ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಿಂಸೆ ಬಿಡಿ, ಮಾತುಕತೆಗೆ ಕೂರಿ: ನಕ್ಸಲ್‌ರಿಗೆ ಧರ್ಮಸಿಂಗ್‌ ಕರೆ

By Staff
|
Google Oneindia Kannada News

ಹಿಂಸೆ ಬಿಡಿ, ಮಾತುಕತೆಗೆ ಕೂರಿ: ನಕ್ಸಲ್‌ರಿಗೆ ಧರ್ಮಸಿಂಗ್‌ ಕರೆ
ನಕ್ಸಲರು ಹಿಂಸೆಗಿಳಿದರೆ ಸರ್ಕಾರ ಮೂಕ ಪ್ರೇಕ್ಷಕನಾಗಿ ಕುಳಿತುಕೊಳ್ಳಲು ಸಾಧ್ಯವಿಲ್ಲ

ಬೆಂಗಳೂರು : ಒಂದೆಡೆ ಪಶ್ಚಿಮ ಘಟ್ಟದ ಅರಣ್ಯ ಪ್ರದೇಶಗಳಲ್ಲಿ ನಕ್ಸಲರಿಗಾಗಿ ಪೊಲೀಸರು ಜಾಲಾಡತೊಡಗಿದ್ದರೆ, ಇ್ನನೊಂದೆಡೆ ನಕ್ಸಲರೊಂದಿಗೆ ಮಾತುಕತೆಗೆ ಸಿದ್ಧ ಎಂದು ಮುಖ್ಯಮಂತ್ರಿ ಧರ್ಮಸಿಂಗ್‌ ಬೆಂಗಳೂರಿನಲ್ಲಿ ಪ್ರಕಟಿಸಿದ್ದಾರೆ.

ನಕ್ಸಲರೊಂದಿಗೆ ಮಾತುಕತೆಗೆ ನಾವು ಸಿದ್ಧ . ಆದರೆ ನಕ್ಸಲರು ಹಿಂಸೆಗಿಳಿದರೆ ಸರ್ಕಾರ ಮೂಕ ಪ್ರೇಕ್ಷಕನಾಗಿ ಕುಳಿತುಕೊಳ್ಳಲು ಸಾಧ್ಯವಿಲ್ಲ ಎಂದು ಅ.13ರಂದು ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಧರ್ಮಸಿಂಗ್‌ ಹೇಳಿದರು.

ನಕ್ಸಲ್‌ ಸಮಸ್ಯೆಯನ್ನು ಸಾಮಾಜಿಯ ಸಮಸ್ಯೆಯನ್ನಾಗಿ ಪರಿಗಣಿಸಲು ಸರ್ಕಾರ ಯೋಚಿಸುತ್ತಿದೆ. ಆ ಕಾರಣದಿಂದಲೇ ಅವರೊಂದಿಗೆ ಮಾತುಕತೆಗೆ ಸಿದ್ಧವಿದೆ ಎಂದ ಧರ್ಮಸಿಂಗ್‌, ಈ ಹಿನ್ನೆಲೆಯಲ್ಲಿ ಆಂಧ್ರ ಸರ್ಕಾರ ಹಾಗೂ ನಕ್ಸಲ್‌ ನಾಯಕರೊಡನೆ ನಡೆಯುತ್ತಿರುವ ಮಾತುಕತೆಯನ್ನು ಉದಾಹರಿಸಿದರು.

ಜನರ ಹಿತಾಸಕ್ತಿಯನ್ನು ರಕ್ಷಿಸುವುದು ಸರ್ಕಾರದ ಪ್ರಾಥಮಿಕ ಕರ್ತವ್ಯ ಎಂದು ಸ್ಪಷ್ಟಪಡಿಸಿದ ಧರ್ಮಸಿಂಗ್‌- ನಕ್ಸಲರು ಮೊದಲು ಹಿಂಸಾತ್ಮಕ ಚಟುವಟಿಕೆಗಳನ್ನು ನಿಲ್ಲಿಸಬೇಕು ಎಂದು ಕರೆ ನೀಡಿದರು.

ಆಗುಂಬೆ ಬಳಿಯ ಬರ್ಕಾಣ ಜಲಪಾತದಿಂದ 5 ಕಿಮೀ ದೂರದಲ್ಲಿ ಅ. 11ರಂದು ನಕ್ಸಲರು ಹಾಗೂ ಪೊಲೀಸರ ನಡುವೆ ಗುಂಡಿನ ಚಕಮಕಿ ನಡೆದಿತ್ತು . ಈ ಚಕಮಕಿಯಲ್ಲಿ ನಕ್ಸಲ್‌ ಗುಂಪಿನಲ್ಲಿ ಸಾವುನೋವು ಉಂಟಾಗಿರಬಹುದು ಎಂದು ಊಹಿಸಲಾಗಿದೆ.

(ಪಿಟಿಐ)

ಮುಖಪುಟ / ಧರ್ಮ-ಕಾರಣ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X