ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೃಷಿ ಪದವೀಧರರಿಗೆ ನಬಾರ್ಡ್‌ನಿಂದ ಸರಳ ಬಡ್ಡಿಯ ಸಾಲ ಯೋಜನೆ

By Staff
|
Google Oneindia Kannada News

ಕೃಷಿ ಪದವೀಧರರಿಗೆ ನಬಾರ್ಡ್‌ನಿಂದ ಸರಳ ಬಡ್ಡಿಯ ಸಾಲ ಯೋಜನೆ
ಕೃಷಿ ಪಧವೀದರರು ಕೃಷಿ ಪೋಷಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಹಲವು ಯೋಜನೆ

ಬೆಂಗಳೂರು : ರಾಜ್ಯದಲ್ಲಿ ಕೃಷಿ ಪದವೀದರು ಸ್ಥಾಪಿಸುವ ಆಗ್ರಿಕ್ಲಿನಿಕ್‌ ಮತ್ತು ಆಗ್ರಿಬಿಜಿನೆಸ್‌ ಕೇಂದ್ರಗಳಿಗೆ ಶೇಕಡಾ ಐದರಷ್ಟು ಬಡ್ಡಿ ದರ ದಲ್ಲಿ ಸಾಲ ಸೇರಿದಂತೆ ಕೆಲವು ರಿಯಾಯಿತಿಗಳನ್ನು ನಬಾರ್ಡ್‌ ಘೋಷಿಸಿದೆ.

ಕೃಷಿ ಪಧವೀದರರು ಕೃಷಿ ಪೋಷಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಬ್ಯಾಂಕ್‌ ಮತ್ತಿತರ ಹಣಕಾಸು ಸಂಸ್ಥೆಗಳು ಹೆಚ್ಚಿನ ಪ್ರೋತ್ಸಾಹ ನೀಡಬೇಕೆಂದು ನಬಾರ್ಡ್‌ ಎಲ್ಲಾ ಬ್ಯಾಂಕ್‌ಗಳ ಮುಖ್ಯಸ್ಥರಿಗೆ ಸುತ್ತೋಲೆ ಮೂಲಕ ನಿರ್ದೇಶನ ನೀಡಿದೆ.

ಆಗ್ರಿಕ್ಲಿನಿಕ್‌ ಮತ್ತು ಆಗ್ರಿಬಿಜಿನೆಸ್‌ ಕೇಂದ್ರಗಳ ಸ್ಥಾಪನೆಗಾಗಿ ರೂಪಿಸಲಾಗಿರುವ ಮರುಪಾವತಿ ಮಾಡುವ ಸಾಲ ಯೋಜನೆಯಡಿ ಸಾಲದ ಗರಿಷ್ಠ ಮೊತ್ತ ಎಷ್ಟೇ ಇದ್ದರೂ ಅದಕ್ಕೆ ಶೇಕಡಾ 5.5 ರಷ್ಟು ಮಾತ್ರ ಬಡ್ಡಿ ವಿಧಿಸಬೇಕು. ಈ ಪರಿಷ್ಕೃತ ಬಡ್ಡಿ ದರಗಳನ್ನು ಬ್ಯಾಂಕಗಳು ಪರಿಗಣನೆಗೆ ತೆಗೆದುಕೊಳ್ಳಬೇಕು. ಜತೆಗೆ ಐದು ಲಕ್ಷ ರೂ. ಗಳ ಸಾಲದ ವರೆಗೆ ಅಂಚಿನ ಹಣವನ್ನು ಭಾರತೀಯ ರಿಸರ್ವ್‌ ಬ್ಯಾಂಕ್‌ ಮನ್ನಾ ಮಾಡಿದೆ.

ಐದು ಲಕ್ಷ ರೂ. ಮೀರಿದ ಸಾಲಗಳಿಗೆ ಫಮಾರ್ಜಿನ್‌ ಮನಿಫ ನೆರವು ದೊರೆಯಲಿದೆ. ಈ ರೀತಿಯ ಸಾಲ ಯೋಜನೆಗಳಿಗೆ ವಾರ್ಷಿಕ ಶೇಕಡಾ 5ಕ್ಕೆ ಬದಲಾಗಿ ಶೇಕಡಾ 2 ರಷ್ಟು ಗರಿಷ್ಠ ಸೇವಾ ಶುಲ್ಕವನ್ನು ಸಂಗ್ರಹಿಸಬಹುದಾಗಿದೆ ಎಂದು ನಬಾರ್ಡ್‌ ಸುತ್ತೋಲೆಯಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ.

ಸಾಲ ಪಡೆಯಲು ಕೇಲವು ನಿಯಮಗಳು :

  • ಆಗ್ರಿಕ್ಲಿನಿಕ್‌ ಮತ್ತು ಆಗ್ರಿಬಿಸ್ನೆಸ್‌ ಕೇಂದ್ರಗಳನ್ನು ಸ್ಥಾಪನೆ ಮಾಡಬೇಕಾದರೆ ಕೃಷಿ ಪಧವೀದರರು ವೈಯಕ್ತಿಕ ಅಥವಾ ಜಂಟಿಯಾಗಿ ಅಥವಾ ಗುಂಪುಗಳ ಆಧಾರದ ಮೇಲೆ ಸಾಲ ಪಡೆಯಬಹುದಾಗಿದೆ.
  • ಈ ಯೋಜನೆಗಳಿಗೆ ಸಾಲ ನಿಗದಿಪಡಿಸುವಾಗ ಮೊದಲ ಆರು ತಿಂಗಳನ್ನು ಬಂಡವಾಳ ವೆಚ್ಚವೆಂದೇ ಬ್ಯಾಂಕ್‌ ಪರಿಗಣಿಸಬಹುದಾಗಿದೆ.
  • ಪ್ರತಿ ಜಿಲ್ಲೆಯಲ್ಲಿಯೂ ಕನಿಷ್ಠ 10 ಆಗ್ರಿಕ್ಲಿನಿಕ್‌ ಮತ್ತು ಆಗ್ರಿಬಿಜಿನೆಸ್‌ ಕೇಂದ್ರಗಳ ಸ್ಥಾಪನೆಗಳ ಗುರಿ ಸಾಧಿಸಲು ಅಗತ್ಯ ಸಾಲದ ಬೆಂಬಲ ನೀಡಬೇಕು.
(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X