ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ರಿಮಿನಲ್‌ ಕೇಸುಗಳಲ್ಲಿ ಶೇ.50 ಸಂಸದರು-ಮೇರಾ ಭಾರತ ಮಹಾನ್‌!

By Staff
|
Google Oneindia Kannada News

ಕ್ರಿಮಿನಲ್‌ ಕೇಸುಗಳಲ್ಲಿ ಶೇ.50 ಸಂಸದರು-ಮೇರಾ ಭಾರತ ಮಹಾನ್‌!
ನಮ್ಮ ಸಂಸದರ ಅಧಿಕೃತ ಅಸ್ತಿ ಮೌಲ್ಯ 878 ಕೋಟಿ ರೂ.ಗಳು ಮಾತ್ರ!

ಬೆಂಗಳೂರು: ಭಾರತದಲ್ಲಿ ಶೇ.50ಕ್ಕೂ ಅಧಿಕ ಸಂಸದರು ಐವತ್ತು ಲಕ್ಷ ರೂ.ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ. ಅಷ್ಟೇ ಅಲ್ಲ -
  • ಬಿಹಾರ, ಉತ್ತರ ಪ್ರದೇಶ, ಮಧ್ಯಪ್ರದೇಶ, ಜಾರ್ಖಂಡ್‌ನಲ್ಲಿ ಶೇ.50 ರಷ್ಟು ಸಂಸದರು ಕ್ರಿಮಿನಲ್‌ ಮೊಕದ್ದಮೆಗಳನ್ನು ಎದುರಿಸುತ್ತಿದ್ದಾರೆ. ಇವರಲ್ಲಿ ಕೆಲವರು ದಂಡ ಹಾಗೂ ಜೈಲು ವಾಸವನ್ನು ಸಹಾ ಅನುಭವಿಸಿದ್ದಾರೆ.
  • ಸಂಸದರ ಒಟ್ಟು ಅಧಿಕೃತ ಆಸ್ತಿಯ ಮೌಲ್ಯ 878 ಕೋಟಿ ರೂ.ಗಳೆಂದು ಅಂದಾಜಿಸಲಾಗಿದೆ. ಸಂಸದರ ಕಾರುಗಳ ಮೌಲ್ಯವನ್ನು ಇದರಲ್ಲಿ ಸೇರಿಸಿಲ್ಲ.
  • ಕಾಂಗ್ರೆಸ್‌ಪಕ್ಷದಲ್ಲಿ ಅತಿಹೆಚ್ಚು ಅಂದರೆ ಶೇ.45ರಷ್ಟು ಸಂಸದರು ಕೋಟ್ಯಾಧಿಪತಿಗಳು.
ಈ ಅಂಶಗಳು ಬೆಂಗಳೂರಿನ ಸಾರ್ವಜನಿಕ ಸಂಪರ್ಕ ಕೇಂದ್ರದ ಡಾ.ಸ್ಯಾಮ್ಯುಯೆಲ್‌ ಪೌಲ್‌ ಮತ್ತು ಎಂ.ವಿವೇಕಾ ನಂದ ನಡೆಸಿದ ಅಧ್ಯಯನದಲ್ಲಿ ಬೆಳಕಿಗೆ ಬಂದಿವೆ. 541 ಸಂಸದರು ಕಳೆದ ಲೋಕಸಭಾ ಚುನಾವಣೆಗೆ ಸಲ್ಲಿಸಿದ್ದ ಸ್ವಯಂ ಆಸ್ತಿಘೋಷಣೆಯ ಪ್ರಮಾಣ ಪತ್ರಗಳನ್ನು ಇವರು ತಮ್ಮ ಅಧ್ಯಯನ ಕಾರ್ಯಕ್ಕೆ ಸಂಗ್ರಹಿಸಿದ್ದಾರೆ.

ಹಿಮಾಚಲ ಪ್ರದೇಶ, ದೆಹಲಿ, ಉತ್ತಾರಾಂಚಲ, ಜಮ್ಮು ಮತ್ತು ಕಾಶ್ಮೀರದಲ್ಲಿ ಕ್ರಿಮಿನಲ್‌ ಹಿನ್ನೆಲೆಯ ಸಂಸದರು ವಿರಳ.

132 ಸಂಸದರ ವಿದ್ಯಾಭ್ಯಾಸ ಪದವಿ ಮಟ್ಟಕ್ಕಿಂತಲೂ ಕಡಿಮೆ ಇದೆ. ಕಾಂಗ್ರೆಸ್‌ನ ಶೇ 52 ರಷ್ಟು ಸಂಸದರು ಆಸ್ತಿದಾರರಾ ಗಿದ್ದು, ಕಮ್ಯುನಿಸ್ಟ್‌ ಪಕ್ಷದ ಸಂಸದರಲ್ಲಿ ಒಬ್ಬರೂ ಕೋಟ್ಯಾಧಿಪತಿಗಳಿಲ್ಲ. ಕೆಲವರು 10 ಲಕ್ಷಕ್ಕೂ ಕಡಿಮೆ ಆಸ್ತಿಯನ್ನು ಹೊಂದಿದ್ದಾರೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಸಂಸದರು ಆಸ್ತಿ ವಿಚಾರದಲ್ಲಿ ಹಿಂದೆ ಬಿದ್ದಿಲ್ಲ. ಕೆಲವರು 2 ಕೋಟಿಗೂ ಅಧಿಕ ಅಸ್ತಿಯನ್ನು ಹೊಂದಿದ್ದಾರೆ.

ಕೃಷಿಗೆ ಸಂಬಂಧಿಸಿದಂತೆ, ಕಾಂಗ್ರೆಸ್‌ ಸಂಸದರು(ಶೇ.18.6), ಬಿಜೆಪಿ ಸಂಸದರು(ಶೇ.24.1), ಆರ್‌ಜೆಡಿ ಸಂಸದರು(ಶೇ 43), ಬಿಎಸ್‌ಪಿ ಸಂಸದರು(ಶೇ.35.3) ಆಸ್ತಿ ಹೊಂದಿದ್ದಾರೆ ಎಂದು ಅಧ್ಯಯನ ತಿಳಿಸಿದೆ.

(ಪಿಟಿಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X