ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಂಧ ವಿಮುಕ್ತಿ : ಭಾರತೀಯ ಒತ್ತೆಯಾಳುಗಳಿಗೆ ಹೊಸ ಗಾಳಿ-ಬೆಳಕು

By Staff
|
Google Oneindia Kannada News

ಬಂಧ ವಿಮುಕ್ತಿ : ಭಾರತೀಯ ಒತ್ತೆಯಾಳುಗಳಿಗೆ ಹೊಸ ಗಾಳಿ-ಬೆಳಕು
ಹೊಸ ಪ್ರಪಂಚ ಕಂಡ ಭಾರತೀಯ ಒತ್ತೆಯಾಳುಗಳು

ನವದೆಹಲಿ : ಇರಾಕ್‌ ಉಗ್ರಗಾಮಿ ಸಂಘಟಣೆಯಿಂದ ಅಪಹರಣಗೊಂಡಿದ್ದ ಮೂವರು ಭಾರತೀಯ ಒತ್ತೆಯಾಳುಗಳು ಬುಧವಾರ ಬಿಡುಗಡೆಯಾಗುವ ಮೂಲಕ ಪ್ರಕರಣ ಸುಖಾಂತ್ಯಗೊಂಡಿದೆ. 42 ದಿನಗಳ ಸೆರೆಯ ನಂತರ ಬಿಡುಗಡೆಯಾದ ಮೂವರು ಭಾರತೀಯ ಟ್ರಕ್‌ ಡ್ರೆೃವರ್‌ಗಳು ತಂತಮ್ಮ ಮನೆಗಳಿಗೆ ವಾಪಸ್ಸಾಗಿದ್ದಾರೆ.

ಕುವೈತ್‌ನ ಟ್ರಾನ್ಸ್‌ಪೋರ್ಟ್‌ ಕಂಪನಿಯ ನೌಕರರಾಗಿರುವ ಈ ಮೂವರು ಸೇರಿದಂತೆ ಏಳು ಮಂದಿಯನ್ನು ಜುಲೈ 21ರಂದು ‘ಇಸ್ಲಾಮಿಕ್‌ ಸೀಕ್ರೆಟ್‌ ಆಮಿ ಹೋಲ್ಡರ್ಸ್‌ ಆಫ್‌ ಬ್ಲಾಕ್‌ ಬ್ಯಾನರ್ಸ್‌’ ಎಂಬ ಸಂಘಟನೆ ಅಪಹರಿಸಿತ್ತು. ಬುಧವಾರ ಬಿಡುಗಡೆಯಾದ ಭಾರತೀಯರು ಕುವೈತ್‌ನ ಭಾರತೀಯ ದೂತವಾಸ ಕಚೇರಿಯಲ್ಲಿ ತಂಗಿದ್ದು, ತಾಯ್ನಾಡು ಮತ್ತು ಕುಟುಂಬದವರನ್ನು ಸೇರುವ ಹಂಬಲ ವ್ಯಕ್ತಪಡಿಸಿದ್ದಾರೆ.

ಶುಕ್ರವಾರ ಕುವೈತ್‌ ಏರಲೈನ್ಸ್‌ ಮೂಲಕ ಭಾರತಕ್ಕೆ ಆಗಮಿಸಲಿರುವ ತಿಲಕರಾಜ್‌, ಅಂತರ್ಯಾಮಿ ಮತ್ತು ಸುಖ್‌ದೇವ ಸಿಂಗ್‌ ಬಿಡುಗಡೆಗಾಗಿ ಉಗ್ರರಿಗೆ 5,00,000 ಡಾಲರ್‌ಗಳನ್ನು ಕೆಜಿಎಲ್‌ ಕಂಪನಿ ಖರ್ಚಮಾಡಿದೆ. ತನ್ನ ನೌಕರರಿಗೆ ದೀರ್ಘರಜೆ ನೀಡಿದೆ. ಅಲ್ಲದೇ ಕೆಲಸಕ್ಕೆ ಮರಳಬೇಕೇ, ಬೇಡವೇ ಎಂದು ನಿರ್ಣಯಿಸುವ ಅಧಿಕಾರವನ್ನೂ ಸಹಾ ಅವರಿಗೆ ನೀಡಿದೆ. ಸೆರೆವಾಸದಲ್ಲಿ ಚಿತ್ರಹಿಂಸೆ ಗುರಿಯಾಗಿದ್ದ ಈ ಭಾರತೀಯರು ಬಿಡುಗಡೆಗೊಂಡು ತವರು ಸೇರಿದ್ದಾರೆ.

(ಏಜೆನ್ಸಿಸ್‌)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X