ್ರಿತ ನೀರನ್ನು ಬಳಸುತ್ತಿರುವ ನಿದರ್ಶನಗಳಿವೆ. ಮುಖ್ಯಮಂತ್ರಿ ಧರ್ಮಸಿಂಗ್‌ ನೇತೃತ್ವದ ಸರಕಾರ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಸಾಕಷ್ಟು ಒತ್ತು ನೀಡಿದೆ ಎಂದು ಸಚಿವ ಸತ್ಯನಾರಾಯಣ್‌ ಹೇಳಿದರು.

(ಇನ್ಫೋವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X