ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯು.ಆರ್‌.ಅನಂತಮೂರ್ತಿಗೆ ಕೇಂದ್ರಸಾಹಿತ್ಯಅಕಾಡೆಮಿ ಫೆಲೋಷಿಪ್‌

By Staff
|
Google Oneindia Kannada News

ಯು.ಆರ್‌.ಅನಂತಮೂರ್ತಿಗೆ ಕೇಂದ್ರಸಾಹಿತ್ಯಅಕಾಡೆಮಿ ಫೆಲೋಷಿಪ್‌
ನವೆಂಬರ್‌ 1 ರಂದು ಪ್ರಧಾನಿ ಮನಮೋಹನ್‌ ಸಿಂಗ್‌ರಿಂದ ಗೌರವ ಸಲ್ಲಿಕೆ

ಬೆಂಗಳೂರು : ಭಾರತೀಯ ಸಾಹಿತ್ಯ ಕ್ಷೇತ್ರದಲ್ಲಿ ಅತ್ಯುನ್ನತ ಗೌರವಗಳಲ್ಲೊಂದಾದ ಕೇಂದ್ರ ಸಾಹಿತ್ಯ ಅಕಾಡೆಮಿಯ ಫೆಲೋಷಿಪ್‌ ಗೌರವಕ್ಕೆ ಕನ್ನಡದ ಖ್ಯಾತ ಸಾಹಿತಿ, ಜ್ಢಾನಪೀಠ ಪ್ರಶಸ್ತಿ ವಿಜೇತ ಪ್ರೊ. ಯು.ಆರ್‌. ಅನಂತಮೂರ್ತಿ ಪಾತ್ರರಾಗಿದ್ದಾರೆ.

ನವೆಂಬರ್‌ 1ರಂದು ನಡೆಯಲಿರುವ ಸಾಹಿತ್ಯ ಅಕಾಡೆಮಿಯ ಸ್ವರ್ಣ ಜಯಂತಿ ಮಹೋತ್ಸವದಲ್ಲಿ ಪ್ರಧಾನಿ ಮನ ಮೋಹನ್‌ ಸಿಂಗ್‌, ಅನಂತಮೂರ್ತಿವರಿಗೆ ಫೆಲೋಷಿಪ್‌ ನೀಡಿ ಗೌರವಿಸಲಿದ್ದಾರೆ.

1995 ರಲ್ಲಿ ಜ್ಞಾನಪೀಠ ಪ್ರಶಸ್ತಿ ಪಡೆದಿರುವ 72 ರ ಹರೆಯದ ಪ್ರೊ. ಅನಂತ ಮೂರ್ತಿ ಕಾದಂಬರಿ, ಸಣ್ಣಕತೆ ಮತ್ತು ಕಾವ್ಯ, ವಿಮರ್ಶೆಯ ಮೂಲಕ ಸದೃದಯರನ್ನು ತಲುಪಿದ್ದಾರೆ. ಇವರ ಸಂಸ್ಕಾರ, ಭಾರತೀಪುರ, ಅವಸ್ಥೆ, ಭವ ಮತ್ತು ದಿವ್ಯ ಕಾದಂಬರಿಗಳು, ಸೂರ್ಯನ ಕುದುರೆ, ಮೌನಿ, ಆಕಾಶ ಮತ್ತು ಬೆಕ್ಕು ಮತ್ತಿತರ ಕಥಾ ಸಂಕಲನಗಳು, ಮಿಥುನ ಮತ್ತು ಅಜ್ಜನ ಹೆಗಲ ಸುಕ್ಕುಗಳು ಕವನ ಸಂಕಲನಗಳು ಸಾಹಿತ್ಯವಲಯದಲ್ಲಿ ಚರ್ಚೆಗೆ ಗುರಿಯಾಗಿವೆ.

ಸಾಹಿತ್ಯ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಜ್ಞಾನಪೀಠ ಪ್ರಶಸ್ತಿ ವಿಜೇತ ಪಂಜಾಬಿ ಸಾಹಿತಿ ಅಮೃತ್‌ ಪ್ರೀತಮ್‌, ಬಂಗಾಳಿ ಕವಿ ಸಾಂಕಾ ಘೋಷ್‌, ರಾಜಾಸ್ತಾನಿ ಮತ್ತು ಹಿಂದಿ ಲೇಖಕ ವಿಜಯ್‌ದಾನ ದೇತಾ, ತೆಲುಗು ಭಾಷಾ ತಜ್ಞ ಮತ್ತು ವಿದ್ವಾಂಸ ಪ್ರೊ. ಬಿ.ಕೃಷ್ಣಮೂರ್ತಿ ಅವರನ್ನೂ ಸಾಹಿತ್ಯ ಅಕಾಡೆಮಿ ಫೆಲೋಷಿಪ್‌ಗೆ ಆಯ್ಕೆ ಮಾಡಲಾಗಿದೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X