ವಿಕ್ಟೋರಿಯಾ, ಬೌರಿಂಗ್, ವಾಣಿವಿಲಾಸ್, ಮಿಂಟೋಗೆ ಹೊಸ ಬಣ್ಣ
ವಿಕ್ಟೋರಿಯಾ, ಬೌರಿಂಗ್, ವಾಣಿವಿಲಾಸ್, ಮಿಂಟೋಗೆ ಹೊಸ ಬಣ್ಣ
ರಾಜಧಾನಿ ಆಸ್ಪತ್ರೆಗಳ ಆರೋಗ್ಯ ಸುಧಾರಿಸಲು 73 ಕೋಟಿ ರೂಪಾಯಿ
ಧರ್ಮಪಾಲನೆಯ ಫಲಶ್ರುತಿ ಏನೇ ಇರಲಿ, ಅದರ ವಿವರ ಮಾತ್ರ ಹೀಗಿದೆ; ಬೆಂಗಳೂರಿನ ಬೌರಿಂಗ್, ವಿಕ್ಟೋರಿಯಾ, ಮಿಂಟೋ, ವಾಣಿ ವಿಲಾಸ್ ಆಸ್ಪತ್ರೆಗಳನ್ನು 73 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸುವ ಮಾಸ್ಟರ್‌ಪ್ಲಾನ್ ಸರಕಾರದ ಮುಂದಿದೆ. ಎರಡು ವರ್ಷಗಳಲ್ಲಿ ಗುರಿ ಸಾಧಿಸುವ ಭರವಸೆಯೂ ಸರಕಾರಕ್ಕಿದೆ.
ಈ ಯೋಜನೆಗಾಗಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ)ದಿಂದ ಐದು ಕೋಟಿ, ಕೆ.ಎಂ.ಎಫ್‌ನಿಂದ ಐದು ಕೋಟಿ, ಐಟಿ ಕಂಪನಿಗಳು ಹಾಗೂ ಮತ್ತಿತರ ದಾನಿಗಳಿಂದ ಹಣ ಸಂಗ್ರಹಿಸಲು ಯೋಜಿಸಲಾಗಿದೆ.
ಸುಧಾರಣೆಯ ಪಟ್ಟಿ :
- ಹಳೆಯ ಆಸ್ಪತ್ರೆಗಳಲ್ಲಿ ಒಂದಾದ ಬೌರಿಂಗ್ ಆಸ್ಪತ್ರೆ 650 ಹಾಸಿಗೆ ಸಾಮರ್ಥ್ಯ ಹೊಂದಿದೆ. ಅದನ್ನ್ನು ಹಂತ ಹಂತವಾಗಿ 1500 ಹಾಸಿಗೆ ಆಸ್ಪತ್ರೆಯನ್ನಾಗಿ ಪರಿವರ್ತಿಸುವುದು.
- ಶಿಥಿಲ ಕಟ್ಟಡಗಳನ್ನು ಕೆಡವಿ ನೂತನ ಆಸ್ಪತ್ರೆ ಕಟ್ಟಡಗಳ ನಿರ್ಮಾಣ.
- ಬೌರಿಂಗ್ ಆಸ್ಪತ್ರೆ ಅಭಿವೃದ್ಧಿಗೆ ಸುಮಾರು 28ಕೋಟಿ, ವಿಕ್ಟೋರಿಯಾ ಆಸ್ಪತ್ರೆ ಅಭಿವೃದ್ಧಿಗೆ ಸುಮಾರು 45ಕೋಟಿ ರೂಪಾಯಿ ವೆಚ್ಚ ಮಾಡುವ ಗುರಿ.
- ರಾಜಧಾನಿಯಲ್ಲಿರುವ ಪ್ರಮುಖ ಸರ್ಕಾರಿ ಆಸ್ಪತ್ರೆಗಳಿಗೆ ಜೀವ ತುಂಬಲು ಆದ್ಯತೆ.
ಮುಖಪುಟ / ಬೆಂಗಳೂರು ಡೈರಿ












Click it and Unblock the Notifications