ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊಲ್ಲೂರು ಸಿರಿದೇವಿ ಮೂಕಾಂಬೆಗೆ 5ಕೋಟಿ ವೆಚ್ಚದ ಬಂಗಾರದ ರಥ

By Staff
|
Google Oneindia Kannada News

ಕೊಲ್ಲೂರು ಸಿರಿದೇವಿ ಮೂಕಾಂಬೆಗೆ 5ಕೋಟಿ ವೆಚ್ಚದ ಬಂಗಾರದ ರಥ
ಎಂಬತ್ತು ಕಿಲೋ ಚಿನ್ನ -ಬೆಳ್ಳಿಯ ಅಪರೂಪದ ರಥ

ಕೊಲ್ಲೂರು : ಕೊಲ್ಲೂರಿನ ಶಕ್ತಿದೇವತೆ ಶ್ರೀ ಮೂಕಾಂಬಿಕಾ ದೇವಿಗೆ 2005ರ ಜನವರಿ ತಿಂಗಳಲ್ಲಿ ಚಿನ್ನದ ರಥ ಸಮರ್ಪಿಸಲು ಸಿದ್ಧತೆಗಳು ನಡೆದಿವೆ. ಸುಮಾರು ಐದು ಕೋಟಿ ವೆಚ್ಚದಲ್ಲಿ 80 ಕೆಜಿ ಚಿನ್ನದಲ್ಲಿ ರಥವನ್ನು ತಯಾರಿಸಲಾಗುತ್ತಿದೆ. ಪರಿಶುದ್ಧ ಬಂಗಾರದಲ್ಲಿ ತಯಾರಿಸಲಾಗುತ್ತಿರುವ ದೇಶದ ಪ್ರಪ್ರಥಮ ರಥ ಎನ್ನುವ ಖ್ಯಾತಿ ಇದಕ್ಕೆ ಸಂದಿದೆ.

ರಥದ ನಿರ್ಮಾಣಕ್ಕೆ ಅಗತ್ಯವಾದ ಬಂಗಾರದ ತಗಡು ಮತ್ತು ವಿವಿಧ ಆಭರಣಗಳನ್ನು ರಥ ತಯಾರಿಗೆ ಇತ್ತೀಚೆಗೆ ನೀಡುವ ಮೂಲಕ ಕೊಲ್ಲೂರು ಜಿಲ್ಲಾಧಿಕಾರಿ ಹಾಗೂ ದೇವಸ್ಥಾನದ ಆಡಳಿತಾಧಿಕಾರಿ ಟಿ.ಶ್ಯಾಮ್‌ ಭಟ್‌ ಮತ್ತು ಟ್ರಸ್ಟ್‌ ನ ಪದಾಧಿಕಾರಿಗಳು ಸುವರ್ಣ ರಥ ಯೋಜನೆಗೆ ಚಾಲನೆ ನೀಡಿದರು.

ವಿವಿಧ ದಾನಿಗಳ ಸಹಕಾರ ಪಡೆದು ನಿರ್ಮಿಸಲಾಗುತ್ತಿರುವ ರಥ ಡಿಸೆಂಬರ್‌ ವೇಳೆಗೆ ಪೂರ್ಣಗೊಳ್ಳಲಿದೆ. ರಥದ ತಳಭಾಗಕ್ಕೆ ಬೆಳ್ಳಿಯನ್ನು ಬಳಸಲಾಗುವುದು. ದೇವಸ್ಥಾನದ ಖಜಾನೆಯಿಂದ ಎರಡು ಕೋಟಿ ರುಪಾಯಿ ಬಳಸಿಕೊಳ್ಳಲು ಸರಕಾರ ಷರತ್ತುಬದ್ಧ ಅನುಮತಿ ನೀಡಲಾಗಿದೆ. ಈ ಹಣವನ್ನು ವಿವಿಧ ಹಂತಗಳಲ್ಲಿ ಭಕ್ತರಿಂದ ಬರುವ ದೇಣಿಗೆಯ ಮೂಲಕ ತಿಜೋರಿಗೆ ಮರುಭರ್ತಿ ಮಾಡಲಾಗುವುದು ದೇವಸ್ಥಾನದ ಸುಕುಮಾರ್‌ ಶೆಟ್ಟಿ ತಿಳಿಸಿದ್ದಾರೆ.

ನಿರ್ಮಾಣ ಕಾರ್ಯ ಸಂಪೂರ್ಣ ಪಾರದರ್ಶಕವಾಗಿದ್ದು, 2.56 ಲಕ್ಷ ರೂ.ಗಳನ್ನು ರಥ ನಿರ್ಮಿಸುತ್ತಿರುವ ಶಿಲ್ಪಿಗಳಿಗೆ ಸಂಭಾವನೆಯಾಗಿ ನೀಡಲಾಗುತ್ತಿದೆ. ಜನವರಿ 16 ರಿಂದ ಮೂರು ದಿನಗಳ ಕಾಲು ದೇವಿಗೆ ರಥ ಅರ್ಪಿಸುವ ವಿಶೇಷ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಕೊಲ್ಲೂರಿನಲ್ಲಿ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಿರುವುದಾಗಿ ಸುಕುಮಾರ್‌ ಶೆಟ್ಟಿ ತಿಳಿಸಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X