• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮೈಸೂರು ದಸರೆಯಲ್ಲಿ ರಾಜಾತಿಥ್ಯ! ಗೋಲ್ಡ್‌ಕಾರ್ಡ್‌ ಇದೆ ತಾನೆ ?

By Staff
|

ಮೈಸೂರು ದಸರೆಯಲ್ಲಿ ರಾಜಾತಿಥ್ಯ! ಗೋಲ್ಡ್‌ಕಾರ್ಡ್‌ ಇದೆ ತಾನೆ ?

ಪ್ರವಾಸಿಗರ ಅನುಕೂಲಕ್ಕಾಗಿ ದಸರಾ ಉತ್ಸವ ಸಮಿತಿಯ ಕೊಡುಗೆ

ಮೈಸೂರು: ವಿಶ್ವವಿಖ್ಯಾತ ದಸರಾ ವೈಭವವನ್ನು ಸವಿಯಲು ಮೈಸೂರಿಗೆ ಆಗಮಿಸುವ ಪ್ರವಾಸಿಗರ ಅನುಕೂಲಕ್ಕಾಗಿ ದಸರಾ ಉತ್ಸವ ಸಮಿತಿ ಗೋಲ್ಡ್‌ ಕಾರ್ಡ್‌ಗಳನ್ನು ಬಿಡುಗಡೆ ಮಾಡಿದೆ. ಸರಕಾರಿ ಇಲಾಖೆಗಳು ಹಾಗೂ ಕೆಲವು ಹೋಟೆಲ್‌ಗಳಲ್ಲಿ ಗೋಲ್ಡ್‌ ಕಾರ್ಡ್‌ ಲಭ್ಯ.

ಒಂಬತ್ತು ದಿನಗಳ ಕಾಲ ಮೈಸೂರಿನಲ್ಲಿ ದಸರಾ ಹಿನ್ನೆಲೆಯಲ್ಲಿ ಅಯೋಜಿಸಲಾಗುವ ಎಲ್ಲಾ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಈ ಕಾರ್ಡ್‌ ಹೊಂದಿದವರಿಗೆ ಉಚಿತ ಪ್ರವೇಶ. ಮುಖ್ಯವಾಗಿ ವಿದೇಶಿ ಪ್ರವಾಸಿಗರನ್ನು ದೃಷ್ಟಿಯಲ್ಲಿಟ್ಟುಕೊಂಡು ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ. ಕಾರ್ಡ್‌ನ ಬೆಲೆ 5000 ರೂ,ಗಳು.

ಸುಮಾರು ಒಂದು ಸಾವಿರ ಕಾರ್ಡ್‌ಗಳನ್ನು ಬಿಡುಗಡೆ ಮಾಡಲಾಗಿದೆ. ಕಳೆದ ವರ್ಷ 717 ಕಾರ್ಡ್‌ಗಳನ್ನು ಮಾರಾಟ ಮಾಡಿ 35.85 ಲಕ್ಷರೂ.ಗಳನ್ನು ಸಂಗ್ರಹಿಸಲಾಗಿತ್ತು. ಈ ವರ್ಷ 45 ರಿಂದ 50 ಲಕ್ಷ ರೂ. ಆದಾಯ ದೊರಕುವ ನಿರೀಕ್ಷೆಯಿದೆ ಎಂದು ದಸರಾ ಮಹೋತ್ಸವದ ವಿಶೇಷಾಧಿಕಾರಿ ಎ.ಬಿ.ಇಬ್ರಾಹಿಂ ತಿಳಿಸಿದ್ದಾರೆ.

ಈ ಕಾರ್ಡ್‌ದಾರರು ಹೋಟೆಲ್‌, ಶಾಪಿಂಗ್‌ ಸೆಂಟರ್‌ ಮತ್ತಿತರ ಮಾರಾಟ ಕೇಂದ್ರಗಳಲ್ಲಿ ಶೇ.10 ರಿಂದ 25 ರಷ್ಟು ರಿಯಾಯಿತಿ ಪಡೆಯಬಹುದು. ಅಲ್ಲದೇ ಜಂಬೂ ಸವಾರಿ ಮೆರವಣಿಗೆ ವೀಕ್ಷಣೆಗೆ ಕಾರ್ಡ್‌ದಾರರಿಗೆ ಪ್ರತ್ಯೇಕ ಆಸನಗಳನ್ನು ಕಲ್ಪಿಸುವ ವ್ಯವಸ್ಥೆ ಇದೆ.

ನಗದು ಅಥವಾ ಡಿಡಿ ಮೂಲಕ ಗೋಲ್ಡ್‌ ಕಾರ್ಡ್‌ಗಳನ್ನು ಪಡೆಯಬಹುದಾದ ವಿಳಾಸಗಳು:

The Deputy Commissioners office (2422302), Office of the Mysore City Corporation Commissioner (2418888), Office of the Secretary, Agriculture Produce Marketing Committee (2482389), Office of the Deputy Director, Palace Board (2434425), Hotel President (245111), Hotel Southern Star (2426426), Hotel Mayura Yatri Nivas (2425349), Hotel Sandesh De Prince (2436999), Hotel Mayura Hoysala (2425349), Skyway Travel Agencies (2444444). The Skyway Travel Agencies Bangalore (25200001).

(ಏಜನ್ಸಿಸ್‌)

ಮುಖಪುಟ / ವಾರ್ತೆಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more