ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಮಾ ಬಿಡುಗಡೆಯಾದರೆ ಶಾಂತಿ ಭಂಗ ! ನ್ಯಾಯಾಲಯದಲ್ಲಿ ಎಪಿಪಿ

By Staff
|
Google Oneindia Kannada News

ಉಮಾ ಬಿಡುಗಡೆಯಾದರೆ ಶಾಂತಿ ಭಂಗ ! ನ್ಯಾಯಾಲಯದಲ್ಲಿ ಎಪಿಪಿ
ಹುಬ್ಬಳ್ಳಿ ಕ್ಷೋಭೆ : ವಾಣಿಜ್ಯಕ್ಕೆ ಪೆಟ್ಟು , ಪರರಾಜ್ಯದ ವಿದ್ಯಾರ್ಥಿಗಳಿಗೆ ಆತಂಕ

ಬೆಂಗಳೂರು : ಉಮಾಭಾರತಿ ಬಿಡುಗಡೆ ಪ್ರಕರಣದ ಆದೇಶವನ್ನು ಸೆಪ್ಟೆಂಬರ್‌ 6ಕ್ಕೆ ಹುಬ್ಬಳ್ಳಿ ನ್ಯಾಯಾಲಯ ಮುಂದೂಡಿದೆ.

ಉಮಾ ಬಿಡುಗಡೆ ನಂತರದ ಪರಿಣಾಮವನ್ನು ನ್ಯಾಯಾಲಯ ಗಮನಿಸಬೇಕು. ಉಮಾ ಬಿಡುಗಡೆಯ ನಂತರ ಆಕೆ ಹಾಗೂ ಆಕೆಯ ಬೆಂಬಲಿಗರು ಸಮಾಜದಲ್ಲಿ ಶಾಂತಿಭಂಗ ಮಾಡುವ ಸಾಧ್ಯತೆಗಳಿವೆ ಎಂದು ಸಹಾಯಕ ಪಬ್ಲಿಕ್‌ ಪ್ರಾಸಿಕ್ಯೂಟರ್‌ (ಎಪಿಪಿ ) ಎನ್‌. ನಾಗೇಂದ್ರಪ್ಪ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಮೊಕದ್ದಮೆಗೆ ಸಂಬಂಧಿಸಿದ ಲಿಖಿತ ಹೇಳಿಕೆಯನ್ನು ಎಪಿಪಿ ನಾಗೇಂದ್ರಪ್ಪ ಮುಚ್ಚಿದ ಲಕೋಟೆಯಲ್ಲಿ ಶನಿವಾರ ನ್ಯಾಯಾಲಯಕ್ಕೆ ಸಲ್ಲಿಸಿದರು.

ಆರೋಪಿ ಉಮಾಭಾರತಿ ಸೇರಿದಂತೆ 21 ಮಂದಿ ಕಾನೂನು ಭಾಹೀರ ಚಟುವಟಿಕೆಯಲ್ಲಿ ಭಾಗವಹಿಸಿದ್ದರು. ಈ ಪ್ರಕರಣವನ್ನು ರಾಜಕೀಯ ಪ್ರಭಾವ ಹೆಚ್ಚಿ ಸಿಕೊಳ್ಳಲು ಬಳಸಿಕೊಂಡಿದ್ದಾರೆ. ಹುಬ್ಬಳ್ಳಿಯಿಂದ ಜಲಿಯನ್‌ ವಾಲಾಬಾಗ್‌ವರೆಗೆ ತಿರಂಗ ಯಾತ್ರೆ ಆರಂಭಿಸುವುದಾಗಿ ಉಮಾ ಘೋಷಿಸಿದ್ದಾರೆ. ಶಾಂತಿ ಭಂಗವಾಗಿ ಸಾರ್ವಜನಿಕರ ಆಸ್ತಿಪಾಸ್ತಿ ನಷ್ಪವಾಗುವ ಸಂಭವವಿದೆ ಎಂದು ಎಪಿಪಿ ಹೇಳಿದರು.

ಉಮಾಭಾರತಿ ಪರ ವಕೀಲರು- ದೇಶ ಭಕ್ತ ರಾಗಿರುವ ಉಮಾಭಾರತಿ ಇಂಥ ಘಟನೆಗಳಿಗೆ ಅವಕಾಶ ಕಲ್ಪಿಸುವುದಿಲ್ಲ. ಅನಗತ್ಯವಾಗಿ ಈ ಪ್ರಕರಣದಲ್ಲಿ ರಾಜಕೀಯ ಬೆರೆಸಲಾಗಿದೆ. ವಿಶೇಷ ಪ್ರಕರಣವೆಂದು ಪರಿಗಣಿಸಿ ಕೂಡಲೆ ಬಿಡುಗಡೆಗೊಳಿಸುವಂತೆ ಒತ್ತಾಯಿಸಿದರು. ಸೆಪ್ಟೆಂಬರ್‌ 7ರವರೆಗೆ ನ್ಯಾಯಾಂಗ ಬಂಧನದಲ್ಲಿಡುವಂತೆ ನ್ಯಾಯಾಲಯದ ಆದೇಶವಿದ್ದು, ಉಮಾ ಪ್ರಸ್ತುತ ಧಾರವಾಡದಲ್ಲಿದ್ದಾರೆ.

ಹುಬ್ಬಳ್ಳಿ ಕಥೆ : ಹುಬ್ಬಳ್ಳಿಯಲ್ಲಿ ಸುಮಾರು ಹತ್ತು ವರ್ಷಗಳಷ್ಟು ಹಳೆಯದಾದ ಉಮಾಭಾರತಿ ಪ್ರಕರಣದ ಹಿನ್ನೆಲೆ ವಾಣಿಜ್ಯ ಚಟುವಟಿಕೆಗಳಿಗೆ ತೀವ್ರ ಹಿನ್ನಡೆ ಉಂಟಾಗಿದೆ. ಉತ್ತರ ಕರ್ನಾಟಕದ ಹೂಡಿಕೆಯ ಗೇಟ್‌ವೇ ಎನ್ನಲಾಗುವ ಹುಬ್ಬಳ್ಳಿಯಲ್ಲಿ ರಾಷ್ಟ್ರಿಯ ಭಾವನೆಗಳ ಸುಳಿಯಲ್ಲಿ ಶಾಂತಿ ಭಂಗವಾಗಿ ಅದರ ಪರಿಣಾಮ ಸ್ಥಳೀಯ ವ್ಯಾಪಾರಗಳ ಮೇಲೆ ಗಂಭೀರವಾಗಿದೆ.

ವ್ಯಾಪಾರಗಳ ಕತೆಯಿದಾದರೆ, ನಗರದಲ್ಲಿನ ಇಂಜಿನಿಯರಿಂಗ್‌, ಮೆಡಿಕಲ್‌ ಮತ್ತಿತರ ಕಾಲೇಜುಗಳಲ್ಲಿ ಪ್ರವೇಶಕ್ಕೆ ವಿದ್ಯಾರ್ಥಿಗಳ ಪೋಷಕರು ಸುರಕ್ಷತೆಯಿಲ್ಲವೆಂದು ಹಿಂದೆ ಮುಂದೆ ನೋಡುತ್ತಿದ್ದಾರೆ. ಸದ್ಯದಲ್ಲಿ ಸುಮಾರು ಶಾಲಾಕಾಲೇಜುಗಳಿಗೆ ಅಘೋಷಿತ ರಜೆ ದೊರೆದಂತಾಗಿದೆ.

ಕಳೆದ ಐದಾರು ವರ್ಷಗಳಿಂದ ತಣ್ಣಗಿದ್ದ ಹುಬ್ಬಳ್ಳಿ ಈದ್ಗಾ ಮೈದಾನದ ವಿವಾದದ ಹಿನ್ನೆಲೆ ಬಿಸಿಯಾಗಿದೆ. ಸ್ಥಳೀಯ ಸಂಗತಿ ರಾಜಕೀಯದ ಬಣ್ಣದಿಂದ ರಾಷ್ಟ್ರೀಯ ವಿವಾದವಾಗಿ ಬೆಳೆದಿದೆ.

ಅವಳಿ ನಗರಗಳಾದ ಹುಬ್ಬಳ್ಳಿ ಹಾಗೂ ಧಾರವಾಡಗಳಲ್ಲಿ ಈ ಪ್ರಕರಣದಿಂದಾಗಿ ಪ್ರತಿದಿನ 50-60 ಕೋಟಿ ರೂ.ಗಳ ವ್ಯಾಪಾರ ವಹಿವಾಟುಗಳಿಗೆ ಅಡಚಣೆಯಾಗಿದೆ ಎಂದು ಕರ್ನಾಟಕ ವಾಣೆಜ್ಯ ಮತ್ತು ಕೈಗಾರಿಕೆ ಮಂಡಳಿ(ಕೆಸಿಸಿಐ) ಅಧ್ಯಕ್ಷ ಎಸ್‌.ಕೆ. ಮನವಳ್ಳಿ ತಿಳಿಸಿದ್ದಾರೆ.

1994 ಆಗಸ್ಟ್‌ 17ರಂದು ಈದ್ಗಾ ಮೈದಾನದಲ್ಲಿ ಜರುಗಿದ ಧ್ವಜಾರೋಹಣ ಹಿನ್ನೆಲೆಯ ಗಲಭೆಯಲ್ಲಿ ಆರು ಮಂದಿ ಮೃತ ಪಟ್ಟಿದ್ದರು.

(ಪಿಟಿಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X