ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಷ್ಟ್ರಕವಿಯ ಸಾಹಿತ್ಯ ಸವಿಯಲೊಂದು ಒಂದು ವರ್ಷದ ಡಿಪ್ಲೋಮಾ

By Staff
|
Google Oneindia Kannada News

ರಾಷ್ಟ್ರಕವಿಯ ಸಾಹಿತ್ಯ ಸವಿಯಲೊಂದು ಒಂದು ವರ್ಷದ ಡಿಪ್ಲೋಮಾ
ಕುವೆಂಪು ಶತಮಾನೋತ್ಸವದ ಸಂಭ್ರಮಕ್ಕೆ ಹಂಪಿ ವಿ.ವಿ.ಯ ಕೊಡುಗೆ

ಬೆಂಗಳೂರು : ಕನ್ನಡ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದ ಕುವೆಂಪು ಸಾಹಿತ ್ಯವನ್ನು ವಿದ್ಯಾರ್ಥಿಗಳ ಅಧ್ಯಯನಕ್ಕಾಗಿ ಹಂಪಿ ವಿಶ್ವವಿದ್ಯಾಲಯ ಒಂದು ವರ್ಷದ ‘ಡಿಪ್ಲೋಮಾ’ ಕೋರ್ಸ್‌ ಆರಂಭಿಸುತ್ತಿದೆ. ಜನ್ಮ ಶತಮಾನೋತ್ಸವದ ಈ ವರ್ಷ ದೂರ ಶಿಕ್ಷಣದಲ್ಲಿ ಅಳವಡಿಸಲಾಗುತ್ತಿದೆ.

ಮಹಾಕವಿ ಕುವೆಂಪುರವರ ಕೃತಿಗಳನ್ನು ಶಾಸ್ತ್ರೀಯವಾಗಿ ಅಧ್ಯಯನ ಮಾಡಲು ಈ ಕೋರ್ಸ್‌ ಸಹಾಯಕವಾಗಲಿದೆ. ನವೆಂಬರ್‌ ತಿಂಗಳಲ್ಲಿ ಡಿಪ್ಲೋಮಾ ಪ್ರವೇಶ ಪ್ರಕ್ರಿಯೆ ಆರಂಭವಾಗಲಿದೆ. ಪ್ರೋ. ಕೀ.ರಂ.ನಾಗರಾಜ್‌ ಮತ್ತು ಕೆ.ಸಿ.ಶಿವಾರೆಡ್ಡಿ ಕುವೆಂಪುರವರ ಹುಟ್ಟೂರಾದ ಶಿವಮೊಗ್ಗ ಜಿಲ್ಲೆಯ ಕುಪ್ಪಳ್ಳಿಯಲ್ಲಿ ಅಧ್ಯಯನ ನಡೆಸಿ ಪಠ್ಯಕ್ರಮ ಸಿದ್ಧಪಡಿಸಿದ್ದಾರೆ.

ಅರ್ಹತೆ : ‘ಕುವೆಂಪು ಸಾಹಿತ್ಯ ಅಧ್ಯಯನ’ ಡಿಪ್ಲೋಮಾ ಮಾಡುವ ವಿದ್ಯಾರ್ಥಿಗಳು ಎಸ್‌.ಎಸ್‌.ಎಲ್‌.ಸಿ ತೇರ್ಗಡೆಯಾಗಿದ್ದು, 18 ವರ್ಷ ಮೇಲ್ಪಟ್ಟಿರಬೇಕು. ವಿಶ್ವವಿದ್ಯಾಲಯವೇ ಪಠ್ಯಕ್ರಮಗಳನ್ನು ವಿದ್ಯಾರ್ಥಿಗಳಿಗೆ ಒದಗಿಸುತ್ತದೆ. ಶೈಕ್ಷಣಿಕ ವರ್ಷದಲ್ಲಿ ವಿಶ್ವವಿದ್ಯಾಲಯ ಆಯೋಜಿಸುವ ಪರೀಕ್ಷೆಯಲ್ಲಿ ಐದು ಪತ್ರಿಕೆಗಳಿದ್ದು, ಪ್ರತಿ ಪತ್ರಿಕೆಗೆ 100 ಅಂಕಗಳು. ಅದರಲ್ಲಿ ಪ್ರಶ್ನೋತ್ತರ ಬರವಣಿಗೆಗೆ 80 ಅಂಕ ಮತ್ತು ಅಸೈನ್‌ಮೆಂಟ್‌ಗಾಗಿ 20 ಅಂಕಗಳೆಂದು ವಿಭಾಗಿಸಲಾಗಿದೆ ಎಂದು ಪ್ರಕಟನೆ ತಿಳಿಸಿದೆ.

ಪಠ್ಯ ಕ್ರಮ ಕೆಳಗಿನಂತಿವೆ ;

  • ಕುವೆಂಪು- ಅಧ್ಯಯನದ ಸಂಸ್ಕೃತಿಕ ಹಿನ್ನೆಲೆ
  • ಕುವೆಂಪು- ಕಾವ್ಯ ಲೋಕ
  • ಕುವೆಂಪು- ಕಥನ ಜಗತ್ತು
  • ಕುವೆಂಪು- ರಂಗ ಪ್ರಪಂಚ
  • ಕುವೆಂಪು- ವಿಚಾರಧಾರೆ
(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X