ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶುಕ್ರವಾರದಿಂದ ತಿರಂಗಯಾತ್ರೆ;ಹುಬ್ಬಳ್ಳಿ ಚೆನ್ನಮ್ಮ ಮೈದಾನದಿಂದ ಶುರು

By Staff
|
Google Oneindia Kannada News

ಶುಕ್ರವಾರದಿಂದ ತಿರಂಗಯಾತ್ರೆ;ಹುಬ್ಬಳ್ಳಿ ಚೆನ್ನಮ್ಮ ಮೈದಾನದಿಂದ ಶುರು
ಹದಿನಾರು ದಿನಗಳಲ್ಲಿ ಜನರಿಗೆ ರಾಷ್ಟ್ರ ಭಕ್ತಿಯ ಪಾಠ : ಬಿಜೆಪಿ ಪ್ರಯತ್ನ

ಬೆಂಗಳೂರು : ರಾಷ್ಟ್ರಿಯತೆ ಬಿಂಬಿಸಲು ಮತ್ತು ಕಳಂಕಿತ ಸಚಿವರನ್ನು ಕೇಂದ್ರ ಸಂಪುಟದಿಂದ ಕೈಬಿಡಬೇಕೆಂದು ಒತ್ತಾಯಿಸಲು ತಿರಂಗ(ತ್ರಿವರ್ಣ) ಯಾತ್ರೆಯನ್ನು, ಉತ್ತರ ಕರ್ನಾಟಕದ ಹುಬ್ಬಳ್ಳಿಯಿಂದ ಉಮಾಭಾರತಿ ಸೆ.10ರ ಶುಕ್ರವಾರ ಆರಂಭಿಸಲಿದ್ದಾರೆ.

ಹದಿನಾರು ದಿನಗಳ ಈ ಯಾತ್ರೆ ಏಳುರಾಜ್ಯಗಳಲ್ಲಿ ಸುಮಾರು 3000 ಕಿ.ಮೀ ಸಾಗಲಿದೆ. ಉಮಾ ಭಾರತಿ ಯಾತ್ರೆಯುದ್ದಕ್ಕೂ 52 ಸಭೆಗಳಲ್ಲಿ ಮಾತನಾಡಲಿದ್ದಾರೆ. ಅಲ್ಲದೇ 200 ರಸ್ತೆ ಬದಿಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಜನರ ಸ್ವಾಗತವನ್ನು ಸ್ವೀಕರಿಸಲಿದ್ದಾರೆ ಎಂದು ಬಿಜೆಪಿ ತಿಳಿಸಿದೆ.

ಲೋಕ ಸಭೆಯ ವಿರೋಧ ಪಕ್ಷದ ನಾಯಕ ಎಲ್‌.ಕೆ.ಆಡ್ವಾಣಿ, ರಾಷ್ಟ್ರಧ್ವಜವನ್ನು ಶುಕ್ರವಾರ ಬೆಳ್ಳಿಗ್ಗೆ ಹುಬ್ಬಳ್ಳಿಯ ಕಿತ್ತೂರು ರಾಣಿ ಚೆನ್ನಮ್ಮ ವಿಗ್ರಹದ ಬಳಿ ಉಮಾ ಭಾರತಿಗೆ ಹಸ್ತಾಂತರಿಸುವರು. ಆ ಮೂಲಕ ಯಾತ್ರೆ ಆರಂಭಗೊಳ್ಳುವುದು.

ಮಹಾರಾಷ್ಟ್ರದಲ್ಲಿ ಆರು ದಿನ, ಮಧ್ಯಪ್ರದೇಶದಲ್ಲಿ ಮೂರು ದಿನ, ಕರ್ನಾಟಕದಲ್ಲಿ ಎರಡು ದಿನ, ಉತ್ತರ ಪ್ರದೇಶ, ಪಂಜಾಬ್‌, ಹರಿಯಾಣದಲ್ಲಿ ಯಾತ್ರೆ ಒಂದೊಂದು ದಿನ ಸಾಗಲಿದೆ ಎಂದು ಯಾತ್ರೆಯ ಮುಖ್ಯನಿರ್ವಹಣೆಯನ್ನು ಹೊಂದಿರುವ ರಾಜ್ಯ ಬಿಜೆಪಿ ಅಧ್ಯಕ್ಷ ಎಚ್‌.ಎನ್‌.ಅನಂತಕುಮಾರ್‌ ಗುರುವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಸಾರ್ಥಕತೆ : ಸೆ.25 ರಂದು ಪಂಡಿತ್‌ ದೀನದಯಾಲ್‌ ಉಪಾಧ್ಯಾಯರ ಜಯಂತಿಯಂದು ಅಮೃತಸರದ ಜಲಿಯನ್‌ ವಾಲಾಬಾಗ್‌ ಗೆ ಯಾತ್ರೆ ತಲುಪಿ ಮುಕ್ತಾಯವಾಗಲಿದೆ. ಪ್ರತಿಯಾಬ್ಬ ಪೌರರು ರಾಷ್ಟ್ರದಲ್ಲಿ ಮೊದಲ ಪ್ರಾಶಸ್ತ್ಯವನ್ನು ರಾಷ್ಟ್ರೀಯತೆಗೆ ನೀಡಬೇಕು. ಹುಸಿ ಜಾತ್ಯತೀತವಾದಿಗಳಿಂದ ರಾಷ್ಟ್ರವನ್ನು ರಕ್ಷಿಸುವುದು, ಸಾವರ್ಕರ್‌ಗಾದ ಅವಮಾನ ಖಂಡಿಸುವುದು, ಅಲ್ಲದೇ ರಾಷ್ಟ್ರಧ್ವಜ ಹಾಗೂ ರಾಷ್ಟ್ರೀಯತೆಯ ಕಾಳಜಿ ಮೂಡಿಸುವುದು ತಿರಂಗಿ ಯಾತ್ರೆಯ ಪ್ರಮುಖ ಉದ್ದೇಶವಾಗಿದೆ ಎಂದು ಅನಂತ್‌ಕುಮಾರ್‌ ತಿಳಿಸಿದ್ದಾರೆ.

(ಪಿಟಿಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X