ಕ್ರೆೃಂ ಡೈರಿ- ಸ್ಪೋರಿಗಳಿಗೆ ಕಡಿವಾಣ ಹಾಕಲು ರಾಜ್ಯಸರ್ಕಾರಕ್ಕೆ ಅಧಿಕಾರ
ಕ್ರೆೃಂ ಡೈರಿ- ಸ್ಪೋರಿಗಳಿಗೆ ಕಡಿವಾಣ ಹಾಕಲು ರಾಜ್ಯಸರ್ಕಾರಕ್ಕೆ ಅಧಿಕಾರ
ಕ್ರೆೃಂ ವೈಭವೀಕರಿಸುವವರ ಮೇಲೆ ಕ್ರಮ ಜರುಗಿಸಲು ನ್ಯಾಯಾಲಯದ ಸೂಚನೆ
ಕ್ರೆೃಂ ಧಾರಾವಾಹಿಗಳ ನಿಲ್ಲಿಸುವಂತೆ ನ್ಯಾಯವಾದಿ ಎ.ವಿ.ಅಮರನಾಥ್, ಹೈಕೋರ್ಟ್‌ನಲ್ಲಿ ಅರ್ಜಿಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ಕ್ರೆೃಂ ಧಾರಾವಾಹಿಗಳ ಮೇಲೆ ಕ್ರಮ ಕೈಗೊಳ್ಳುವ ಅಧಿಕಾರವನ್ನು ಹೈಕೋರ್ಟ್, ರಾಜ್ಯ ಸರಕಾರಕ್ಕೆ ನೀಡಿದೆ. ಧಾರಾವಾಹಿಗಳನ್ನು ಪ್ರಸಾರ ಮಾಡುವ ಟಿ.ವಿ.ಸಂಸ್ಥೆ, ಅವುಗಳಿಗೆ ಮಾಹಿತಿ ನೀಡುವ ಪೋಲೀಸರ ಮೇಲೆ ಕ್ರಮ ತೆಗೆದುಕೊಳ್ಳ ಬಹುದೆಂದು ಹೈಕೋರ್ಟ್ ತಿಳಿಸಿದೆ.
ಧಾರಾವಾಹಿಯಲ್ಲಿ ಪತ್ರಕರ್ತರು ಕ್ರೆೃಂ ವೈಭವೀಕರಿಸಿ ಕಾನೂನು ಬಾಹಿರವಾಗಿ ವರ್ತಿಸುತ್ತಿದ್ದಾರೆ. ವಿಚಾರಣೆಗೆ ಮೊದಲೇ ಪೂರ್ವಾಗ್ರಹಪೀಡಿತರಾಗಿ ವ್ಯಕ್ತಿಯನ್ನು ಅಪರಾಧಿ ಎಂದು ಘೋಷಿಸಲಾಗುತ್ತಿದೆ. ಮಹಿಳೆಯರು ಹಾಗೂ ಮಕ್ಕಳು ಈ ಧಾರಾವಾಹಿಯಿಂದ ಭೀತಿಗೆ ಒಳಗಾಗಿದ್ದಾರೆ ಎಂದು ಅರ್ಜಿದಾರರು ದೂರಿದ್ದಾರೆ.
ಮುಂದಿನ ವಿಚಾರಣೆ ಡಿ.17 ರಂದು ನಡೆಯಲಿದೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications