ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಂಡನ್‌ : ಭಾರತದ ವಿಧವೆಯರ ಮಕ್ಕಳ ಶಿಕ್ಷಣಕ್ಕಾಗಿ ‘ಚಾರಿಟಿ ಡಿನ್ನರ್‌’

By Staff
|
Google Oneindia Kannada News

ಲಂಡನ್‌ : ಭಾರತದ ವಿಧವೆಯರ ಮಕ್ಕಳ ಶಿಕ್ಷಣಕ್ಕಾಗಿ ‘ಚಾರಿಟಿ ಡಿನ್ನರ್‌’
ಭಾರತದಲ್ಲಿ ಸುಮಾರು 33 ಮಿಲಿಯನ್‌ ವಿಧವೆಯರು

ಲಂಡನ್‌ : ಭಾರತದಲ್ಲಿನ ವಿಧವೆಯರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ದೇಣಿಗೆ ಸಂಗ್ರಹಿಸುವ ಉದ್ದೇಶದ ‘ಚಾರಿಟಿ ಡಿನ್ನರ್‌’ ಬುಧವಾರ ರಾತ್ರಿ ಲಂಡನ್‌ನಲ್ಲಿ ನಡೆಯಿತು.

ದೀಪಾವಳಿ ಆಚರಣೆಯ ಒಂದು ಭಾಗವಾಗಿ ಹಮ್ಮಿಕೊಳ್ಳಲಾಗಿದ್ದ ಈ ‘ಚಾರಿಟಿ ಡಿನ್ನರ್‌’ನಲ್ಲಿ ಬ್ರಿಟೀಷ್‌ ಪ್ರಧಾನಿ ಟೋನಿ ಬ್ಲೇರ್‌ ಪತ್ನಿ ಚೆರ್ರಿ ಬ್ಲೇರ್‌ ಸೇರಿದಂತೆ ಸುಮಾರು 400 ಗಣ್ಯರು ಭಾಗವಹಿಸಿದ್ದರು. ಭಾರತದಲ್ಲಿ ಸುಮಾರು 33 ಮಿಲಿಯನ್‌ ವಿಧವೆಯರಿದ್ದು , 100 ಮಿಲಿಯನ್‌ ಮಕ್ಕಳು ಈ ವಿಧವೆಯರನ್ನು ಆಶ್ರಯಿಸಿದ್ದಾರೆ ಎಂದು ಚೆರ್ರಿ ಹೇಳಿದರು.

ಒಳ್ಳೆಯ ಕೆಲಸಕ್ಕೆ ದೇಣಿಗೆ ನೀಡುವ ಇಂಥದೊಂದು ಕಾರ್ಯಕ್ರಮವನ್ನು ಏರ್ಪಡಿಸಿರುವ ಲೂಂಬಾ ಟ್ರಸ್ಟ್‌ ಅಭಿನಂದನೀಯ. ಈ ಕಾರ್ಯಕ್ರಮವನ್ನು ನೋಡಿ ನನ್ನ ಹೃದಯ ತುಂಬಿ ಬಂದಿದೆ ಎಂದು ಚೆರ್ರಿ ಹೇಳಿದರು. ಚೆರ್ರಿ ಬ್ಲೇರ್‌ ಲೂಂಬಾ ಟ್ರಸ್ಟ್‌ನ ಅಧ್ಯಕ್ಷರೂ ಹೌದು.

ಪ್ರಸ್ತುತ ಭಾರತದಲ್ಲಿನ 10 ರಾಜ್ಯಗಲ 1100 ಮಕ್ಕಳಿಗೆ ಪ್ರತಿ ತಿಂಗಳೂ 500 ರುಪಾಯಿಯನ್ನು ವಿದ್ಯಾಭ್ಯಾಸಕ್ಕಾಗಿ 5 ವರ್ಷಗಳ ಕಾಲ ನಡೆಯುತ್ತಿದೆ. ಎಲ್ಲ 29 ರಾಜ್ಯಗಳಲ್ಲಿ ತಲಾ 100 ಮಕ್ಕಳಿಗೆ ನೆರವು ನೀಡುವುದು ಟ್ರಸ್ಟ್‌ನ ಗುರಿ ಎಂದು ಟೆರ್ರಿ ಹೇಳಿದರು.

ಲಿಂಗಭೇದವಿಲ್ಲದೆ ಭಾರತದಲ್ಲಿನ ವಿಧವೆಯರ ಮಕ್ಕಳಿಗೆ ನೆರವು ನೀಡುವುದು ಟ್ರಸ್ಟ್‌ನ ಗುರಿ. ಮಾಸಿಕ 1500 ರುಪಾಯಿಗಿಂತಲೂ ಕಡಿಮೆ ವರಮಾನವಿರುವ ವಿಧವೆಯರ ಮಕ್ಕಳಿಗೆ ಈ ನೆರವು ನೀಡಲಾಗುವುದು ಎಂದು ಟ್ರಸ್ಟ್‌ನ ರಾಜ್‌ ಲೂಂಬಾ ಹೇಳಿದರು.

(ಪಿಟಿಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X