ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೃದಯ ಶ್ರೀಮಂತಿಕೆಯ ಭಾರತೀಯನದು ಅತಿ ದುರ್ಬಲ ಹೃದಯ!

By Staff
|
Google Oneindia Kannada News

ಹೃದಯ ಶ್ರೀಮಂತಿಕೆಯ ಭಾರತೀಯನದು ಅತಿ ದುರ್ಬಲ ಹೃದಯ!
ಡಿಸೆಂಬರ್‌ 2ರಿಂದ ಬೆಂಗಳೂರಲ್ಲಿ ಸಿಎಸ್‌ಐನ 56ನೇ ವಾರ್ಷಿಕ ಸಮಾವೇಶ

ಬೆಂಗಳೂರು : ಯುರೋಪ್‌, ಅಮೆರಿಕಾ, ಚೀನಾ ಹಾಗೂ ಜಪಾನ್‌ ದೇಶಗಳ ನಾಗರಿಕರಿಗೆ ಹೋಲಿಸಿದರೆ ಭಾರತೀಯರ ಹೃದಯಗಳು ಅತ್ಯಂತ ದುರ್ಬಲವಾಗಿವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಯುರೋಪ್‌ ಮತ್ತು ಅಮೆರಿಕಕ್ಕಿಂಥ ನಾಲ್ಕು ಪಟ್ಟು ಹೆಚ್ಚು , ಚೀನಾಕ್ಕಿಂಥ ಆರುಪಟ್ಟು ಹೆಚ್ಚು ಹಾಗೂ ಜಪಾನ್‌ಗಿಂಥ ಹತ್ತು ಪಟ್ಟು ಹೆಚ್ಚು ಹೃದಯಾಘಾತಗಳು ಭಾರತದಲ್ಲಿ ಸಂಭವಿಸುತ್ತವೆ ಎಂದು ಹೃದಯ ತಜ್ಞ ಡಾ.ಸಿ.ಎನ್‌.ಮಂಜುನಾಥ್‌ ತಿಳಿಸಿದ್ದಾರೆ.

ಬೆಂಗಳೂರಿನ ಅರಮನೆ ಮೈದಾನದಲ್ಲಿ ಡಿಸೆಂಬರ್‌ 2ರಿಂದ 5ರವರೆಗೆ ಸಿಎಸ್‌ಐನ 56ನೇ ವಾರ್ಷಿಕ ಸಮಾವೇಶ ನಡೆಯುತ್ತಿದ್ದು , ಈ ಸಮಾವೇಶದಲ್ಲಿ ಸುಮಾರು 120 ದೇಶಗಳ 350 ಹೃದಯ ತಜ್ಞರು ಭಾಗವಹಿಸುತ್ತಿದ್ದಾರೆ. ಈ ಬೃಹತ್‌ ಸಮ್ಮೇಳನದ ವಿವರಗಳನ್ನು ಸುದ್ದಿಗಾರರಿಗೆ ನೀಡಿದ ಸಂದರ್ಭದಲ್ಲಿ ಡಾ. ಮಂಜುನಾಥ್‌ ಭಾರತೀಯರ ದುರ್ಬಲ ಹೃದಯದ ಕುರಿತು ಆತಂಕ ವ್ಯಕ್ತಪಡಿಸಿದರು.

ಅರವತ್ತರ ದಶಕದಲ್ಲಿ ದೇಶದ ಜನಸಂಖ್ಯೆಯಲ್ಲಿ ಶೇ.3ರಷ್ಟು ಮಾತ್ರ ಹೃದಯಾಘಾತಗಳು ಮಾತ್ರ ಸಂಭವಿಸುತ್ತಿದ್ದವು. ಆದರಿಂದು ಈ ಪ್ರಮಾಣ ಶೇ.10-12ಕ್ಕೆ ತಲುಪಿದೆ. ಹೃದಯಾಘಾತಕ್ಕೆ ಒಳಗಾಗುವ ಪ್ರತಿ ಮೂವರಲ್ಲೊಬ್ಬರು 40 ಕ್ಕಿಂಥ ಕಡಿಮೆ ವಯಸ್ಸಿನವರು ಎಂದು ಖೇದ ವ್ಯಕ್ತಪಡಿಸಿದ ಡಾ.ಮಂಜುನಾಥ್‌- 2020ರ ವೇಳೆಗೆ ಭಾರತ ಹೃದ್ರೋಗಿಗಳ ರಾಜಧಾನಿ ಆಗುವ ಸಾಧ್ಯತೆಯಿದೆ ಎಂದರು.

ಹೃದಯ ಶಸ್ತ್ರಚಿಕಿತ್ಸೆ , ಚಿಕಿತ್ಸೆಯ ಸಂಕಷ್ಟಗಳು, ಚಿಕಿತ್ಸೆಯ ವಾತಾವರಣ ಇತ್ಯಾದಿ ವಿಷಯಗಳ ಕುರಿತು ಸಮ್ಮೇಳನದಲ್ಲಿ ಚರ್ಚಿಸಲಾಗುವುದು ಎಂದು ಸಮ್ಮೇಳನದ ಸಂಚಾಲಕರೂ ಆದ ಡಾ.ಮಂಜುನಾಥ್‌ ಹೇಳಿದರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X