• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಎಚ್‌.ಎಸ್‌.ಪಾರ್ವತಿ, ಮುದ್ದುಕೃಷ್ಣ , ಕುಂ.ವಿ.ಗೆ ರಾಜ್ಯೋತ್ಸವ ಪ್ರಶಸ್ತಿ

By Staff
|

ಎಚ್‌.ಎಸ್‌.ಪಾರ್ವತಿ, ಮುದ್ದುಕೃಷ್ಣ , ಕುಂ.ವಿ.ಗೆ ರಾಜ್ಯೋತ್ಸವ ಪ್ರಶಸ್ತಿ

ಎಚ್‌ಐವಿ ಪೀಡಿತರಿಗೆ ಆತ್ಮವಿಶ್ವಾಸ ತುಂಬುತ್ತಿರುವ ವೀಣಾಧರಿಗೆ ದೊರಕದ ಮನ್ನಣೆ

Rajyothsava award for Y. K. Muddukrishnaಬೆಂಗಳೂರು : ಕಥೆಗಾರ ಕುಂ.ವೀರಭದ್ರಪ್ಪ, ವೈ.ಕೆ.ಮುದ್ದುಕೃಷ್ಣ, ನಿಡುಮಾಮಿಡಿ ಶ್ರೀ, ರಂಗಕರ್ಮಿ ಪ್ರಸನ್ನ, ಲಕ್ಕಪ್ಪ ಗೌಡ, ಕೆ.ಎಸ್‌.ಎಲ್‌. ಸ್ವಾಮಿ ಸೇರಿದಂತೆ ಒಟ್ಟು 84 ಮಂದಿಗೆ 2004ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ರಾಜ್ಯ ಸರಕಾರ ಪ್ರಕಟಿಸಿದೆ.

ಹದಿನೇಳು ಪ್ರಕಾರಗಳಲ್ಲಿ ಪ್ರಶಸ್ತಿಯ ಮಿತಿಯನ್ನು 77ಕ್ಕೆ ಮಿತಿಗೊಳಿಸಲು ನಿರ್ಧರಿಸಲಾಗಿತ್ತು. ಆದರೆ ಆ ಸಂಖ್ಯೆ 84ಕ್ಕೆ ತಲುಪಿದೆ. ಎಲ್ಲವೂ ಸಮ್ಮಿಶ್ರ ಸರ್ಕಾರದ ಮಹಾತ್ಮೆ !

ಕೃಷಿ ಪ್ರಶಸ್ತಿಯನ್ನು ಈ ವರ್ಷ ಆರಂಭಿಸಿರುವುದು ಒಂದು ವಿಶೇಷ. ಎಚ್‌ಐವಿ ಸೋಂಕಿನಿಂದ ಬಳಲುತ್ತಿರುವ ವೀಣಾಧರಿ ಸೇವೆಯನ್ನು ಗುರ್ತಿಸಿ ರಾಜ್ಯೋತ್ಸವ ಪ್ರಶಸ್ತಿ ನೀಡಿ ಪ್ರೋತ್ಸಾಹಿಸಿ ಎನ್ನುವ ಸಾರ್ವತ್ರಿಕ ಅಭಿಪ್ರಾಯಕ್ಕೆ ಸರಕಾರ ಮನ್ನಣೆ ನೀಡಿಲ್ಲ.

ಪ್ರಶಸ್ತಿ ವಿಜೇತರ ವಿವರ ಹೀಗಿದೆ:

ಸಾಹಿತ್ಯ : ಡಾ। ಗುರುಲಿಂಗ ಕಾಪಸೆ (ಧಾರವಾಡ), ಕೆ.ಅನಂತ ರಾಮ್‌ (ಮೈಸೂರು), ನಾ. ಮೊಗಸಾಲೆ (ದ. ಕ.), ಡಾ। ನಿರುಪಮಾ (ಬೆಂಗಳೂರು), ಡಾ। ಎಚ್‌. ಎಸ್‌.ಪಾರ್ವತಿ (ಬೆಂಗಳೂರು), ಕುಂ. ವೀರಭದ್ರಪ್ಪ(ಬಳ್ಳಾರಿ), ಅರವಿಂದ ನಾಡಕರ್ಣಿ (ಮುಂಬೈ), ಗುರುಮೂರ್ತಿ ಪೆಂಡಕೂರು (ಬಳ್ಳಾರಿ), ಬಿ.ವಿ.ವೀರಭದ್ರಪ್ಪ (ದಾವಣಗೆರೆ), ಖಲೀಲ್‌ ಉರ್‌ ರೆಹಮಾನ್‌(ಬೆಂಗಳೂರು).

ಸಂಗೀತ : ಫಕ್ಕಿರೇಶ್‌ ಕಣವಿ, ಗುಲ್ಬರ್ಗಾ, ಸೋಮನಾಥ ಮರಡೂರು, ಧಾರವಾಡ, ಪರಮೇಶ್ವರ ಹೆಗಡೆ, ಕಾರವಾರ (ಹಿಂದೂಸ್ತಾನಿ ಸಂಗೀತ), ಆರ್‌.ಕೆ.ಪದ್ಮನಾಭ, ಬೆಂಗಳೂರು(ಕರ್ನಾಟಕ ಸಂಗೀತ), ಚಂದ್ರಶೇಖರ ಮಾಲೂರು, ಕೋಲಾರ(ನಾದಸ್ವರ), ಮಾರೆಪ್ಪ ದಾಸರ, ಕೊಪ್ಪಳ(ತತ್ವಪದ), ಶೋಭಾನಾಯ್ಡು, ಬೆಂಗಳೂರು (ಹರಿಕಥೆ), ವೈ.ಕೆ.ಮುದ್ದುಕೃಷ್ಣ, ಹಾಸನ, ಕಿಕ್ಕೇರಿ ಕೃಷ್ಣಮೂರ್ತಿ, ಮಂಡ್ಯ(ಸುಗಮ ಸಂಗೀತ)

ನೃತ್ಯ : ಡಾ। ತುಳಸಿ ರಾಮಚಂದ್ರ (ಮೈಸೂರು), ಪದ್ಮಿನಿ ರಾಮಚಂದ್ರನ್‌(ಬೆಂಗಳೂರು), ಮಂಜುಭಾರ್ಗವಿ (ಬೆಂಗಳೂರು)

ನಾಟಕ : ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ (ಚಿತ್ರದುರ್ಗ), ರಾಜಶೇಖರ ಕದಂಬ (ಮೈಸೂರು), ಪ್ರಸನ್ನ (ಹೆಗ್ಗೋಡು), ಪ್ರಭಾಕರ ಸಾತಖೇಡ್‌ (ಗುಲ್ಬರ್ಗಾ), ಪ್ರತಿಮಾ ನಾರಾಯಣ (ಬೆಂಗಳೂರು), ಹರಿಜನ ಪದ್ಮಮ್ಮ(ಕಪ್ಪಗಲ್‌, ಬಳ್ಳಾರಿ)

ಲಲಿತಕಲೆ : ವಿ.ಟಿ.ಕಾಳೆ (ಸಂಡೂರು, ಬಳ್ಳಾರಿ), ಹೀರಾಲಾಲ್‌ ಮಲ್ಕಾರಿ (ರಾಯಚೂರು), ಭಾಸ್ಕರ ರಾವ್‌(ಉಡುಪಿ), ವೀರಭದ್ರಾ ಚಾರ್‌ (ಬೆಂಗಳೂರು)

ಜಾನಪದ : ಚಿಕ್ಕನರಸಪ್ಪ, ಬೆಂಗ ಳೂರು(ತಮಟೆ), ಎಂ.ಎಸ್‌. ಲಠ್ಠೆ,ಗುಲ್ಬರ್ಗಾ(ಜಾನಪದ ತಜ್ಞ), ಕೋಡಿಶಂಕರ ಗಾಣಿಗ, ಉಡುಪಿ (ಯಕ್ಷಗಾನ), ಮಾತಂಗವ್ವ ಯು. ಮಾದರ (ಬಿಜಾಪುರ), ಲಿಂಗಣ್ಣ ಲಿಂಗಸೂಗೂರು,ರಾಯಚೂರು (ಪಾರಿಜಾತ ಕಲಾವಿದ)

ಕ್ರೀಡೆ : ಹರೀಶ್‌ ಕುಶಾಲಪ್ಪ (ಕ್ರೀಡಾಪಟು), ಕವಿತಾ ಸನೀಲ್‌, ಮಂಗಳೂರು(ಕರಾಟೆ ಚಾಂಪಿ ಯನ್‌), ಅರ್ಜುನ ಹಾಲಪ್ಪ ಮಡಿಕೇರಿ(ಹಾಕಿ), ರತ್ನಪ್ಪ ಮಠಪತಿ, ಜಮಖಂಡಿ (ಕುಸ್ತಿ), ಪೈಲ್ವಾನ್‌ ಮೂಗ ಉರೂಪ್‌ ರುದ್ರ, ಮೈಸೂರು (ಕುಸ್ತಿ), ವೆಂಕಟೇಶ್‌, ಬೆಂಗಳೂರು (ಅಂಗವಿಕಲ ಕ್ರೀಡಾಪಟು)

ಚಲನಚಿತ್ರ : ಹರಿಣಿ (ನಟಿ), ಎಸ್‌.ರಾಮಚಂದ್ರ(ಛಾಯಾಗ್ರಾಹಕ), ಕೆ.ಎಸ್‌.ಎಲ್‌.ಸ್ವಾಮಿ(ರವಿ), (ನಿರ್ದೇಶಕ), ವಿ.ಕೆ.ಮೂರ್ತಿ (ಛಾಯಾಗ್ರಾಹಕ)

ಹೊರನಾಡು : ಬಿ.ಜಿ.ಅರುಣ್‌, ಅಮೆರಿಕ (ವಿಶ್ವದ ದ್ವಿತೀಯ ವೇಗದ ಕಂಪ್ಯೂಟರ್‌ ಜನಕ), ಕಲ್ಪನಾಶರ್ಮ (ಮುಂಬೈ) ಹಾಗೂ ದಯಾನಂದ ನಾಯಕ್‌(ಮುಂಬೈ)

ಪತ್ರಿಕೋದ್ಯಮ : ವೆಂಕಟನಾರಾ ಯಣ್‌(ಕನ್ನಡಪ್ರಭ ಸಂಪಾದಕ), ಗುಲಾಂಮಂಟಕ್‌ ಹಕ್‌, ಬೀದರ್‌ (ಪತ್ರಿಕಾ ಛಾಯಾಗ್ರಾಹಕ), ಎ. ಜಯರಾಂ(ದಿ ಹಿಂದೂ), ಷಡಾಕ್ಷ ರಪ್ಪ (ದಾವಣಗೆರೆ ಜನತಾವಾಣಿ ಸಂಪಾದಕ), ಜಿಯಾಮೀರ್‌ ಗುಲ್ಬರ್ಗಾ(ಉರ್ದು)

ವಿಜ್ಞಾನ : ಗೋವರ್ಧನ ಮೆಹ್ತಾ(ಬೆಂಗಳೂರು)

ವೈದ್ಯಕೀಯ : ಡಾ.ವಿವೇಕ ಜವಳಿ (ಬೆಂಗಳೂರು), ಡಾ. ವಿಜಯಲಕ್ಷ್ಮೀ ದೇಶಮಾನೆ (ಕಿದ್ವಾಯಿ ಸಂಸ್ಥೆ ಬೆಂಗಳೂರು), ಡಾ.ರವಿ ಕಿಶೋರ್‌ (ಬೆಂಗಳೂರು), ಡಾ.ಮುರಳೀಧರ ರಾವ್‌(ಗುಲ್ಬರ್ಗಾ), ಡಾ.ರಾಮ ನಾರಾಯಣರಾವ್‌(ಬೆಂಗಳೂರು)

ಸಮಾಜಸೇವೆ : ಘನಶ್ಯಾಂ ಭಾಂಡಗೆ ಇಳಕಲ್‌, ವಿಜಾಪುರ (ಅಂಗವಿಕಲ), ಡೋನಾ ಫೆರ್ನಾಂಡಿಸ್‌ (ವಿಮೋ ಚನಾ ಸಂಸ್ಥೆ ಬೆಂಗಳೂರು), ಇಂದಿರಾ ಮಾನ್ವೀಕರ್‌(ಗುಲ್ಬರ್ಗಾ), ಡಾ.ಎಂ. ಎಂ.ಭಟ್‌ ಮರಕಿಣಿ(ದಕ್ಷಿಣ ಕನ್ನಡ), ಗೌರಮ್ಮ ಬಸವೇಗೌಡ (ಚಿಕ್ಕಮಗಳೂರು), ವಾಸುದೇವಾ ಚಾರ್ಯ (ಸರ್ವೋದಯ ಸಂಸ್ಥೆ ದಕ್ಷಿಣ ಕನ್ನಡ), ಗಂಗಾಧರ(ಗುರುಟೀಕ್‌,ಬೆಂಗಳೂರು)

ಶಿಕ್ಷಣ : ಷಡಕ್ಷರಪ್ಪ ಲಿಂಗಸೂ ಗೂರು(ರಾಯಚೂರು), ಡಾ.ಎಚ್‌. ಜೆ.ಲಕ್ಕಪ್ಪಗೌಡ (ಮೈಸೂರು), ದೇವರಾಜ ಸರ್ಕಾರ್‌(ಮೈಸೂರು)

ಸಂಸ್ಥೆ : ಕರುಣಾಶ್ರಯ (ಬೆಂಗಳೂರು), ವೀರೇಶ್ವರ ಪುಣ್ಯಾಶ್ರಮ(ಗದಗ)

ಸಂಕೀರ್ಣ : ಸಿ.ವಿ.ಗೋಪಿನಾಥ (ಬೆಂಗಳೂರು), ಬೆಳಗೆರೆ ಕೃಷ್ಣಶಾಸ್ತ್ರಿ (ಚಿತ್ರದುರ್ಗ), ಮಹಮದ್‌ ಷರೀಫ್‌ ಗುಲ್ಶನ್‌ ಬಿದರಿ (ಬಿದರಿ ಕೆಲಸಗಾರ, ಬೀದರ್‌), ನಿಡುಮಾ ಮಿಡಿ ಮಠದ ವೀರಭದ್ರಚನ್ನಮಲ್ಲ ಸ್ವಾಮೀಜಿ (ಬೆಂಗಳೂರು), ಸ್ವಾತಂತ್ರ ಹೋರಾಟಗಾರ ಚನ್ನಬಸಪ್ಪ ಕೊಳಗೇರಿ(ಗುಲ್ಬರ್ಗಾ), ದೈವಜ್ಞ ಕೆ.ಎನ್‌.ಸೋಮಯಾಜಿ (ಬೆಂಗಳೂರು), ವಿದ್ವಾನ್‌ ಪಿ.ನರ ಸಿಂಹಮೂರ್ತಿ ಶಾಸ್ತ್ರೀ (ಬೆಂಗ ಳೂರು), ಎಸ್‌.ಕೆ.ಜೈನ್‌ (ಬೆಂಗಳೂರು), ಮಧುರಾ ಛತ್ರಪತಿ (ಮಹಿಳಾ ಉದ್ಯಮಿ, ಬೆಂಗಳೂರು)

ಕೃಷಿ : ಎಚ್‌.ಆರ್‌.ಚಂದ್ರೇ ಗೌಡ(ಕೃಷಿಕ, ಚಿಕ್ಕಮಗಳೂರು), ಡಾ.ಎಸ್‌.ತಿಮ್ಮೇಗೌಡ (ಕೃಷಿ ವಿಜ್ಞಾನಿ,ಬೆಂಗಳೂರು)

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X