ಹ್ಯೂಸ್ಟನ್ : ಅ. 2 ಶಾಂತಿದೂತ ಮಹಾತ್ಮ ಗಾಂಧಿ ಪ್ರತಿಮೆ ಅನಾವರಣ
ಹ್ಯೂಸ್ಟನ್ : ಅ. 2 ಶಾಂತಿದೂತ ಮಹಾತ್ಮ ಗಾಂಧಿ ಪ್ರತಿಮೆ ಅನಾವರಣ
135ನೇ ವರ್ಷದ ಗಾಂಧಿ ಜಯಂತಿ ಸಂಭ್ರಮಕ್ಕೆ ಹತ್ತಾರು ಕಾರ್ಯಕ್ರಮಗಳು
ಹ್ಯೂಸ್ಟನ್(ಯುಎಸ್‌ಎ): ಶಾಂತಿಯ ಮಹತ್ವವನ್ನು ಜಗತ್ತಿಗೆ ಸಾರಿದ ಗಾಂಧೀಜಿಯ 135ನೇ ಜಯಂತಿ ಹಿನ್ನೆಲೆಯಲ್ಲಿ ಶನಿವಾರ(ಅಕ್ಟೋಬರ್ 2)ರಂದು ಹ್ಯೂಸ್ಟನ್‌ನಲ್ಲಿ ಕಂಚಿನ ಗಾಂಧಿ ಪ್ರತಿಮೆಯನ್ನು ಸ್ಥಾಪಿಸಲು ಸಿದ್ದತೆಗಳು ನಡೆದಿವೆ.
ಕಲಾವಿದ ರಾಮ್ ಸುತಾರ್ ತಯಾರಿಸಿರುವ ಈ ಕಂಚಿನ ಪ್ರತಿಮೆಯನ್ನು ಭಾರತ ಸರಕಾರವು ಹ್ಯೂಸ್ಟನ್ ಪೌರರಿಗೆ ಸ್ನೇಹದ ಸಂಕೇತವಾಗಿ ನೀಡಿತ್ತು. ಸುಮಾರು 6 ಆಡಿ ಎತ್ತರದ ಈ ಪ್ರತಿಮೆಯನ್ನು ನಗರದ ಹರ್ಮನ್ ಉದ್ಯಾನದಲ್ಲಿ ಅಕ್ಟೋಬರ್ 2ರಂದು ಅನಾವರಣಗೊಳಿಸಲಾಗುತ್ತಿದೆ. ಪ್ರತಿವರ್ಷ ಮಿಲಿಯನ್‌ಗಟ್ಟಲೇ ಪ್ರವಾಸಿಗರು ಭೇಟಿ ನೀಡು ವ ಈ ಉದ್ಯಾನದಲ್ಲಿ ಗಾಂಧಿ ಪ್ರತಿಮೆಗೆ ಸ್ಥಾನ ಕಲ್ಪಿಸಲಾಗಿದೆ.
ಹ್ಯೂಸ್ಟನ್‌ನ ಮೇಯರ್ ಬಿಲ್ ವೈಟ್‌ವಿಲ್, ಭಾರತದ ರಾಯಭಾರಿಯವರಿಂದ ಪ್ರತಿಮೆಯನ್ನು ಸಾಂಕೇತಿಕವಾಗಿ ಸ್ವೀಕರಿಸಿದ್ದರು. ನಗರದಲ್ಲಿನ ಭಾರತೀಯ ಸಮುದಾಯವು ಸೆ.27ರಿಂದ ಅಕ್ಟೋಬರ್ 3 ರವರೆಗೆ ಸತತವಾಗಿ ಗಾಂಧಿ ಸಪ್ತಾಹವನ್ನು ಆಚರಿಸಲು ನಿರ್ಧರಿಸಿದೆ. ಗಾಂಧಿ ಬಗೆಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
(ಪಿಟಿಐ)
ಮುಖಪುಟ / ವಾರ್ತೆಗಳು