ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಧ್ವನಿ ಪ್ರತಿಷ್ಠಾನ’ದ ಲೇಖನ ಸ್ಪರ್ಧೆಯಲ್ಲಿ ಪ್ರಭಾಕರ ಶಿಶಿಲ ಪ್ರಥಮ

By Staff
|
Google Oneindia Kannada News

‘ಧ್ವನಿ ಪ್ರತಿಷ್ಠಾನ’ದ ಲೇಖನ ಸ್ಪರ್ಧೆಯಲ್ಲಿ ಪ್ರಭಾಕರ ಶಿಶಿಲ ಪ್ರಥಮ
ಕನ್ನಡ ನಾಡು ನುಡಿ ರಕ್ಷಣೆ ಯಾಕೆ ಮತ್ತು ಹೇಗೆ? ಮಾರ್ಚ್‌ನಲ್ಲಿ ಪುಸ್ತಕ

ಶಾರ್ಜಾ : ತನ್ನ ಇಪ್ಪತ್ತನೇ ವಾರ್ಷಿಕೋತ್ಸವದ ಅಂಗವಾಗಿ ‘ಧ್ವನಿ ಪ್ರತಿಷ್ಠಾನ’ ಕನ್ನಡ ನಾಡು ನುಡಿ ರಕ್ಷಣೆ ಯಾಕೆ ಮತ್ತು ಹೇಗೆ? ಎಂಬ ವಿಷಯದ ಬಗ್ಗೆ ಏರ್ಪಡಿಸಿದ್ದ ಅಂತರರಾಷ್ಟ್ರೀಯ ಲೇಖನ ಸ್ಪರ್ಧೆಯಲ್ಲಿ ಸುಳ್ಯದ ಡಾ. ಬಿ.ಪ್ರಭಾಕರ ಶಿಶಿಲ ಪ್ರಥಮ ಬಹುಮಾನ ಪಡೆದುಕೊಂಡಿದ್ದಾರೆ.

ದ್ವಿತೀಯ ಬಹುಮಾನವನ್ನು ಕೆ.ಆರ್‌.ಉಮಾದೇವಿ ಉರಾಳ್‌- ತೀರ್ಥಹಳ್ಳಿ ಹಾಗೂ ನಾಗೇಂದ್ರ ಡೊಡ್ಡಮನಿ- ಶಿರಸಿ ಅವರು ಹಂಚಿಕೊಂಡಿರುವರು. ತೃತೀಯ ಬಹುಮಾನ ಎಲ್‌.ಪಿ.ಶಾಸ್ತ್ರಿ- ಬೆಂಗಳೂರು ಮತ್ತು ಯಸ್‌. ವಿ. ಶಂಕರಪ್ಪ - ಬೆಂಗಳೂರು ಪಡೆದುಕೊಂಡಿರುವರು.

ಬಹುಮಾನಗಳು ನಗದು ರೂ.5000, 2000, 1000, ಮತ್ತು ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ. ತೀರ್ಪುಗಾರರ ಆಯ್ಕೆಯ ಹತ್ತು ಉತ್ತಮ ಲೇಖನ ಪುರಸ್ಕಾರವು ಡಾ. ಎಸ್‌.ವಿ.ಪ್ರಭಾವತಿ- ಬೆಂಗಳೂರು, ಡಾ.ಜೆ.ಎಸ್‌.ಅಶ್ವತ್‌ಕುಮಾರ್‌- ಮುನಿರಬಾದ್‌, ಯ.ರು.ಪಾಟೀಲ್‌-ಬೆಳಗಾವಿ, ಮೀನಾಕ್ಷಿಕಾಂತ್‌- ನರಸಿಂಹರಾಜಪುರ, ಬಿ.ಇಂದಿರಾ-ಬೆಂಗಳೂರು, ಪಿ.ಮಂಜುನಾಥಸ್ವಾಮಿ- ಬೆಂಗಳೂರು, ಚ.ಹ.ರಘುನಾಥ್‌- ಬೆಂಗಳೂರು, ಹೆಚ್‌.ಸುಬ್ಬರಾವ್‌-ದೆಹಲಿ, ಎಸ್‌.ಶಾಂತರಾಮ್‌-ಮೈಸೂರು ಹಾಗೂ ಲಕ್ಷ್ಮಣ ಟಿ. ಬಾದಮಿ- ಬಾಗಲಕೋಟೆ ಅವರಿಗೆ ಸಂದಿದೆ.

ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ಹಾಗೂ ಪತ್ರಕರ್ತ ಎನ್‌.ಗುರುರಾಜ್‌ ತೀರ್ಪುಗಾರರಾಗಿ ಸಹಕರಿಸಿದ್ದರು. ಆಯ್ದ ಲೇಖನಗಳ ಸಂಕಲನ ಪ್ರಕಟಿಸುವ ಯೋಜನೆಯನ್ನು ಹಾಕಿಕೊಂಡಿದ್ದು , ಪುಸ್ತಕ ಬಿಡುಗಡೆ ಮತ್ತು ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು 2005ರ ಮಾರ್ಚ್‌ ತಿಂಗಳಲ್ಲಿ ನಡೆಸಲಾಗುವುದು ಎಂದು ಧ್ವನಿ ಪ್ರತಿಷ್ಠಾನದ ಪ್ರಧಾನ ಸಂಚಾಲಕ ಪ್ರಕಾಶ್‌ ರಾವ್‌ ಪಯ್ಯಾರ್‌ ತಿಳಿಸಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X