ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಂಥ ಓಡಾಟ-ತನಿಖೆ! ಎಲ್ಲ ಶ್ರೀಮತಿ ಧರ್ಮಸಿಂಗ್‌ ಫೋನ್‌ಗಾಗಿ

By Staff
|
Google Oneindia Kannada News

ಎಂಥ ಓಡಾಟ-ತನಿಖೆ! ಎಲ್ಲ ಶ್ರೀಮತಿ ಧರ್ಮಸಿಂಗ್‌ ಫೋನ್‌ಗಾಗಿ
ಮುಖ್ಯಮಂತ್ರಿ ಪತ್ನಿ ಪುತ್ರರ ಮೊಬೈಲ್‌ ಕಳೆದುಹೋದಾಗ........

ಬೆಂಗಳೂರು : ರಾಜಧಾನಿ ಪೋಲೀಸರು ಚುರುಕಾಗಿದ್ದಾರೆ. ಈ ಪ್ರಕರಣವನ್ನು ಗಮನಿಸಿ- ಮೊಬೈಲ್‌ ಪೋನ್‌ ಕಳೆದುಕೊಂಡವರು ದೂರು ನೀಡದೆ ತಮ್ಮ ಪಾಡಿಗೆ ತಾವಿದ್ದರೂ ಸಹಾ ಯಲಹಂಕ ಪೋಲೀಸರು ಪತ್ತೆ ಕಾರ್ಯದಲ್ಲಿ ತಲೆಬಿಸಿ ಮಾಡಿಕೊಂಡಿದ್ದಾರೆ.

ಮಾಮೂಲಿ ತನಿಖೆಯಲ್ಲ ; ಮೊಬೈಲ್‌ ಪತ್ತೆ ಹಾಗೂ ಅದನ್ನು ಕದ್ದವರ ಪತ್ತೆಗಾಗಿ ಶ್ವಾನದಳ ಹಾಗೂ ಬೆರಳಚ್ಚು ತಜ್ಞರ ಸಹಕಾರ ಪಡೆದು ತನಿಖೆ ನಡೆಸುತ್ತಿದ್ದಾರೆ. ಪೊಲೀಸ್‌ ಇಲಾಖೆಗೆ ಇದ್ದಕ್ಕಿದ್ದಂತೆ ಕರ್ತವ್ಯೋದಯವಾದದ್ದು ಹೇಗೆ? ಯಾವ ಬೋಧಿವೃಕ್ಷದ ಕೆಳಗೆ? ಪೋಲೀಸ್‌ ಇಲಾಖೆ ಕಾರ್ಯ ವೈಖರಿ ಬಗೆಗೆ ಭೇಷ್‌ ಭೇಷ್‌ ಎನ್ನುವ ಮೊದಲು ಸುದ್ದಿಯನ್ನು ಪೂರ್ತಿ ಓದಿ ಬಿಡಿ.

ಮೊನ್ನೆ, ನ.13ರಂದು ಮುಖ್ಯಮಂತ್ರಿ ಧರ್ಮಸಿಂಗ್‌ ಪತ್ನಿ-ಪರಿವಾರ ಸಮೇತರಾಗಿ ಯಲಹಂಕದ ಸಮೀಪವಿರುವ ತಮ್ಮ ತೋಟಕ್ಕೆ ಭೇಟಿ ನೀಡಿದ್ದರು. ಒಂಥರಾ ಪಿಕ್ನಿಕ್‌ನಂಥ ಕಾರ್ಯಕ್ರಮ. ಪಾಲನಹಳ್ಳಿ ರೈಲ್ವೆ ಕ್ರಾಸಿಂಗ್‌ ಬಳಿ ಕಾರನ್ನು ನಿಲ್ಲಿಸಿದ್ದರು. ಅವಘಡ ನಡೆದದ್ದೇ ಆಗ.

ತೋಟಕ್ಕೆ ಹೋದವರು ಮರಳಿ ಬಂದು ನೋಡಿದರೆ ಕಾರಿನ ಗಾಜು ಚಿಂದಿಚಿಂದಿ. ಕಳ್ಳರು ಕಿಟಕಿ ಗಾಜನ್ನು ಒಡೆದು ಕಾರಿನೊಳಗಿದ್ದ ಮುಖ್ಯಮಂತ್ರಿಗಳ ಪತ್ನಿ ಪ್ರಭಾವತಿ ಹಾಗೂ ಪುತ್ರನ ಮೊಬೈಲ್‌ ಹ್ಯಾಂಡ್‌ಸೆಟ್‌ಗಳನ್ನು ಕೊಂಡೊಯ್ದಿದ್ದರು.

ಮುಖ್ಯಮಂತ್ರಿಗಳ ಪರಿವಾರಕ್ಕೆ ಮೊಬೈಲ್‌ ಯಾವ ಲೆಕ್ಕ? ಈ ಉದಾಸೀನದಿಂದಲೋ, ಅಥವಾ ಬಡಪಾಯಿ ಬಳಸಿಕೊಳ್ಳಲಿ ಎನ್ನುವ ಧರ್ಮರಾಯ ಬುದ್ಧಿಯಿಂದಲೋ ಏನೋ- ಮೊಬೈಲ್‌ ಕಳುವಿನ ಬಗ್ಗೆ ದೂರು ನೀಡಲೇ ಇಲ್ಲ . ್ಫಮುಂದಿನದೇ ತಮಾಷೆ. ದೊರೆಗಳು ದೂರು ನೀಡದಿದ್ದರೂ ಪೋಲೀಸರು ಸ್ವಯಂಪ್ರೇರಣೆಯಿಂದ ಕಾರ್ಯಪ್ರವೃತ್ತರಾದರು. ಶ್ವಾನದಳವೇನು, ಬೆರಳಚ್ಚು ತಜ್ಞರ ಓಡಾಟವೇನು... ರಾಮರಾಮ! ಮೊಬೈಲ್‌ ಕಳ್ಳ ಮಾತ್ರ ಇನ್ನೂ ಸಿಕ್ಲಿಲ್ಲ .

ಮೊಬೈಲ್‌ ಕಳ್ಳರಿಗಾಗಿ ತಲೆ ಕೆಡಿಸಿಕೊಂಡ ಪೊಲೀಸರ ನೋಡಿ, ತನ್ನ ದೂರು ಧೂಳು ತಿನ್ನುವುದನ್ನು ನೆನೆಯುತ್ತ ಬಡ ಬೋರೇಗೌಡ ನಿಟ್ಟುಸಿರುಬಿಟ್ಟಿದ್ದನ್ನು ಮಾತ್ರ ಪೊಲೀಸರು ಗಂಭೀರವಾಗಿ ಪರಿಗಣಿಸಿಲ್ಲ .

(ಇನ್ಫೋ ವಾರ್ತೆ)

ಮುಖಪುಟ / ಧರ್ಮ-ಕಾರಣ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X