ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಿನಲ್ಲಿ ಅಂತರಾಷ್ಟ್ರೀಯ ಕಲಾ ಉತ್ಸವ: 10 ದಿನಗಳ ಕಲಾ ಸುಗ್ಗಿ

By Staff
|
Google Oneindia Kannada News

ಬೆಂಗಳೂರಿನಲ್ಲಿ ಅಂತರಾಷ್ಟ್ರೀಯ ಕಲಾ ಉತ್ಸವ: 10 ದಿನಗಳ ಕಲಾ ಸುಗ್ಗಿ
ರೋರಿಕ್‌ ಜನ್ಮ ಶತಮಾನೋತ್ಸವಕ್ಕೆ ನಾಡ ಹಬ್ಬದ ಸಂಭ್ರಮ

ಬೆಂಗಳೂರು : ನಗರದಲ್ಲಿ ಅಂತರಾಷ್ಟ್ರೀಯ ಕಲಾ ಉತ್ಸವ-2004ಕ್ಕೆ ಭಾನುವಾರ(ಅಕ್ಟೋಬರ್‌ 17) ಚಾಲನೆ ಸಿಕ್ಕಿದೆ.

ರೋರಿಕ್‌ ಜನ್ಮ ಶತಮಾನೋತ್ಸವಕ್ಕೆ ಕೇಂದ್ರ ಮತ್ತು ರಾಜ್ಯ ಪ್ರವಾಸೋದ್ಯಮ ಇಲಾಖೆಯ ಸಹಕಾರದೊಂದಿಗೆ ಮಂತ್ರಂ ಆರ್ಟ್‌ ಫೌಂಡೇಶನ್‌ ನಾಡಹಬ್ಬದ ಸಂಭ್ರಮ ತುಂಬಲು ಉತ್ಸವವನ್ನು ಆಯೋಜಿಸಿದೆ.

ಉತ್ಸವದ ಅಂಗವಾಗಿ ನಗರದಾದ್ಯಂತ 20 ಕಲಾ ಗ್ಯಾಲರಿಗಳಲ್ಲಿ ಕಲಾಪ್ರದರ್ಶನ ಏರ್ಪಡಿಸಲಾಗಿದ್ದು, ಕಲಾರಸಿಕರಿಗೆ ಸುಗ್ಗಿಯೋ ಸುಗ್ಗಿ. ಎಂ.ಜಿ.ರಸ್ತೆಯ ಬಳಿ 50 ಪ್ರದರ್ಶನ ಮಳಿಗೆಗಳನ್ನು ತೆರೆಯಲಾಗಿದೆ. ಒಡಿಸ್ಸಿ, ಕಥಕ್‌, ಭರತನಾಟ್ಯ ಸೇರಿದಂತೆ ವಿವಿಧ ವೈವಿಧ್ಯಮಯ ಕಲಾ ಪ್ರದರ್ಶನ ಅಕ್ಟೋಬರ್‌ 22 ರವರೆಗೆ ಮುಂದುವರೆಯಲಿದೆ ಎಂದು ಮಂತ್ರ ಆರ್ಟ್‌ ಫೌಂಡೇಶನ್‌ಅಧ್ಯಕ್ಷೆ ಜೀಜಾ ಹರಿಸಿಂಗ್‌ ಹಾಗೂ ನಿರ್ದೇಶಕ ಎಸ್‌. ಕೃಷ್ಣಮೂರ್ತಿ ತಿಳಿಸಿದ್ದಾರೆ.

ಪ್ರದರ್ಶನ ಮಳಿಗೆಯಲ್ಲಿ ಎಂಟು ಅಡಿ ಎತ್ತರದ ಜೇಡಿಮಣ್ಣಿನ ಕುಡಿಕೆ ಎಲ್ಲರ ಗಮನ ಸೆಳೆಯುತ್ತಿದೆ. ಕರಕುಶಲ ಕಲಾಕೃತಿಗಳು, ಟೆರ್ರಕೋಟಾ ಕಲಾಕೃತಿಗಳು, ಇಳಕಲ್‌ ಸೀರೆ ಮತ್ತಿತರ ಕಸೂತಿ ವಸ್ತ್ರಗಳು ವಿವಿಧ ಮಳಿಗೆಗಳಲ್ಲಿ ಗ್ರಾಹಕರ ಸೆಳೆಯುತ್ತಿವೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X