ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭ್ರಷ್ಟಾಚಾರ ನೀಗಲು ವಿದ್ಯಾರ್ಥಿಗಳಿಗೆ ಕಡ್ಡಾಯ ಎನ್‌.ಸಿ.ಸಿ. -ಕಲಾಂ

By Staff
|
Google Oneindia Kannada News

ಭ್ರಷ್ಟಾಚಾರ ನೀಗಲು ವಿದ್ಯಾರ್ಥಿಗಳಿಗೆ ಕಡ್ಡಾಯ ಎನ್‌.ಸಿ.ಸಿ. -ಕಲಾಂ
ಸಾಮಾಜಿಕ ಅಭಿವೃದ್ಧಿ ಹಾಗೂ ಶಾಂತಿ ಸಾಧನೆಗಾಗಿ ಎನ್‌ಸಿಸಿ

ನವದೆಹಲಿ : ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಎರಡು ವರ್ಷಗಳ ಎನ್‌ಸಿಸಿ ತರಬೇತಿಯನ್ನು ಕಡ್ಡಾಯಗೊಳಿಸಬೇಕೆಂದು ರಾಷ್ಟ್ರಪತಿ ಎಪಿಜೆ ಅಬ್ದುಲ್‌ ಕಲಾಂ ಅಭಿಪ್ರಾಯಪಟ್ಟಿದ್ದಾರೆ.

ವಿದ್ಯಾರ್ಥಿಗಳಿಗೆ ಎನ್‌ಸಿಸಿ ತರಬೇತಿ ನೀಡುವುದರಿಂದ ಸಮಾಜದಲ್ಲಿನ ಭ್ರಷ್ಟಾಚಾರವನ್ನು ನಿರ್ಮೂಲಗೊಳಿಸುವುದು ಸಾಧ್ಯವಾಗುತ್ತದೆ. ಅಂತೆಯೇ ಶಿಸ್ತಿನ ಅಳವಡಿಕೆ ಹಾಗೂ ಪರಿಸರ ಪ್ರೇಮವೂ ಎನ್‌ಸಿಸಿ ತರಬೇತಿಯಿಂದ ಸಾಧ್ಯವಾಗುತ್ತದೆ . ಹಾಗಾಗಿ ಎಲ್ಲ ಅರ್ಹ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಎನ್‌ಸಿಸಿ ಕಡ್ಡಾಯಗೊಳಿಸಬೇಕು ಎಂದು ಕಲಾಂ ಎನ್‌ಸಿಸಿ ಉಪನ್ಯಾಸವೊಂದರಲ್ಲಿ ಸೋಮವಾರ ಹೇಳಿದರು.

ಎನ್‌ಸಿಸಿ ಕಡ್ಡಾಯಗೊಳಿಸುವುದರಿಂದ ಎನ್‌ಸಿಸಿಗೆ 20 ಮಿಲಿಯನ್‌ ವಿದ್ಯಾರ್ಥಿಗಳಿಂದ ಬಲಗೊಳ್ಳುತ್ತದೆ. ಸಾಮಾಜಿಕ ಅಭಿವೃದ್ಧಿ ಹಾಗೂ ಶಾಂತಿ ಸಾಧನೆಯಲ್ಲಿ ಈ ಹೆಚ್ಚಳ ಧನಾತ್ಮಕ ಪಾತ್ರ ವಹಿಸುತ್ತದೆ ಎಂದು ಕಲಾಂ ಹೇಳಿದರು.

2020ರೊಳಗೆ ಭಾರತವನ್ನು ಅಭಿವೃದ್ಧಿ ರಾಷ್ಟ್ರಗಳ ಸಾಲಿನಲ್ಲಿ ನಿಲ್ಲಿಸುವ ಮಂತ್ರಕ್ಕೆ 25 ವರ್ಷದೊಳಗಿನ 540 ಮಿಲಿಯನ್‌ ಯುವಜನರು ಇಂಧನವಾಗಿದ್ದಾರೆ ಎಂದು ಕಲಾಂ ಹೇಳಿದರು.

(ಪಿಟಿಐ)

Post your views

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X