ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎ-1 ಸಿಟಿಯಾಗಿ ಬೆಂಗಳೂರು ನಗರ, ರಾಜ್ಯದ 21 ಪಟ್ಟಣಗಳಿಗೆ ಬಡ್ತಿ

By Staff
|
Google Oneindia Kannada News

ಎ-1 ಸಿಟಿಯಾಗಿ ಬೆಂಗಳೂರು ನಗರ, ರಾಜ್ಯದ 21 ಪಟ್ಟಣಗಳಿಗೆ ಬಡ್ತಿ
ಪಟ್ಟಣ-ನಗರಗಳ ಮೇಲ್ದರ್ಜೆಯಿಂದ ಪ್ರತಿವರ್ಷ ಕೇಂದ್ರಕ್ಕೆ 144 ಕೋಟಿ ಖೋತಾ

ಬೆಂಗಳೂರು: ರಾಜ್ಯದ ಆ-ಯ್ದ ನಗರ ಮತ್ತು ಪಟ್ಟಣಗಳನ್ನು ಕೇಂದ್ರ ಸರಕಾರ ಮೇಲ್ದರ್ಜೆಗೇರಿಸಲು ನಿರ್ಧರಿಸಿದೆ. ಬೆಂಗಳೂರು ನಗರ ಎ-1 ದರ್ಜೆಯ ನಗರವಾಗಿ ಹಾಗೂ ರಾಜ್ಯದ 21 ಪಟ್ಟಣಗಳು ಮೇಲ್ಡರ್ಜೆಗೆ ಬಡ್ತಿ ಹೊಂದಲಿವೆ.

ಮೈಸೂರು, ಬೆಳಗಾವಿ, ಮಂಗಳೂರು ನಗರಗಳನ್ನು ಬಿ-2 ದರ್ಜೆ-ಗೇರಿಸಲಾಗಿದೆ. ಜಮಖಂಡಿ, ಇಳಕಲ್‌, ಶಹಬಾದ್‌, ಯಾದಗೀರ್‌, ಬಸವಕಲ್ಯಾಣ, ಸಿಂಧನೂರು, ಕೊಪ್ಪಳ, ಸಿರ್ಸಿ, ಹಾವೇರಿ, ಸಾಗರ, ಉಡುಪಿ, ಸಿರಾ, ತಿಪಟೂರು, ಚಿಕ್ಕಬಳ್ಳಾಪುರ, ರಾಬರ್ಟ್‌ಸನ್‌ ಪೇಟೆ, ಚಾಮರಾಜನಗರ, ಕೊಳ್ಳೆಗಾಲ, ಪಟ್ಟಣಗಳನ್ನು ಸಿ-ದರ್ಜೆಗೆ ಏರಿಸಲಾಗಿದೆ.

ಕೇಂದ್ರಸರ್ಕಾರದ ನೌಕರರ ಮನೆ ಬಾಡಿಗೆ ಭತ್ಯೆ ಮತ್ತು ನಗರ ಪರಿಹಾರ ಭತ್ಯೆಗಾಗಿ, ದೇಶದ 238 ನಗರ ಮತ್ತು ಪ-ಟ್ಟಣಗಳನ್ನು ಉನ್ನತ ದರ್ಜೆಗೆ ಏರಿಸಲಾಗುತ್ತಿದೆ. ಇದರಿಂದ ಕೇಂದ್ರ ಸರಕಾರಕ್ಕೆ ಪ್ರತಿವರ್ಷ 144 ಕೋಟಿ ರೂಪಾಯಿಗಳ ಆರ್ಥಿಕ ಹೊರೆ ಬೀಳಲಿದೆ.

(ಇನ್ಫೋ ವಾರ್ತೆ)

ಮುಖಪುಟ / ಬೆಂಗಳೂರು ಡೈರಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X