ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಡಚಣೆಗಳನಡುವೆ ಮುಹೂರ್ತ ನಿಗದಿ; ಡಿ.15 ಸಂಪುಟ ವಿಸ್ತರಣೆ

By Staff
|
Google Oneindia Kannada News

ಅಡಚಣೆಗಳನಡುವೆ ಮುಹೂರ್ತ ನಿಗದಿ; ಡಿ.15 ಸಂಪುಟ ವಿಸ್ತರಣೆ
ಡಿ.ಕೆ. ಶಿವಕುಮಾರ್‌ ಇಲ್ಲ , ದೇಶಪಾಂಡೆಯೂ ನಿಶ್ಚಿತವಿಲ್ಲ

ಬೆಂಗಳೂರು : ಸಂಪುಟ ವಿಸ್ತರಣೆಗೆ ಕೊನೆಗೂ ಮುಹೂರ್ತ ಕೂಡಿಬಂದಂತಿದೆ. ಡಿಸೆಂಬರ್‌ 15ರಂದು ಸಂಪುಟ ವಿಸ್ತರಣೆ ನಡೆಯುವ ಕುರಿತು ದೆಹಲಿ ಮೂಲಗಳು ತಿಳಿಸಿವೆ.

ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬಂದು 6 ತಿಂಗಳುಗಳೇ ಆಗಿವೆ. ಆದರೆ ಸಂಚಿವ ಸಂಪುಟದ ವಿಸ್ತರಣೆಗೆ ಅಡೆತಡೆಗಳು ತಪ್ಪಿದ್ದೇ ಇಲ್ಲ . ಧರ್ಮಸಿಂಗ್‌ ಮುಖ್ಯಮಂತ್ರಿಯಾಗಿ, ಸಿದ್ಧರಾಮಯ್ಯ ಉಪಮುಖ್ಯಮಂತ್ರಿಯಾಗಿ ರೂಪುಗೊಂಡ ಸಮ್ಮಿಶ್ರ ಸರ್ಕಾರದಲ್ಲಿ ಜೂನ್‌ 5 ರಂದು ಸಂಪುಟ ವಿಸ್ತರಣೆ ನಡೆದಿತ್ತು . ಈ ವಿಸ್ತರಣೆಯಲ್ಲಿ ಎರಡೂ ಪಕ್ಷಗಳಿಂದ ತಲಾ ಐದೈದು ಮಂದಿ ಸಂಪುಟ ಸೇರಿದ್ದರು. ಇದಾದ ಆರು ತಿಂಗಳು ಕಳೆದಮೇಲೆ ಸಂಪುಟ ವಿಸ್ತರಣೆಗೆ ಮತ್ತೆ ದಿನಾಂಕ ನಿಗದಿಯಾಗಿದೆ.

ಈ ಸಂಪುಟ ವಿಸ್ತರಣೆಯಲ್ಲಿ ಕಾಂಗ್ರೆಸ್‌ನಿಂದ 9 ಮಂದಿ ಹಾಗೂ ಜೆಡಿಎಸ್‌ ನಿಂದ 11 ಜನ ಸಂಪುಟಕ್ಕೆ ಸೇರ್ಪಡೆಯಾಗುವ ನಿರೀಕ್ಷಿಯಿದೆ.

ಸಂಭವನೀಯ ಸಚಿವರ ಪಟ್ಟಿ ಇಂತಿದೆ :

ಕಾಂಗ್ರೆಸ್‌ನಿಂದ - ಎಚ್‌.ಕೆ.ಪಾಟೀಲ್‌, ರಾಮಲಿಂಗಾರೆಡ್ಡಿ, ಆರ್‌.ವಿ.ದೇಶಪಾಂಡೆ ಅಥವಾ ಪ್ರೊ.ಬಿ.ಕೆ.ಚಂದ್ರಶೇಖರ್‌, ಭಾಗೀರಥಿ ಮರುಳಸಿದ್ಧನಗೌಡ, ಡಾ.ಜಿ. ಪರಮೇಶ್ವರ್‌ ಅಥವಾ ಅಂಜನಮೂರ್ತಿ, ವೈ. ನಾಗಪ್ಪ , ಜಬ್ಬಾರ್‌ಖಾನ್‌ ಹೊನ್ನಳ್ಳಿ, ಕುಮಾರ್‌ ಬಂಗಾರಪ್ಪ.

ಜನತಾದಳದಿಂದ - ಅಮರೇಗೌಡ ಬಯ್ಯಾಪುರ, ಇಕ್ಬಾಲ್‌ ಅನ್ಸಾರಿ, ಬಸವರಾಜ ಹೊರಟ್ಟಿ, ಅಲಂಗೂರು ಶ್ರೀನಿವಾಸ್‌, ಸಿ.ಚನ್ನಿಗಪ್ಪ, ಎಚ್‌.ವೈ.ಮೇಟಿ, ಡಾ.ಎಚ್‌.ಸಿ.ಮಹದೇವಪ್ಪ, ಎಚ್‌.ಎಸ್‌. ಮಹದೇವಪ್ರಸಾದ್‌, ಬಿ.ಆರ್‌.ಪಾಟೀಲ್‌ ಅಥವಾ ವೈಜನಾಥ್‌ ಪಾಟೀಲ್‌, ಎನ್‌. ಚಲುವರಾಯಸ್ವಾಮಿ ಅಥವಾ ವಿಜಯಲಕ್ಷ್ಮಿ ಬಂಡಿಸಿದ್ದೇಗೌಡ, ಕೆ.ವೆಂಕಟೇಶ್‌ ಅಥವಾ ಸತ್ಯನಾರಾಯಣ್‌.

(ಇನ್ಫೋ ವಾರ್ತೆ)

ಮುಖಪುಟ / ಧರ್ಮ-ಕಾರಣ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X