ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಹತ್ತಿರದ ಕವಿ’ ನಿಸಾರರ ‘ಸ-ರಸೋಕ್ತಿಗಳ ಸಂಗಾತಿ’ ಪುಸ್ತಕ ಅನಾವರಣ

By Staff
|
Google Oneindia Kannada News

‘ಹತ್ತಿರದ ಕವಿ’ ನಿಸಾರರ ‘ಸ-ರಸೋಕ್ತಿಗಳ ಸಂಗಾತಿ’ ಪುಸ್ತಕ ಅನಾವರಣ
ಸಮೂಹ ಮಾಧ್ಯಮಗಳ ದಾಳಿಯಿಂದ ಕನ್ನಡ ತತ್ತರ -ನಿಸಾರ್‌ ವ್ಯಥೆ

ಬೆಂಗಳೂರು: ನಾನು ಎತ್ತರದ ಕವಿಯಲ್ಲ ಹತ್ತಿರದ ಕವಿ. ಬದುಕಿನಲ್ಲಿ ಕಂಡ ರಸಮಯ ಕ್ಷಣಗಳನ್ನು, ಪಟ್ಟ ಕಷ್ಟಗಳನ್ನು, ಸ್ನೇಹಿತರ ಒಡನಾಟ ಹಾಗೂ ನನ್ನ ಸುತ್ತಲಿನ ಸೂಕ್ಷ್ಮತೆಗಳನ್ನು ಸ-ರಸೋಕ್ತಿಗಳ ಸಂಗಾತಿ ಪುಸ್ತಕದಲ್ಲಿ ಮೆಲುಕು ಹಾಕಿರುವುದಾಗಿ ಕವಿ ಕೆ.ಎಸ್‌. ನಿಸಾರ್‌ ಅಹಮದ್‌ ಹೇಳಿದರು.

ನಿವೃತ್ತ ಕನ್ನಡ ಪ್ರಾಧ್ಯಾಪಕರಾದ ಪ್ರೊ.ಎಚ್‌.ಪಿ.ರಾಜಶೇಖರ ಶೆಟ್ಟಿಯವರ ನಿವಾಸದಲ್ಲಿ ಭಾನುವಾರ ತಮ್ಮ, ಸಮಗ್ರ ಕೃತಿಗಳಿಂದ ಹಾಗೂ ಅಪ್ರಕಟಿತ ಬರಹಗಳಿಂದ ಸಂಗ್ರಹಿಸಿದ ಚಿಂತನ ಪರ ನುಡಿಗಳ ‘ಸ-ರಸೋಕ್ತಿಗಳ ಸಂಗಾತಿ’ ಕೃತಿಯ ಬಿಡುಗಡೆ ಸಮಾರಂಭದಲ್ಲಿ ನಿಸಾರ್‌ ಅಹಮದ್‌ ಮಾತನಾಡಿದರು.

ಸಮೂಹ ಮಾಧ್ಯಮಗಳ ದಾಳಿಯಿಂದ ಕನ್ನಡ ಸಾಹಿತ್ಯ ಸೊರಗುತ್ತಿದೆ. ಕನ್ನಡವನ್ನು ಆಡಳಿತ ಭಾಷೆಯನ್ನಾಗಿಸುವ ತನಕ ಕನ್ನಡಕ್ಕೆ ಉಳಿಗಾಲವಿಲ್ಲ ಎಂದು ನಿಸಾರ್‌ ಹೇಳಿದರು.

ಪುಸ್ತಕ ಹೊರತಂದ ಸಪ್ನ ಬುಕ್‌ ಹೌಸ್‌ನ ನಿತಿನ್‌ ಶಾ ಮಾತನಾಡಿ, ನಾನು ಗುಜರಾತಿಗೆ ಸೇರಿದ್ದರೂ ಉತ್ತಮ ಕನ್ನಡ ಸಾಹಿತ್ಯವನ್ನು ಕನ್ನಡಿಗರಿಗೆ ತಲುಪಿಸುತ್ತಿದ್ದೇನೆ ಎಂದರು.

ಪುಸ್ತಕ ಬಿಡುಗಡೆ ಮಾಡಿದ ನಿಸಾರರ ಒಡನಾಡಿ ಪ್ರೊ. ಎಂ.ಎಚ್‌.ಕೃಷ್ಣಯ್ಯ ಮಾತನಾಡಿ, ಇದು 18 ವರ್ಣನೆಯ ಪದ್ಯಗಳ ಸಂಗ್ರಹ. ಟಿ.ವಿ.ವೆಂಕಟಾಚಲ ಶಾಸ್ತ್ರಿಗಳ ಚೆನ್ನುಡಿ ಹಾಗೂ ದೇಜಗೌ ಆವರ ಕುವೆಂಪು ಸೂಕ್ತಿ ಸುಧಾಗಳ ಪರಂಪರೆಗೆ ಈ ಪುಸ್ತಕ ನೂತನ ಸೇರ್ಪಡೆ ಎಂದರು.

ವಿಮರ್ಶಕ ಪ್ರೊ.ವಿವೇಕ್‌ ರೈ, ಸ್ವಾತಂತ್ರ್ಯಹೋರಾಟಗಾರ ಎಚ್‌.ಎಸ್‌.ದೊರೆಸ್ವಾಮಿ ಮತ್ತಿತರರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X