ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಂಪಿ ಸಮಗ್ರ ಅಭಿವೃದ್ಧಿಗೆ ಕೇಂದ್ರದಿಂದ 5 ಕೋಟಿ ಅನುದಾನ

By Staff
|
Google Oneindia Kannada News

ಹಂಪಿ ಸಮಗ್ರ ಅಭಿವೃದ್ಧಿಗೆ ಕೇಂದ್ರದಿಂದ 5 ಕೋಟಿ ಅನುದಾನ
ಹಳೇಬೀಡಿನಲ್ಲಿನ ಹೊಯ್ಸಳ ದೇಗುಲದ ಅಭಿವೃದ್ಧಿಗೆ 61 ಲಕ್ಷ ರುಪಾಯಿ

ಹಂಪಿ : ಯುನೆಸ್ಕೋ ವಿಶ್ವ ಪರಂಪರೆ ಪಟ್ಟಿಯಲ್ಲಿರುವ ಹಂಪಿಯ ಸಮಗ್ರ ಅಭಿವೃದ್ಧಿಗಾಗಿ 5 ಕೋಟಿ ರುಪಾಯಿಗಳ ಅನುದಾನವನ್ನು ಕೇಂದ್ರ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಖಾತೆ ಸಚಿವೆ ರೇಣುಕಾ ಚೌಧುರಿ ಪ್ರಕಟಿಸಿದ್ದಾರೆ.

ಹಂಪಿಯ ಸುತ್ತಲಿನ ಪ್ರದೇಶವನ್ನು ಪರಂಪರೆ ಹಳ್ಳಿಯನ್ನು ರೂಪಿಸಲಾಗುವುದು. ಈ ಪ್ರದೇಶದ ಸಮಗ್ರ ಅಭಿವೃದ್ಧಿಗೆ ಕೇಂದ್ರ ಸರ್ಕಾರ ನಿಗಾ ಹರಿಸಿದ್ದು , 5 ಕೋಟಿ ರುಪಾಯಿ ಅನುದಾನ ನೀಡಲಿದೆ ಎಂದು ಸಚಿವೆ ರೇಣುಕಾ ಚೌಧುರಿ ಹೇಳಿದರು. ಅವರು ಅ.12ರಂದು ಹಂಪಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಗಾಲಿಗಳ ಮೇಲಿನ ಅರಮನೆ ಮಾದರಿಯಲ್ಲಿ ಹಂಪಿ ಸೇರಿದಂತೆ ದಕ್ಷಿಣ ಭಾರತದ ಸಾಂಸ್ಕೃತಿಕ-ಪಾರಂಪರಿಕ ನಗರಿಗಳ ಪ್ರಚಾರಕ್ಕೆ ಮುಂದಿನ ವರ್ಷ ರೈಲು ಸಂಚಾರ ಪ್ರಾರಂಭವಾಗಲಿದೆ. ಕರ್ನಾಟಕ, ಕೇರಳ, ತಮಿಳುನಾಡು ಹಾಗೂ ಆಂಧ್ರಪ್ರದೇಶವನ್ನು ಸಂಪರ್ಕಿಸುವ ಈ ರೈಲಿನಲ್ಲಿ ಪ್ರವಾಸಿಗರು ಪ್ಯಾಕೇಜ್‌ ರೂಪದಲ್ಲಿ ಸಂಚರಿಸಬಹುದು ಎಂದರು.

ಅರ್ಧಕ್ಕೆ ನಿಂತಿರುವ ಆನೆಗೊಂದಿ ತೂಗುಸೇತುವೆ ವಿಷಯವನ್ನು ಯುನೆಸ್ಕೋದೊಂದಿಗೆ ಚರ್ಚಿಸುವುದಾಗಿ ರೇಣುಕಾ ಚೌಧುರಿ ಹೇಳಿದರು. ಹಳೇಬೀಡಿನಲ್ಲಿನ ಹೊಯ್ಸಳ ದೇಗುಲದ ಅಭಿವೃದ್ಧಿಗೆ 61 ಲಕ್ಷರುಪಾಯಿಗಳ ಅನುದಾನವನ್ನು ರೇಣುಕಾ ಚೌಧುರಿ ಇದೇ ಸಂದರ್ಭದಲ್ಲಿ ಪ್ರಕಟಿಸಿದರು.

(ಪಿಟಿಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X