ಪ್ರಥಮ ದೇಶೀ ಶೈಕ್ಷಣಿಕ ಉಪಗ್ರಹ ‘ಎಜುಸ್ಯಾಟ್’ ಯಶಸ್ವಿ ಉಡಾವಣೆ
ಪ್ರಥಮ ದೇಶೀ ಶೈಕ್ಷಣಿಕ ಉಪಗ್ರಹ ‘ಎಜುಸ್ಯಾಟ್’ ಯಶಸ್ವಿ ಉಡಾವಣೆ
ದೂರ ಶಿಕ್ಷಣ ಕಾರ್ಯಕ್ರಮಗಳಿಗೆ ಎಜುಸ್ಯಾಟ್‌ನಿಂದ ಭೀಮಬಲ
ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಕಾಶ ಕೇಂದ್ರದಲ್ಲಿ ಸೋಮವಾರ ಮಧ್ಯಾಹ್ನ 4.18 ನಿಮಿಷಕ್ಕೆ ಎಜುಸ್ಯಾಟ್ ಉಪಗ್ರಹವನ್ನು ಯಶಸ್ವಿಯಾಗಿ ಉಡಾಯಿಸಲಾಯಿತು ಎಂದು ಇಸ್ರೋ ತಿಳಿಸಿದೆ.
ಶೈಕ್ಷಣಿಕ ಉದ್ದೇಶದಿಂದ ಮೊದಲ ಸಲ ಉಪಗ್ರಹವನ್ನು ಹಾರಿ ಬಿಡಲಾಗಿದ್ದು, ದೂರ ಶಿಕ್ಷಣ ಕಾರ್ಯಕ್ರಮಗಳಿಗೆ ಇದರ ಪ್ರಯೋಜನ ಲಭ್ಯವಾಗಲಿದೆ. ಸುಮಾರು 2000 ಕಿ.ಲೋ ಭಾರದ, 49 ಮೀಟರ್ ಎತ್ತರದ ಈ ಉಪಗ್ರಹ ಎಲ್ಲಾ ಪರೀಕ್ಷೆಗಳಿಗೆ ಒಳಪಟ್ಟಿದೆ. 138 ಟನ್ ಇಂಧನವನ್ನು ಉಪಗ್ರಹ ಒಳಗೊಂಡಿದೆ.
ಈಗಾಗಲೇ ಇನ್ಸಾಟ್-3ಸಿ ಮೂಲಕ ವಿಶ್ವೇಶ್ವರಯ್ಯ ತಾಂತ್ರಿಕ ವಿವಿ, ಮಹಾರಾಷ್ಟ್ರ ವೈ.ಬಿ. ಚವಾಣ್ ಮುಕ್ತ ವಿವಿ, ಭೋಪಾಲ್ ರಾಜೀವ್‌ಗಾಂಧಿ ಮುಕ್ತ ವಿವಿ, ಹಾಗೂ ಕೇರಳದ ವೈದ್ಯವಿಜ್ಞಾನ ಸಂಸ್ಥೆ ಪ್ರಾಯೋಗಿಕವಾಗಿ ಶಿಕ್ಷಣ ಪ್ರಸಾರ ಕಾರ್ಯಕ್ರಮ ಕೈಗೊಂಡಿದ್ದು, ಈ ಯೋಜನೆಗಳನ್ನು ಎಜುಸ್ಯಾಟ್‌ಗೆ ವರ್ಗಾಯಿಸಲಾಗುವುದು. ಗ್ರಾಮೀಣಪ್ರದೇಶದಲ್ಲಿ ಶಿಕ್ಷಣದ ಗುಣಮಟ್ಟ ಸುಧಾರಣೆಗೆ ಈ ಉಪಗ್ರಹ ಪೂರಕವಾಗಲಿದ(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications